ಭಾರತಕ್ಕೆ ಅಪಾಚೆ ಹೆಲಿಕಾಪ್ಟರ್ ಆಗಮಿಸಲು ಕಾಲಘಟ್ಟ ಪೂರ್ಣ: ಗಡಿಭಾಗದಲ್ಲಿ ನಿಗಾ

ನವದೆಹಲಿ:ಆಪರೇಷನ್ ಸಿಂಧೂರ್ ಬಳಿಕ ಸೇನೆಯು ಪಾಕಿಸ್ತಾನದ ಗಡಿಯತ್ತ ಮತ್ತಷ್ಟು ಗಮನಹರಿಸಿದೆ. ಇದೀಗ ಅಮೆರಿಕ ಜೊತೆ ಅಪಾಚೆ ಹೆಲಿಕಾಪ್ಟರ್ಗಳಿಗಾಗಿ (Apache Helicopters) ಮಾಡಿಕೊಂಡ ಒಪ್ಪಂದದಂತೆ ಕೊನೆಗೂ ಮೊದಲ ಬ್ಯಾಚ್ ಭಾರತಕ್ಕೆ ಆಗಮಿಸಲಿವೆ.
ಅವುಗಳನ್ನು ಪಾಕಿಸ್ತಾನದ ಗಡಿಯಲ್ಲಿ ನಿಯೋಜಿಸುವ ಸಾಧ್ಯತೆ ಇದೆ. 15 ತಿಂಗಳಿಗಿಂತ ಹೆಚ್ಚು ವಿಳಂಬದ ನಂತರ, ಅಪಾಚೆ ದಾಳಿ ಹೆಲಿಕಾಪ್ಟರ್‌ಗಳು ಶೀಘ್ರದಲ್ಲೇ ಭಾರತಕ್ಕೆ ಆಗಮಿಸುವ ಸಾಧ್ಯತೆಯಿದೆ.

2020ರಲ್ಲಿ ಅಮೆರಿಕದೊಂದಿಗೆ $600 ಮಿಲಿಯನ್ ಡಾಲರ್ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಭಾರತೀಯ ಸೇನೆಗೆ 2024ರ ಮೇ-ಜೂನ್ ಹೊತ್ತಿಗೆ ಆರು ಅಪಾಚೆ ಹೆಲಿಕಾಪ್ಟರ್‌ಗಳು ಬರಬೇಕಿತ್ತು. ಆದರೆ, ಕೆಲವು ಅಡಚಣೆಯಿಂದಾಗಿ ಡಿಸೆಂಬರ್ 2024ಕ್ಕೆ ಹೆಲಿಕಾಪ್ಟರ್ ಬರಲಿವೆ ಎಂದು ಅಮೆರಿಕ ಹೇಳಿತ್ತು. ಆಗಲೂ ಹೆಲಿಕಾಪ್ಟರ್‌ಗಳು ಬಂದಿರಲಿಲ್ಲ. ಆದರೆ ಈ ತಿಂಗಳೊಳಗೆ ಭಾರತೀಯ ಸೇನೆಗೆ ಹೆಲಿಕಾಪ್ಟರ್ಗಳನ್ನು ಹಸ್ತಾಂತರಿಸಬಹುದು ಎಂದು ಹೇಳಲಾಗುತ್ತಿದೆ.

ಅಪಾಚೆ ಹೆಲಿಕಾಪ್ಟರ್ ವಿಶೇಷವೇನು?
ಭಾರತೀಯ ವಾಯುಪಡೆಯ ಅವಶ್ಯಕತೆಗಳಿಗೆ ತಕ್ಕಂತೆ ನಿರ್ಮಿಸಲಾಗಿದೆ. ಭಾರತೀಯ ಸೇನೆಯಲ್ಲಿರೋ ಅಟ್ಯಾಕಿಂಗ್ ಕಾಪ್ಟರ್‌ಗಳಲ್ಲೇ ಇದು ಅತ್ಯಾಧುನಿಕ ಎನಿಸಿಕೊಂಡಿದೆ. ಏಕಕಾಲಕ್ಕೆ 4 ಏರ್-ಟು-ಏರ್ ಕ್ಷಿಪಣಿ ಉಡಾವಣೆ ಕ್ಷಮತೆ ಇದೆ. 12.7 ಎಂಎಂ ಕ್ಯಾಲಿಬರ್ ಗನ್‌ಗಳ ಗುಂಡಿನ ದಾಳಿಯನ್ನು ತಡೆಯುವ ಸಾಮರ್ಥ್ಯವಿದೆ. ರೆಕ್ಕೆಗಳಿಗೆ 23 ಎಂಎಂ ಗನ್‌ಗಳ ಗುಂಡು ತಡೆವ ಸಾಮರ್ಥ್ಯವಿದೆ. ಹಗಲು, ರಾತ್ರಿ, ಮಳೆ, ಬಿಸಿಲುಗಳಲ್ಲಿ ಕಾರ್ಯಾಚರಣೆ ನಡೆಸಬಲ್ಲದು. ಬೆಟ್ಟ ಗುಡ್ಡಗಳ ಪ್ರದೇಶಗಳಲ್ಲೂ ಸರಾಗವಾಗಿ ಹಾರಾಡುತ್ತದೆ.
ಅಪಾಚೆ ಹೆಲಿಕಾಪ್ಟರ್ ಸಾಮರ್ಥ್ಯವೇನು?
30 ಎಂಎಂನ, 200 ರೌಂಡ್‌ಗಳ ಎಂ230 ಕೆನಾನ್ಗಳಿದ್ದು, ಅಗತ್ಯಕ್ಕೆ ತಕ್ಕಷ್ಟು ಏರ್-ಟು-ಏರ್ ಮಾದರಿಯ ಕ್ಷಿಪಣಿಗಳನ್ನು ಹಾರಿಸುತ್ತದೆ. ಆರ್ ಹೆಲ್‌ಫೈರ್ 2 ಮಾದರಿಯ ಟ್ಯಾಂಕರ್ ನಾಶ ಮಾಡುವ ಕ್ಷಿಪಣಿ ಇದೆ. ಎಮ್ 9 ಸೈಡ್‌ವಿಂಗರ್ ಮತ್ತು ಎಮ್ 92 ವಿಂಗರ್ ಅಥವಾ ನಾಲ್ಕು ಮಿಸ್ಟ್ರಲ್ ಮಾದರಿ ಕ್ಷಿಪಣಿಗಳಿವೆ.
