ಆಪಲ್ ಕಂಪನಿಯ AI ತಜ್ಞರಿಗೆ ಬೇಡಿಕೆ: ಉದ್ಯೋಗ ಉಳಿಸಿಕೊಳ್ಳಲು ಭಾರಿ ಸಂಬಳದ ಆಫರ್

ಮಲ್ಟಿನ್ಯಾಷನಲ್ ಕಾರ್ಪೋರೇಷನ್ ಮತ್ತು ಟೆಕ್ ಕಂಪನಿ ಆಪಲ್ ಇಂಕ್ (Apple Inc.) ನಲ್ಲಿ ಕೆಲ್ಸ ಗಿಟ್ಟಿಸಿಕೊಳ್ಬೇಕು ಅನ್ನೋದು ಯುವಕರ ಕನಸು. ಇತ್ತ ಆಪಲ್ ಕಂಪನಿಗೆ ಇರೋ ಉದ್ಯೋಗಿಗಳನ್ನು ಹೇಗೆ ಉಳಿಸಿಕೊಳ್ಳೋದು ಎಂಬ ಸವಾಲು. ಎಐ, ಅನೇಕ ಉದ್ಯೋಗಿಗಳ ಕೆಲಸ ಕಸಿದುಕೊಂಡಿದೆ.

ಇನ್ನೊಂದೆಡೆ ಇರುವ ಬುದ್ಧಿವಂತ ಉದ್ಯೋಗಿಗಳು ಕೆಲ್ಸ ಬಿಟ್ಟು ಹೋಗ್ತಿದ್ದಾರೆ. ಸದ್ಯ ಆಪಲ್ ಕಂಪನಿಯ ನಾಲ್ಕು ಸೀನಿಯರ್ ಎಐ ಸಂಶೋಧಕರು ಕೆಲ್ಸ ಬಿಟ್ಟಿದ್ದಾರೆ. ಅವರು ಮೆಟಾ ಟೀಂ ಸೇರಿದ್ದಾರೆ. ಈ ಬೆಳವಣಿಗೆ ಆಗ್ತಿದ್ದಂತೆ ಉದ್ಯೋಗಿಗಳ ಸಂಬಳ ಹೆಚ್ಚಿಸುವ ಒತ್ತಾಯ ಕೇಳಿ ಬರ್ತಿದೆ.
ಆಪಲ್ ಇಂಕ್. ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಎಲೆಕ್ಟ್ರಾನಿಕ್ಸ್ ಮತ್ತು ಸಾಫ್ಟ್ವೇರ್ ಸೇವೆಗಳಿಕೆ ಕಂಪನಿ ಹೆಸರುವಾಸಿ. 2024ರಲ್ಲಿ ಕಂಪನಿ ಆಪಲ್ ಇಂಟೆಲಿಜೆನ್ಸ್ ಘೋಷಣೆ ಮಾಡಿತ್ತು. ಸಿರಿಯ ಅಪ್ಡೇಟ್ ತುಂಬಾ ನಿಧಾನವಾಗಿದೆ. ಆಪಲ್ ಎಐ ಹುಡುಕಾಟ ಇನ್ನೂ ಪ್ರಾರಂಭಿಕ ಹಂತದಲ್ಲೇ ಇದೆ. ಇದಕ್ಕೆ ಹೋಲಿಕೆ ಮಾಡಿದ್ರೆ ಮೆಟಾ ಹಾಗೂ ಗೂಗಲ್ ವೇಗವಾಗಿ ಮುನ್ನುಗ್ಗುತ್ತಿದೆ.
ಆಪಲ್, ಮಶಿನ್ ಲರ್ನಿಂಗ್ ಹಾಗೂ ಎಐ (AI) ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಿಗಳ ನೇಮಕ ಮಾಡಿಕೊಳ್ತಿದೆ. ಉದ್ಯೋಗಿಗಳಿಗೆ ಆಕರ್ಷಕ ಸಂಬಳ ಪ್ಯಾಕೇಜ್, ಸ್ಟಾಕ್ ಗ್ರಾಂಟ್ಸ್, ಪ್ರೊಡಕ್ಟ್ ಡಿಸ್ಕೌಂಟ್, ಉತ್ತಮ ಕೆಲ್ಸದ ವಾತಾವರಣ ಸೇರಿದಂತೆ ಕೆಲ ಭತ್ಯೆಗಳನ್ನು ಕಂಪನಿ ನೀಡ್ತಿದೆ. ತನ್ನ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಕಂಪನಿ ಸಂಬಳ ಹೆಚ್ಚಿಸುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಕಂಪನಿ ಎಂಜಿನಿಯರ್ಸ್ ಹಾಗೂ ಡೇಟಾ ಅನಲಿಸ್ಟ್ ಗಳಿಗೆ ಎಷ್ಟು ಸಂಬಳ ನೀಡುತ್ತೆ ಎಂಬುದನ್ನು ದೃಢಪಡಿಸಿಲ್ಲ. ಆದ್ರೆ ಬಿಸಿನೆಸ್ ಇನ್ಸೈಡರ್ ಈ ಬಗ್ಗೆ ವರದಿ ಮಾಡಿದೆ.
ವರದಿ ಪ್ರಕಾರ, ಆಪಲ್ನಲ್ಲಿ ಸಾಫ್ಟ್ವೇರ್ ಡೆವಲಪ್ಮೆಂಟ್ ಎಂಜಿನಿಯರ್ ( ಸಂಬಳ 1,15,90,097 ರೂಪಾಯಿಯಿಂದ 3,31,81,125 ರೂಪಾಯಿರವರೆಗೆ ಇದೆ. ಇದರ ಜೊತೆಗೆ, ಇಲ್ಲಿ ಡೇಟಾ ಸೈಂಟಿಸ್ಟ್ನ ಸಂಬಳ 92,46,665 ರೂಪಾಯಿಯಿಂದ 2,82,43,723 ರೂಪಾಯಿವರೆಗೆ ಇದೆ.
ಮಶಿನ್ ಲರ್ನಿಂಗ್ ಎಂಜಿನಿಯರ್ ಗೂ ಇಲ್ಲಿ ಉತ್ತಮ ಸಂಭಾವನೆ ಇದೆ. ಅವರಿಗೆ 1,25,34,873 ರೂಪಾಯಿಯಿಂದ 2,73,47,223 ರೂಪಾಯಿರವರೆಗೆ ಸಂಬಳವನ್ನು ನೀಡಲಾಗ್ತಿದೆ. ಮೆಷಿನ್ ಲರ್ನಿಂಗ್ ಸಂಶೋಧಕರ ಸಂಬಳ 99,94,682 ರೂಪಾಯಿಯಿಂದ 2,73,47,223 ರೂಪಾಯಿವರೆಗೆ ಇದೆ. ಇನ್ನು ಸಾಫ್ಟ್ವೇರ್ ಎಂಜಿನಿಯರಿಂಗ್ ಮ್ಯಾನೇಜರ್ನ ಸಂಬಳ 1,46,01,498 ರಿಂದ 3,31,72,680 ರೂಪಾಯಿಗಳ ನಡುವೆ ಇದೆ. ಮಾನವ ಇಂಟರ್ಫೇಸ್ ಡಿಸೈನರ್ನ ಸಂಬಳ 1,18,60,660 ರೂಪಾಯಿಯಿಂದ 4,10,39,288 ರೂಪಾಯಿ ಒಳಗಿದೆ. ಹಾರ್ಡ್ವೇರ್ ಸಿಸ್ಟಮ್ ಎಂಜಿನಿಯರ್ನ ಸಂಬಳ 1,09,93,010 ರೂಪಾಯಿಯಿಂದ 3,31,72,680 ರೂಪಾಯಿ ಇದೆ.
ಹುದ್ದೆ ಹೆಸರು – ಸಂಬಳ ಶ್ರೇಣಿ (USD)
ಮೆಷಿನ್ ಲರ್ನಿಂಗ್ ಎಂಜಿನಿಯರ್ – $1,43,100 – $3,12,200
ಹ್ಯೂಮನ್ ಇಂಟರ್ಫೇಸ್ ಡಿಸೈನರ್ – $1,35,400 – $4,68,500
ಡೇಟಾ ಸೈಂಟಿಸ್ಟ್ – $1,05,550 – $3,22,400
AR/VR ಅಭಿವೃದ್ಧಿ – $1,29,805 – $3,12,200
ಸಾಫ್ಟ್ವೇರ್ ಎಂಜಿನಿಯರ್ – $1,32,267 – $3,78,700
ಹಾರ್ಡ್ವೇರ್ ಎಂಜಿನಿಯರ್ – $1,25,495 – $3,78,700
ಎಲ್ಲ ಕ್ಷೇತ್ರಕ್ಕೂ ಸದ್ಯ ಎಐ ಲಗ್ಗೆ ಇಟ್ಟಿದೆ. ಇದ್ರಿಂದ ಎಐ ಕ್ಷೇತ್ರದಲ್ಲಿ ಈಗಾಗಲೇ ತಮ್ಮ ಛಾಪು ಮೂಡಿಸಿರುವ ಕೆಲಸಗಾರರಿಗೆ ಬೇಡಿಕೆ ಹೆಚ್ಚಾಗಿದೆ. ಉತ್ತಮ ಸಂಬಳದ ಜೊತೆ ಅವರನ್ನು ದೊಡ್ಡ ಕಂಪನಿಗಳು ಕೆಲಸಕ್ಕೆ ಆಯ್ಕೆ ಮಾಡಿಕೊಳ್ತಿವೆ.