ತೆಲಂಗಾಣದಲ್ಲಿ ಮತ್ತೊಂದು ಬಸ್ ಬೆಂಕಿಗಾಹುತಿ

ತೆಲಂಗಾಣ:ತೆಲಂಗಾಣ ರಾಜ್ಯದಲ್ಲಿ ರಸ್ತೆ ಅಪಘಾತಗಳ ಸರಣಿ ಮುಂದುವರಿದಿದ್ದು, ಇಂದು ಮುಂಜಾನೆ ಮತ್ತೊಂದು ಖಾಸಗಿ ಬಸ್‌ಗೆ ಬೆಂಕಿ ತಗುಲಿದ ಘಟನೆ ನಡೆದಿದೆ.ವಿಜಯವಾಡ-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚೌಟುಪ್ಪಲ್ ಬಳಿ ಈ ಘಟನೆ ನಡೆದಿದೆ.

ಇದು ಒಡಿಶಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಆಗಿದ್ದು, ಹೈದರಾಬಾದ್‌ನಿಂದ ಒಡಿಶಾದ ಬ್ರಹ್ಮಪುರಕ್ಕೆ ಹೊರಟಿತ್ತು.
ಬಸ್‌ನ ಎಂಜಿನ್ ಭಾಗದಿಂದ ಹೊಗೆ ಬರುತ್ತಿರುವುದನ್ನು ಚಾಲಕ ಗಮನಿಸಿದ್ದಾನೆ.
ತಕ್ಷಣವೇ ಚಾಲಕ ಬಸ್ಸನ್ನು ರಸ್ತೆಯ ಬದಿಗೆ ನಿಲ್ಲಿಸಿ, ಬಸ್ಸಿನಲ್ಲಿದ್ದ 29 ಪ್ರಯಾಣಿಕರನ್ನು ಕೆಳಕ್ಕೆ ಇಳಿಸಲು ನೆರವಾಗಿದ್ದಾನೆ.
ಪ್ರಯಾಣಿಕರು ಕೆಳಗಿಳಿದ ತಕ್ಷಣವೇ ಬೆಂಕಿ ಇಡೀ ಬಸ್ಸಿಗೆ ವ್ಯಾಪಿಸಿದೆ.
ಈ ಸಕಾಲಿಕ ನಿರ್ಧಾರದಿಂದಾಗಿ ಬಸ್‌ನಲ್ಲಿದ್ದ ಎಲ್ಲಾ 29 ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಆದರೆ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಈ ಅವಘಡವು, ಅದೇ ವಾರದಲ್ಲಿ ತೆಲಂಗಾಣ/ಆಂಧ್ರ ಪ್ರದೇಶ ಗಡಿಯಲ್ಲಿ ನಡೆದ ಬಸ್ ಅಪಘಾತ ಮತ್ತು ಬೆಂಕಿ ಅವಘಡಗಳ ಸರಣಿಯಲ್ಲಿದೆ. ಹಿಂದೆ ಹೈದರಾಬಾದ್-ಬೆಂಗಳೂರು ಮಾರ್ಗದ ಬಸ್‌ಗೆ ಬೆಂಕಿ ತಗುಲಿ 21 ಜನರು ಸಜೀವ ದಹನವಾಗಿದ್ದರು. ನಂತರ ಟಿಪ್ಪರ್-ಬಸ್ ಅಪಘಾತದಲ್ಲಿ 24 ಜನರು ಸಾವನ್ನಪ್ಪಿದ್ದರು.