Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಹಾರಾಷ್ಟ್ರದಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಘಟನೆ: ಮದುವೆಯಾದ 3 ವಾರಕ್ಕೆ ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಪತ್ನಿ

Spread the love

Crime: ಮದುವೆಯಾದ ಮೂರೇ ವಾರದಲ್ಲಿ ಕೊಡಲಿಯಿಂದ ತಲೆಗೆ ಹೊಡೆದು ಪತಿಯನ್ನು ಹ*ತ್ಯೆಗೈದ ಪತ್ನಿ

ಮಹಾರಾಷ್ಟ್ರ: ರಾಜಾ ರಘುವಂಶಿ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮಧುಚಂದ್ರಕ್ಕೆಂದು ಹೋಗಿದ್ದ ವೇಳೆ ಪತ್ನಿ ಸೋನಂ ತನ್ನ ಗಂಡನನ್ನೇ ಹತ್ಯೆ ಮಾಡಿದ್ದಾಳೆ. ಈ ಪ್ರಕರಣ ಎಲ್ಲೆಡೆ ಸುದ್ದಿಯಾಗಿರುವ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ನಡೆದ ಘೋರ ಘಟನೆಯೊಂದು ಬೆಳಕಿಗೆ ಬಂದಿದೆ.

ಮದುವೆಯಾದ ಮೂರೇ ವಾರದಲ್ಲಿ ಮಹಿಳೆಯೊಬ್ಬರು ತನ್ನ ಪತಿಯನ್ನು ಕೊಡಲಿಯಿಂದ ಹೊಡೆದು ಪ್ರಾಣವನ್ನೇ ಕಳೆದಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿರಿವುದು ವರದಿಯಾಗಿದೆ.

ಮೇ.23 ರಂದು ಅನಿಲ್ ಲೋಖಂಡೆ – ರಾಧಿಕಾ ಲೋಖಂಡೆ ವಿವಾಹವಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನದಲ್ಲಿ ಪತಿ -ಪತ್ನಿ ನಡುವೆ ಮಾತು ಮಾತಿಗೂ ಜಗಳ ಶುರುವಾಗಿದೆ. ಜೂನ್‌ 10ರ ರಾತ್ರಿಯಂದು ಇಬ್ಬರ ನಡುವೆ ಜಗಳ ಜೋರಾಗಿದೆ.

ಜಗಳವಾಡಿದ ನಂತರ ಅನಿಲ್ ಲೋಖಂಡೆ ಅವರು ಮಧ್ಯರಾತ್ರಿ ನಿದ್ರೆಗೆ ಜಾರಿದ್ದಾರೆ. ಇದೇ ವೇಳೆ ಸಿಟ್ಟಿನಲ್ಲಿದ್ದ ಪತ್ನಿ ರಾಧಿಕಾ ಕೊಡಲಿಯನ್ನು ಎತ್ತಿಕೊಂಡು ತನ್ನ ಪತಿಯ ತಲೆಗೆ ಹೊಡೆದಿದ್ದಾಳೆ. ಇದರಿಂದ ಅನಿಲ್‌ ಸ್ಥಳದಲ್ಲೇ ಮೃ*ತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಕೃತ್ಯ ನಡೆಸಿದ ಬಳಿಕ ರಾಧಿಕಾ ತನ್ನ ಸಂಬಂಧಿಗೆ ಕರೆ ಮಾಡಿ ಘಟನೆಯ ಕುರಿತು ಹೇಳಿದ್ದಾಳೆ. ವಿಚಾರ ಪೊಲೀಸರಿಗೆ ಗೊತ್ತಾಗಿ ಬುಧವಾರ(ಜೂ.11) ರಂದು ರಾಧಿಕಾಳನ್ನು ಬಂಧಿಸಿ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ ಎಂದು ವರದಿ ತಿಳಿಸಿದೆ.

ರಾಧಿಕಾ ವಿರುದ್ಧ ಬಿಎನ್‌ಎಸ್ (ಕೊ*ಲೆ) ಸೆಕ್ಷನ್ 103 (1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಕೊ*ಲೆಗೆ ಕೌಟುಂಬಿಕ ಕಲಹ ಕಾರಣ ಎಂದು ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *