Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಾಂತಾರ ಸುಂದರಿ ರುಕ್ಮಿಣಿ ವಸಂತ್‌ಗೆ ಒಲಿದ ಮತ್ತೊಂದು ಬ್ರ್ಯಾಂಡ್: ರಿಲಯನ್ಸ್ ರಿಟೇಲ್‌ನ ‘ಅವಂತ್ರ’ ಸೀರೆಗಳ ಹೊಸ ರಾಯಭಾರಿಯಾಗಿ ಚೆಲುವೆ ಮಿಂಚು!

Spread the love

ಮುಂಬೈ: ರಿಲಯನ್ಸ್ ರಿಟೇಲ್‌ನ (Reliance Retail) ಅವಂತ್ರ (Avantra) ಎಂಬುದು ಸಮಕಾಲೀನ ಸೀರೆಗಳನ್ನು ಖರೀದಿಸಲು ಅತ್ಯುತ್ತಮ ತಾಣ. ಭಾರತೀಯ ಮಹಿಳೆಯರ ಆಯ್ಕೆಗೆ ಹೇಳಿ ಮಾಡಿಸಿದ ಸ್ಥಳ ಇದು. ಇದೀಗ ಹೊಸದಾಗಿ ಹಬ್ಬದ ಅಭಿಯಾನವನ್ನು ಅವಂತ್ರ ಶುರು ಮಾಡಿದ್ದು, ದೇಶದೆಲ್ಲೆಡೆ ಮನೆ ಮಾತಾಗಿರುವ ಚೆಲುವೆ, ಕಾಂತಾರ (Kantara Chapter 1) ಸಿನಿಮಾದ ರಾಜಕುಮಾರಿ ಹಾಗೂ ನಟಿ ರುಕ್ಮಿಣಿ ವಸಂತ್ (Rukmini Vasanth) ರಾಯಭಾರಿ ಆಗಿದ್ದಾರೆ.

ಹಬ್ಬಗಳು ಬಂತೆಂದರೆ ಸಂಭ್ರಮ. ಅದರಲ್ಲೂ ಹೆಣ್ಣುಮಕ್ಕಳಿಗೆ ವಿಶೇಷವಾದ ಸಂದರ್ಭ ಇದಾಗಿರುತ್ತದೆ. ಹೌದು, ಈಗಿನ ಮಹಿಳೆಯಲ್ಲಿ ಆತ್ಮವಿಶ್ವಾಸ ಕಾಣಬಹುದು. ತನ್ನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ, ಗುರುತನ್ನು ತೆರೆದಿಡುವ ಹಾಗೂ ತನ್ನ ಭಾವನೆಯನ್ನು ಅಭಿವ್ಯಕ್ತಪಡಿಸುವುದಕ್ಕಾಗಿ ಹಬ್ಬದ ಋತುವಿನಲ್ಲಿ ಅವಂತ್ರಗಿಂತ ಮತ್ತೊಂದು ಉತ್ತಮ ಆಯ್ಕೆ ಬೇರಾವುದೂ ಇಲ್ಲ. ಈ ಅಭಿಯಾನವನ್ನು “ಮೈ ವೇ” (My way) ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಚಾರ ಮಾಡಲಾಗುತ್ತಿದೆ. 

ಈ ಅಭಿಯಾನದ ಜಾಹೀರಾತಿನಲ್ಲಿ ಪ್ರತಿ ಮಹಿಳೆಗೂ ಹೇಗೆ ಈ ಕ್ಷಣವನ್ನು ತಮ್ಮದಾಗಿಸಿಕೊಳ್ಳುವುದು? ತಮ್ಮದೇ ಸ್ಥಾನವನ್ನು ಹೇಗೆ ಗುರುತಿಕೊಳ್ಳುವುದು ಎಂಬುದನ್ನು ಮುಖ್ಯ ವಿಷಯವಾಗಿ ತೆಗೆದುಕೊಳ್ಳಲಾಗಿದೆ. ಭಾರತೀಯ ಹಬ್ಬಗಳ ಅದ್ಭುತ ಸಂಭ್ರಮದ ಹಿನ್ನೆಲೆಯಲ್ಲಿ ಕುಟುಂಬಗಳು ಒಗ್ಗೂಡುವುದು, ಸಂಪ್ರದಾಯಗಳ ಆಚರಣೆ ಮತ್ತು ನಗು ಈ ಎಲ್ಲವನ್ನು ತುಂಬ ಚೆನ್ನಾಗಿ ಚಿತ್ರಿಸಲಾಗಿದೆ. ಈ ಎಲ್ಲ ಖುಷಿಯ ವಾತಾವರಣದ ಮಧ್ಯೆ ಸೌಂದರ್ಯದ ಖನಿಯಾದ ರುಕ್ಮಿಣಿ ವಸಂತ್ ಅವರು ಶ್ರೀಮಂತಿಕೆಯ- ಅವಂತ್ರದ ರೇಷ್ಮೆ ಸೀರೆಯುಟ್ಟು ಮಿರಮಿರ ಮಿಂಚಿದ್ದಾರೆ.

ಅವಂತ್ರ ಒಂದು ಬ್ರ್ಯಾಂಡ್ ಆಗಿ ಐವತ್ತಕ್ಕೂ ಹೆಚ್ಚಿನ ಬಗೆಯ ಸೀರೆಗಳನ್ನು ಒಂದೇ ಜಾಗದಲ್ಲಿ ಖರೀದಿ ಮಾಡಬಹುದು. ತುಂಬ ವಿಶಿಷ್ಟವಾದ ಮತ್ತು ಸಾಂಸ್ಕೃತಿಕವಾಗಿಯೂ ಮುಖ್ಯವಾದ ಸ್ಥಳ ಇದಾಗಿರಲಿದೆ. ಭಾರತೀಯ ಹೊಸ ತಲೆಮಾರಿನ ಮಹಿಳೆಯರನ್ನು ಅವಂತ್ರ ತುಂಬ ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಈಗಿನ ಮಹಿಳೆಯರಿಗೆ ತಮ್ಮ ಗುರುತನ್ನು ತಮ್ಮದೇ ಆದ ರೀತಿಯಲ್ಲಿ ವ್ಯಕ್ತಪಡಿಸಲು ಹಾಗೂ ಭಾವಾಭಿವ್ಯಕ್ತಿ ಸಂಕೇತವಾಗಿ ಈ ಸೀರೆಗಳು ಕಾಣುತ್ತವೆ

ರುಕ್ಮಿಣಿ ಅವರನ್ನು ತಮ್ಮ ಬ್ರ್ಯಾಂಡ್ ರಾಯಭಾರಿ ಆಗಿ, ಅವಂತ್ರದ ಮುಖವಾಗಿ ಪರಿಚಯಿಸುವುದಕ್ಕೆ ಸಂಸ್ಥೆಯು ಹೆಮ್ಮೆ ಪಡುತ್ತದೆ. ಈ ಅಭಿಯಾನಕ್ಕೆ ಅವರನ್ನು ಸ್ವಾಗತಿಸುತ್ತದೆ. ಅವರು ತಮ್ಮ ವಿಶ್ವಾಸದ ಮೂಲಕ, ಪರಂಪರೆ ಆಳವಾದ ಬೇರುಗಳ ಜೊತೆಗೆ ಗುರುತಿಸಿಕೊಂಡು ಹೆಮ್ಮೆಯನ್ನು ಪ್ರತಿನಿಧಿಸುತ್ತಾರೆ. ಈ ಎಲ್ಲ ಮೌಲ್ಯಗಳು ಹೇಳಿ ಮಾಡಿಸಿದಂತೆ ಅವಂತ್ರದ ಸಿದ್ಧಾಂತಗಳ ಜೊತೆಗೆ ಹೊಂದಿಕೊಳ್ಳುತ್ತವೆ. ಸಂಪ್ರದಾಯವನ್ನು ಆಧುನಿಕ ಸ್ಪರ್ಶದ ಜೊತೆಗೆ ಸಂಭ್ರಮಿಸಬೇಕು ಎಂಬುದು ಅವಂತ್ರದ ಧ್ಯೇಯವಾಗಿದೆ. ಭಾರತದಾದ್ಯಂತ ರುಕ್ಮಿಣಿ ವಸಂತ್ ಜನಪ್ರಿಯತೆ ಹೆಚ್ಚಾಗಿದೆ. ಸೌಂದರ್ಯದಲ್ಲೂ ಮನಸೂರೆಗೊಂಡಿದ್ದಾರೆ. ಇವೆಲ್ಲ ಇಂದಿನ ಮಹಿಳೆಯರಲ್ಲಿ ಹೊಸ ಶಕ್ತಿಯನ್ನು ಮತ್ತು ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ.

ಅವಂತ್ರದ ಮಾರ್ಕೆಟಿಂಗ್ ಹೆಡ್ ಮಾತನಾಡಿ, ಈ ಹಬ್ಬದ ಋತುವಿನ ಟಿವಿ ಜಾಹೀರಾತು ಸುಂದರ, ಮೃದುವಾದ ಕ್ಷಣದ ಧ್ವನಿಯ ವಿಸ್ತರಣೆ ಆಗುತ್ತದೆ. ಈ ಎಲ್ಲದರ ಮಧ್ಯೆ ನಿಮ್ಮನ್ನು ನೀವು ಗೌರವಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ ಎಂದಿದ್ದಾರೆ. ಅವಂತ್ರದ ಜಗತ್ತಿನಲ್ಲಿ ಒಮ್ಮೆ ಸುತ್ತಾಡುವ ಮೂಲಕ ಆ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ. ಅದಕ್ಕಾಗಿ ಒಮ್ಮೆ ಕ್ಲಿಕ್ ಮಾಡಿ: https://www.instagram.com/avantraofficial/


Spread the love
Share:

administrator

Leave a Reply

Your email address will not be published. Required fields are marked *