Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪೃಥ್ವಿ ಶಾಗೆ ಮತ್ತೊಂದು ವಿವಾದ: ವಿಕೆಟ್ ಸಂಭ್ರಮಿಸಿದ್ದಕ್ಕೆ ಸಹ ಆಟಗಾರನ ಮೇಲೆ ಬ್ಯಾಟ್‌ನಿಂದ ಹಲ್ಲೆಗೆ ಯತ್ನ

Spread the love

ಸದಾ ಒಂದಲ್ಲ ಒಂದು ವಿವಾದೊಂದಿಗೆ ಸುದ್ದಿಯಲ್ಲಿರುವ ಪೃಥ್ವಿ ಶಾ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅದು ಸಹ ಆಟಗಾರನೊಬ್ಬನಿಗೆ ಬ್ಯಾಟ್​ನಲ್ಲಿ ಹೊಡೆಯುವ ಮೂಲಕ. ಎಂಸಿಎ ಸ್ಟೇಡಿಯಂನಲ್ಲಿ ನಡೆದ ರಣಜಿ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಮಹಾರಾಷ್ಟ್ರ ಹಾಗೂ ಮುಂಬೈ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಮಹಾರಾಷ್ಟ್ರ ಪರ ಕಣಕ್ಕಿಳಿದಿದ್ದ ಪೃಥ್ವಿ ಶಾ 220 ಎಸೆತಗಳಲ್ಲಿ 22 ಫೋರ್ ಹಾಗೂ 3 ಸಿಕ್ಸರ್​ಗಳೊಂದಿಗೆ 181 ರನ್ ಬಾರಿಸಿದ್ದರು. ಈ ಹಂತದಲ್ಲಿ ದಾಳಿಗಿಳಿದ ಸರ್ಫರಾಝ್ ಖಾನ್ ಸಹೋದರ ಮುಶೀರ್ ಖಾನ್ ಪೃಥ್ವಿ ಶಾ ವಿಕೆಟ್ ಕಬಳಿಸಿದರು.

ಪ್ರಮುಖ ಆಟಗಾರನ ವಿಕೆಟ್ ಸಿಗುತ್ತಿದ್ದಂತೆ ಮುಶೀರ್ ಖಾನ್ ಸಂಭ್ರಮಿಸಿದ್ದಾರೆ. ಇದರಿಂದ ಕೋಪಗೊಂಡ ಪೃಥ್ವಿ ಶಾ ಯುವ ಆಟಗಾರನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಅತ್ತ ಮುಶೀರ್ ಖಾನ್ ಸಹ ಆಟಗಾರರತ್ತ ಸಾಗಿದರೂ ಹಿಂಬಾಲಿಸಿದ ಪೃಥ್ವಿ ಬ್ಯಾಟ್​ನಿಂದ ದಾಳಿ ಮಾಡಲು ಯತ್ನಿಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಷ್ಟೇ ಅಲ್ಲದೆ ಮುಶೀರ್ ಖಾನ್ ಜೊತೆ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಸಹ ಆಟಗಾರರು ಹಾಗೂ ಅಂಪೈರ್ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಆ ಬಳಿಕ ಮತ್ತೋರ್ವ ಮುಂಬೈ ಆಟಗಾರ ಕೂಡ ಪೃಥ್ವಿ ಶಾ ಜೊತೆ ವಾಕ್ಸಮರಕ್ಕೆ ಇಳಿದಿರುವುದು ವಿಡಿಯೋದಲ್ಲಿ ಕಾಣಬಹುದು.

ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭ್ಯಾಸ ಪಂದ್ಯದಲ್ಲೇ ಆಕ್ರಮಣಕಾರಿಯಾಗಿ ವರ್ತಿಸಿರುವ ಪೃಥ್ವಿ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಸದಾ ಒಂದಲ್ಲೊಂದು ವಿವಾದದಿಂದ ಸುದ್ದಿಯಲ್ಲಿರುತ್ತಿದ್ದ ಪೃಥ್ವಿ ಶಾ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *