Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಿರ್ಮಾಪಕ ಉಮಾಪತಿಯಿಂದ ದರ್ಶನ್‌ಗೆ ಮತ್ತೊಂದು ಪರೋಕ್ಷ ಟಾಂಗ್: ‘ನಿರ್ಮಾಪಕರು, ನಿರ್ದೇಶಕರು ಸೇರಿ ಸ್ಟಾರ್‌ ಹುಟ್ಟುಹಾಕುತ್ತಾರೆ’

Spread the love

ಮೈಸೂರು: ಒಬ್ರು ಹೇಳಿದ್ರೂ ನಿರ್ಮಾಪಕರು ಇದ್ರೆ ಸ್ಟಾರ್ ಆಗಲ್ಲ ಸಿನಿಮಾ ಆಗುತ್ತೆ ಅಂತ. ನಿರ್ಮಾಪಕರು, ನಿರ್ದೇಶಕರು ಸೇರಿದಾಗ ಮಾತ್ರ ಸ್ಟಾರನ್ನ ಹುಟ್ಟುಹಾಕಬಹುದು ಎಂದು ನಿರ್ಮಾಪಕ ಉಮಾಪತಿ (Umapathy Srinivas) ಮತ್ತೊಮ್ಮೆ ನಟ ದರ್ಶನ್ (Darshan) ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.

ನಿನ್ನೆ ಮೈಸೂರಲ್ಲಿ (Mysuru) ನಡೆದ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ನಿರ್ಮಾಪಕ ಡಿ. ಉಮಾಪತಿ ಪ್ರತಿ ಪದದಲೂ ದರ್ಶನ್‌ಗೆ ಟಾಂಗ್ ಕೊಟ್ಟರು. ಸ್ಟಾರ್‌ಗಳನ್ನ ಮಾಡುವುದು ನಿರ್ಮಾಪಕರು, ನಿರ್ದೇಶಕರು ಹಾಗೂ ಜನರು. ಒಂದು ಸಿನಿಮಾಗೆ ದೊಡ್ಡ ಸ್ಟಾರ್ ಅಂದ್ರೆ ಅದು ನಿರ್ಮಾಪಕರು ಹಾಗೂ ನಿರ್ದೇಶಕ (Director) ಮಾತ್ರ ಎಂದು ನಟ ದರ್ಶನ್ ಹೆಸರು ಹೇಳದೇ ಟಾಂಗ್ ಕೊಟ್ಟರು.

ಒಬ್ಬರು ಹೇಳಿದ್ರು ನಿರ್ಮಾಪಕರು ಇದ್ರೆ ಸ್ಟಾರ್ ಆಗಲ್ಲ ಸಿನಿಮಾ (Cinema) ಆಗುತ್ತೆ ಅಂತ, ನಿರ್ಮಾಪಕರು ನಿರ್ದೇಶಕರು ಸೇರಿದಾಗ ಮಾತ್ರ ಸ್ಟಾರನ್ನ ಹುಟ್ಟುಹಾಕಬಹುದು ಎಂದರು.

ಸಿನಿಮಾ ಸ್ಟಾರ್ ಆದ ಮೇಲೆ ಅನ್ನದಾತರು ಬೇಕಾದಷ್ಟು ಜನರು ಆಗಿಬಿಡುತ್ತಾರೆ. ಆಮೇಲೆ ನಿರ್ಮಾಪಕರನ್ನ ಬಿಟ್ಟು ಫ್ಯಾನ್ ಕ್ಲಬ್ ಗಳನ್ನು ಕಟ್ಟಿಕೊಳ್ಳುತ್ತಾರೆ. ಒಂದಷ್ಟು ಕ್ಯಾಂಪೇನ್‌ಗಳಿಗೆ ಕರೆದುಕೊಂಡು ಹೋಗಿ ಅನ್ನ ಹಾಕಿದ್ರೆ ಅವರನ್ನು ಅನ್ನದಾತರು ಅಂತಾರೇ. ಪ್ರತಿ ನಿತ್ಯ ಅನ್ನ ಕೊಡುವವರು ಅನ್ನದಾತರು. ವರ್ಷಕ್ಕೆ ಒಂದು ಬಾರಿ ಅನ್ನ ಹಾಕುವವರು ಯಾವತ್ತು ಅನ್ನದಾತರು ಆಗಲು ಸಾಧ್ಯವಿಲ್ಲ ಎಂದು ಕುಟುಕಿದರು. 

ʻದಿನದ ಕೂಳನ್ನ ನಂಬಿಕೊಂಡು ವರ್ಷದ ಕೂಳನ್ನ ಕಳೆದುಕೊಂಡ್ರುʼ ಎಂಬ ನಿದರ್ಶನ ನಿಮ್ಮ‌ ಮುಂದೆ ಇದೆ ಎಂದು ದರ್ಶನ್ ಚುನಾವಣಾ ಕ್ಯಾಂಪೇನ್‌ಗಳ ಬಗ್ಗೆ ವ್ಯಂಗ್ಯವಾಡಿದರು. ನಾನು ಯಾರ ಬಳಿಯಾದ್ರೂ ಸಹಾಯ ತೆಗೆದುಕೊಂಡ್ರೆ ಹತ್ತು ಜನದ ಮುಂದೆ ಹೇಳುತ್ತೇನೆ. ಸಹಾಯ ಮಾಡಿದವರನ್ನ ಸಾಯುವವರೆಗೆ ನೆನಪು ಮಾಡಿಕೊಳ್ಳುತ್ತೇನೆ. ಸಹಾಯ ತೆಗೆದುಕೊಂಡು ಮೇಲೆ ನಾವು ಮರೆಯಬಾರದು. ಕೃತಜ್ಞತೆಯನ್ನು ಮರೆತರೆ ಜೀವನಕ್ಕೆ ಅರ್ಥವೇ ಇರುವುದಿಲ್ಲ ಎಂದು ಹೇಳಿದರು.

ತಮ್ಮ ಮುಂದಿನ ಚಿತ್ರ ನಿರ್ಮಾಣದ ಕುರಿತ ಪ್ರಶ್ನೆಗೆ, ಸದ್ಯದಲ್ಲೇ ಇಬ್ಬರು ಹೀರೋ ಜೊತೆ ಸಿನಿಮಾ ಮಾಡುತ್ತೇನೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಿಲ್ಲ. ಪ್ಯಾನ್ ಇಂಡಿಯಾ ಮಾಡಲು ಹೋದವರು ಜೇಬು ಖಾಲಿಮಾಡಿಕೊಂಡು ಬಂದಿದ್ದಾರೆ. ಎಷ್ಟೇ ಆದರೂ ಹಳೇ ಹೆಂಡತಿಯ ಪಾದವೇ ಗತಿ ಎಂಬಂತೆ ನಮಗೆ ಕರ್ನಾಟಕ ಜನನೇ ಗಟ್ಟಿ ಎಂದರು.


Spread the love
Share:

administrator

Leave a Reply

Your email address will not be published. Required fields are marked *