ನವದೆಹಲಿಯಲ್ಲಿ 9ನೇ ಆವೃತ್ತಿಯ ಇಂಡಿಯಾ ಮೊಬೈಲ್ ಕಾಂಗ್ರೆಸ್ ಆರಂಭ: ಪ್ರಧಾನಿ ಮೋದಿ ಉದ್ಘಾಟನೆ; ‘ಇನ್ನೋವೇಟ್ ಟು ಟ್ರಾನ್ಸ್‌ಫಾರ್ಮ್’ ಈ ವರ್ಷದ ಥೀಮ್!

ನವದೆಹಲಿ: ಇಂಡಿಯಾ ಮೊಬೈಲ್ ಕಾಂಗ್ರೆಸ್(India Mobile Congress)ನ 9 ನೇ ಆವೃತ್ತಿ ಇಂದು ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ. ಇದು ಅಕ್ಟೋಬರ್ 8 ರಿಂದ 11 ರವರೆಗೆ ನಡೆಯಲಿದೆ.ತಿ ವರ್ಷದಂತೆ, ಈ ಕಾರ್ಯಕ್ರಮದ ಗಮನವು ಟೆಲಿಕಾಂ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಕೇಂದ್ರೀಕೃತವಾಗಿರಲಿದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ ಪ್ರತಿ ವರ್ಷ ಅನೇಕ ಪ್ರಮುಖ ತಂತ್ರಜ್ಞಾನ ಕಂಪನಿಗಳು ಭಾಗವಹಿಸುವ ತಂತ್ರಜ್ಞಾನ ಕಾರ್ಯಕ್ರಮವಾಗಿದೆ.

ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) ಟೆಲಿಕಾಂ ಮೇಲೆ ವಿಶೇಷ ಗಮನ ಹರಿಸಿದೆ. ಈ ವರ್ಷ, ಈ ಕಾರ್ಯಕ್ರಮವನ್ನು ದೆಹಲಿಯ ಯಶೋಭೂಮಿ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಸಲಾಗುತ್ತಿದೆ. ಈ ಮೆಗಾ ಕಾರ್ಯಕ್ರಮವನ್ನು ದೂರಸಂಪರ್ಕ ಇಲಾಖೆ (DoT) ಮತ್ತು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (COAI) ಜಂಟಿಯಾಗಿ ಆಯೋಜಿಸುತ್ತಿವೆ.
ಪ್ರಪಂಚದಾದ್ಯಂತದ ಅನೇಕ ಕಂಪನಿಗಳು ಭಾಗವಹಿಸಿವೆ. ಈ ವರ್ಷದ ಇಂಡಿಯಾ ಮೊಬೈಲ್ ಕಾಂಗ್ರೆಸ್‌ನ ಥೀಮ್ ಇನ್ನೋವೇಟ್ ಟು ಟ್ರಾನ್ಸ್‌ಫಾರ್ಮ್ ಇದು ಭಾರತದ ಡಿಜಿಟಲ್ ರೂಪಾಂತರವನ್ನು ಪ್ರತಿಬಿಂಬಿಸುತ್ತದೆ. ದೇಶದ ಯುವ ಪೀಳಿಗೆ ತಂತ್ರಜ್ಞಾನ ಕ್ರಾಂತಿಗೆ ಮಹತ್ವದ ಕೊಡುಗೆ ನೀಡುತ್ತಿದೆ, ಹಿಂದೆ ಭವಿಷ್ಯ ಎಂದರೆ ಮುಂದಿನ ಶತಮಾನ ಅಥವಾ ಮುಂದಿನ 10-20 ವರ್ಷಗಳು ಎಂದರ್ಥವಾಗಿತ್ತು ಆದರೆ ತಂತ್ರಜ್ಞಾನ ಎಷ್ಟು ವೇಗವಾಗಿ ಬದಲಾಗುತ್ತಿದೆ ಎಂದರೆ ನಮ್ಮ ಭವಿಷ್ಯ ನಮ್ಮ ಕಣ್ಣಮುಂದೆಯೇ ಇದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಒಂದು ಲೋಟ ಚಹಾಗಿಂತ ಕಡಿಮೆ ಬೆಲೆಯಲ್ಲಿ ಒಂದು ಜಿಬಿ ಡಾಟಾ ಸಿಗಲಿದೆ ಎಂದರು.