ಕ್ಯಾನ್ಸರ್ ನಡುವೆ ಧ್ವನಿ ನೀಡದ್ದ ಅಪರ್ಣಾ ದ್ವನಿ ಈಗ ಹಳದಿ ಮೆಟ್ರೋ ಲೈನ್‌ನಲ್ಲಿ

ನಟಿ, ನಿರೂಪಕಿ ಅಪರ್ಣಾ (Aparna) ಅವರು ಯಾವಾಗಲೂ ನೆನಪಿನಲ್ಲಿ ಇರುವ ವ್ಯಕ್ತಿ. ಅವರು ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಅವರು ಕಳೆದ ವರ್ಷ ಜುಲೈನಲ್ಲಿ ನಿಧನ ಹೊಂದಿದರು. ಅವರಿಗೆ ಕ್ಯಾನ್ಸರ್ ಆಗಿತ್ತು. ಕ್ಯಾನ್ಸರ್ ಮಧ್ಯೆಯೂ ಯೆಲ್ಲೋ ಲೈನ್ ಮೆಟ್ರೋಗೆ ಅವರು ಧ್ವನಿ ನೀಡಿದ್ದರು.

ಹೀಗಾಗಿ, ಹಳದಿ ಮಾರ್ಗದಲ್ಲೂ ಈಗ ಅಪರ್ಣಾ ಧ್ವನಿ ಕೇಳಿಸುತ್ತಿದೆ ಅನ್ನೋದು ವಿಶೇಷ. ಇದನ್ನು ಕೇಳಿ ಅವರ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಹಳದಿ ಬಣ್ಣದ ಮಾರ್ಗ ಭಾನುವಾರ (ಆಗಸ್ಟ್ 10) ಉದ್ಘಾಟನೆಗೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಲೋಕಾರ್ಪಣೆ ಮಾಡಿದರು. ಆರ್ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಈ ರೈಲು ಸಂಪರ್ಕ ಕಲ್ಪಿಸುತ್ತದೆ. ಒಟ್ಟೂ 16 ನಿಲ್ದಾಣಗಳನ್ನು ಈ ಮೆಟ್ರೋ ರೈಲು ಹಾದು ಹೋಗುತ್ತದೆ. ಈ ಮಾರ್ಗದಲ್ಲಿ ಅಪರ್ಣಾ ಧ್ವನಿ ಪ್ರತಿಧ್ವನಿಸಲಿದೆ.
ಅಪರ್ಣಾ ಧ್ವನಿ ತುಂಬಾನೇ ಸುಮಧುರವಾಗಿತ್ತು. ಅವರು ಆಯಂಕರಿಂಗ್ಗೆ ನಿಂತರೆ ಬಾಯಿಯಿಂದ ಮುತ್ತುಗಳು ಉದುರುತ್ತಿವೆ ಎಂದನಿಸುತ್ತಿತ್ತು. ಹಸಿರು ಹಾಗೂ ಪರ್ಪಲ್ ಲೈನ್ ಮೆಟ್ರೋಗೆ ಅಪರ್ಣಾ ಅವರೇ ಧ್ವನಿ ನೀಡಿದ್ದರು. ಇದು ಮೆಟ್ರೋದ ಹೈಲೈಟ್ ಕೂಡ ಆಗಿತ್ತು. ಹಳದಿ ಬಣ್ಣದ ಮೆಟ್ರೋಗೂ ಅವರದ್ದೇ ಧ್ವನಿ ಇರಬೇಕು ಎಂಬುದು ಕನ್ನಡಿಗರ ಆಸೆ ಆಗಿತ್ತು. ಆ ಆಸೆ ಈಡೇರಿದೆ.
ಹಸಿರು ಹಾಗೂ ಪರ್ಪಲ್ ಜೊತೆ ಹಳದಿ ಮಾರ್ಗಕ್ಕೂ ಅಪರ್ಣಾ ಧ್ವನಿ ಬೇಕು ಎಂದು ಅನೇಕರು ಒತ್ತಾಯಿಸಿದ್ದರು. ‘ಹಳೆಯ ಮಾರ್ಗದಲ್ಲಿ ಅಪರ್ಣಾ ಧ್ವನಿ ಮುಂದುವರಿಸುತ್ತೇವೆ. ಹಳದಿ ಬಣ್ಣಕ್ಕೆ ಕಷ್ಟ’ ಎಂದು ಮೆಟ್ರೋ ಅಧಿಕಾರಿಗಳು ಈ ಮೊದಲು ಹೇಳಿದ್ದರು. ಆದರೆ, ಆದರೆ, 2024ರ ಏಪ್ರಿಲ್-ಮೇ ನಲ್ಲಿ ಮೆಟ್ರೋದ ತಾಂತ್ರಿಕ ತಂಡ ಅಪರ್ಣಾ ಬಳಿ ತೆರೆಳಿ ಅವರ ಧ್ವನಿಯನ್ನು ರೆಕಾರ್ಡಿಂಗ್ ಮಾಡಿಕೊಂಡಿತ್ತು. ಕ್ಯಾನ್ಸರ್ ನಿಂದ ಬಳಲುತ್ತಿದ್ದರೂ ಅಪರ್ಣಾ ಅವರು ತಮ್ಮ ಧ್ವನಿ ನೀಡಿ ಕರ್ತವ್ಯ ಮರೆದಿದ್ದಾರೆ. ಅವರನ್ನು ಈಗ ಎಲ್ಲರೂ ಶ್ಲಾಘಿಸುತ್ತಿದ್ದಾರೆ.
ಸದ್ಯ ಹಸಿರು ಬಣ್ಣದ ಲೈನ್ ನಾಗಸಂದ್ರದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ವರೆಗೆ ಕಾರ್ಯ ನಿರ್ವಹಿಸುತ್ತಿದ್ದು, 32 ಮೆಟ್ರೋ ಸ್ಟೇಷನ್ಗಳು ಇವೆ. ಪರ್ಪಲ್ ಲೈನ್ ವೈಟ್ ಫೀಲ್ಡ್ನಿಂದ ಚೆಲ್ಲಘಟ್ಟದವರೆಗೆ ಕಾರ್ಯ ನಿರ್ವಹಿಸುತ್ತಿದ್ದು 37 ಮೆಟ್ರೋ ಸ್ಟೇಷನ್ಗಳು ಇವೆ. ಈಗ ಹಳದಿ ಮೆಟ್ರೋ ಸೇರಿದರೆ 85 ಸ್ಟೇಷನ್ಗಳಿಗೆ ಅವರದ್ದೇ ಧ್ವನಿ ಇರಲಿದೆ.
