ಪಾಕಿಸ್ತಾನದಲ್ಲಿ ಮತ್ತೊಬ್ಬ ಟಿಕ್ಟಾಕ್ ತಾರೆ ಸುಮಿರಾ ರಜಪೂತ್ ಹತ್ಯೆ: ಆಘಾತಕಾರಿ ಬೆಳವಣಿಗೆ!

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮತ್ತೋರ್ವ ಸಾಮಾಜಿಕ ಜಾಲತಾಣದ ಪ್ರಭಾವಿ (Social Media Influencer) ಮಹಿಳೆಯನ್ನು ಕೊ*ಲೆ ಮಾಡಲಾಗಿರುವ ಆರೋಪ ಕೇಳಿ ಬಂದಿವೆ. ಟಿಕ್ಟಾಕ್ ತಾರೆ ಸುಮಿರಾ ರಜಪೂತ್ ಹೆಸರಿನ ಮಹಿಳೆಯ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಪಾಕಿಸ್ತಾನದ ಸಿಂಧ್ನ ಘೋಟ್ಕಿ ಜಿಲ್ಲೆಯ ಬಾಗೋ ವಾಹ್ ಪ್ರದೇಶದಲ್ಲಿ ಸುಮಿರಾ (Pakistani TikTok Star Sumeera Rajput) ಮೃತದೇಹ ಪತ್ತೆಯಾಗಿದೆ. ಕೆಲ ತಿಂಗಳ ಹಿಂದೆಯಷ್ಟೇ ಟಿಕ್ಟಾಕ್ ತಾರೆ ಸನಾ ಯೂಸುಫ್ ಎಂಬ ಯುವತಿಯನ್ನು ಗುಂಡಿಕ್ಕಿ ಹ*ತ್ಯೆ ಮಾಡಲಾಗಿತ್ತು. ಸನಾ ಯುಸೂಫ್ ಮನೆಯೊಳಗೆ ನುಗ್ಗಿದ ಆಗುಂತಕ ಯುವತಿ ಮೇಲೆ ಗುಂಡಿನ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದನು. ಇದೀಗ ಮತ್ತೋರ್ವ ಯುವತಿಯ ಹ*ತ್ಯೆಯಾಗಿದೆ.

ಪಾಕಿಸ್ತಾನದ ಮಾಧ್ಯಮಗಳ ವರದಿ ಪ್ರಕಾರ, ತನ್ನನ್ನು ಮದುವೆ ಆಗುವಂತೆ ವ್ಯಕ್ತಿಯೋರ್ವ ಒತ್ತಡ ಹಾಕುತ್ತಿದ್ದನಂತೆ. ಸಮೀರಾ ರಜಪೂತ್ ಮದುವೆಗೆ ಒಪ್ಪದ ಹಿನ್ನೆಲೆ ಈ ಕೊಲೆ ನಡೆದಿರಬಹುದು. ಆಕೆಯ ಆಹಾರದಲ್ಲಿ ವಿಷ ಸೇರಿಸಿ ನೀಡಿರುವ ಅನುಮಾನಗಳು ವ್ಯಕ್ತವಾಗಿವೆ. ಪೊಲೀಸರು ಸಹ ಇದು ಕೊ*ಲೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತ ಸಮೀರಾ ರಜಪೂತ್ ಗೆ 15 ವರ್ಷದ ಮಗಳು ಸಹ ಇದ್ದಾಳೆ. ವಿಷಕಾರಿ ಮಾತ್ರೆಗಳನ್ನು ನೀಡಿ ಸಮೀರಾಳ ಕೊ*ಲೆ ನಡೆದಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಹೇಳಿದ್ದಾರೆ.
ಇದು ವಿಷಪ್ರಾಷಾಣ ಎಂದ ಸಮೀರಾ ಮಗಳು
ಸಮೀರಾ ರಜಪೂತ್ ಮಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದು, ಟಿಕ್ಟಾಕ್ನಲ್ಲಿ 58 ಸಾವಿರ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ತನ್ನ ತಾಯಿಗೆ ವ್ಯಕ್ತಿಯೋರ್ವ ವಿಷ ಪ್ರಾಷಾಣ ಮಾಡಿದ್ದಾನೆ ಎಂದು ಸಮೀರಾ ಮಗಳು ಆರೋಪಿಸಿದ್ದಾಳೆ. ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಘೋಟ್ಕಿ ಪೊಲೀಸ್ ಅಧಿಕಾರಿ ಅನ್ವರ್ ಶೇಖ್ ಮಾಹಿತಿ ನೀಡಿದ್ದಾರೆ.
5 ತಿಂಗಳಲ್ಲಿ ಮೂವರ ಕೊ*ಲೆ
ಪಾಕಿಸ್ತಾನದಲ್ಲಿ ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರೋದು ಸುರಕ್ಷಿತವಾಗಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತು ಆಗಿದೆ. ಇತ್ತೀಚೆಗಷ್ಟೇ 17 ವರ್ಷದ ಸಾಮಾಜಿಕ ಮಾಧ್ಯಮ ಪ್ರಭಾವಿ ಸನಾ ಯೂಸುಫ್ ಅವರನ್ನು ಅವರ ಮನೆಯಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಸನಾಗೆ ಟಿಕ್ಟಾಕ್ನಲ್ಲಿ 7.4 ಲಕ್ಷ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಸುಮಾರು 5 ಲಕ್ಷ ಫಾಲೋವರ್ಗಳಿದ್ದರು. ಕಳೆದ ಐದು ತಿಂಗಳಲ್ಲಿ ಪಾಕಿಸ್ತಾನದಲ್ಲಿ ಮಹಿಳಾ ಸಾಮಾಜಿಕ ಮಾಧ್ಯಮ ಪ್ರಭಾವಿಯೊಬ್ಬರ ಹತ್ಯೆಯ ಮೂರನೇ ಪ್ರಕರಣ ಇದಾಗಿದೆ.
ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?
ಘೋಟ್ಕಿ ಜಿಲ್ಲಾ ಪೊಲೀಸ್ ಅಧಿಕಾರಿ ಅನ್ವರ್ ಶೇಖ್, ಮೃತ ಮಹಿಳೆಯ ಹೇಳಿಕೆಯನ್ನು ದೃಢಪಡಿಸಿದ್ದಾರೆ. ಆದ್ರೆ ಈವರೆಗೆ ಯಾವುದೇ ಎಫ್ಐಆರ್ ದಾಖಲಿಸಿಕೊಳ್ಳಲಾಗಿಲ್ಲ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಘೋಟ್ಕಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಮುಹಮ್ಮದ್ ಅನ್ವರ್ ಖೈತಾನ್ ಮಾತನಾಡಿ, ‘ಸಮೀರಾ ರಜಪೂತ್ ಅವರ ಮರಣೋತ್ತರ ಪರೀಕ್ಷೆ(Postmortem examination) ನಡೆಸಲಾಗಿದ್ದು, ವಿಷಪ್ರಾಶನದಿಂದಾಗಿ ಅವರ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ.
