Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹೊಸ ಹಿಟಾಚಿ ಕೆಟ್ಟಿದ್ದಕ್ಕೆ ಆಕ್ರೋಶ: ಶೋರೂಂಗೆ ಬೀಗ ಹಾಕಿದ ಗ್ರಾಹಕ!

Spread the love

ತುಮಕೂರು: ಹಿಟಾಚಿ ಖರೀದಿ ಮಾಡಿದ ಕೆಲವೇ ತಿಂಗಳಲ್ಲಿ ಯಂತ್ರದಲ್ಲಿ ತಾಂತ್ರಿಕ ದೋಷ ಉಂಟಾಗಿದೆ ಎಂದು ಆರೋಪಿಸಿ ಆಕ್ರೋಶಗೊಂಡ ಗ್ರಾಹಕನೊಬ್ಬ ಶೋರೂಂಗೆ ಬೀಗ ಹಾಕಿದ ಘಟನೆ ತುಮಕೂರು ಜಿಲ್ಲೆಯ ಅಂತರಸನಹಳ್ಳಿ ಬಳಿಯ ಟಾಟಾ ಹಿಟಾಚಿ ಶೋರೂಂನಲ್ಲಿ ನಡೆದಿದೆ. ಬೆಳಗ್ಗೆ ಶೋರೂಮ್​ಗೆ ಬಂದ ಗ್ರಾಹಕ ಸಿಬ್ಬಂದಿಯನ್ನೆಲ್ಲ ಹೊರ ಕಳುಹಿಸಿ ಬೀಗ ಜಡಿದಿದ್ದಾರೆ.

ಗುಬ್ಬಿ ಮೂಲದ ಗಿರೀಶ್ ಎಂಬವರು ಐದು ತಿಂಗಳ ಹಿಂದೆ ಸುಮಾರು 52 ಲಕ್ಷ ರೂಪಾಯಿ ನೀಡಿ ಹೊಸ ಹಿಟಾಚಿ ಖರೀದಿಸಿದ್ದರು. 7 ಲಕ್ಷ ರೂಪಾಯಿ ಡೌನ್ ಪೇಮೆಂಟ್ ನೀಡಿ, ಪ್ರತಿ ತಿಂಗಳು 1.15 ಲಕ್ಷ ರೂ. ಇಎಂಐ ಕಟ್ಟುತ್ತಿದ್ದರು. ಆದರೆ ಯಂತ್ರ ಖರೀದಿಸಿದ ಮೂರೇ ತಿಂಗಳಲ್ಲಿ ದೋಷ ಕಾಣಿಸಿಕೊಂಡು ಕೆಲಸ ಮಾಡದೇ ನಿಂತಿದೆ ಎಂದು ಅವರು ಆರೋಪಿಸಿದ್ದಾರೆ.

ಯಂತ್ರದಲ್ಲಿ ಸಮಸ್ಯೆ ಉಂಟಾದ ಬಳಿಕ ಹಲವು ಬಾರಿ ಶೋರೂಂ ಹಾಗೂ ಕಂಪನಿಯನ್ನು ಸಂಪರ್ಕಿಸಿದರೂ ಸಮರ್ಪಕ ಸ್ಪಂದನೆ ಸಿಗಲಿಲ್ಲ. ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಅಲೆದಾಡಿದರೂ ಹಿಟಾಚಿ ಸರಿಪಡಿಸಲಾಗಿಲ್ಲ ಎಂದು ಗಿರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಲು ಗಿರೀಶ್ ಬೆಳಿಗ್ಗೆ ಶೋರೂಂಗೆ ಭೇಟಿ ನೀಡಿದರು. ಆದರೆ ತಕ್ಷಣ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಶೋರೂಂಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಅಲ್ಲದೆ, ಶೋರೂಂ ಬಾಗಿಲಿಗೆ ಹಿಟಾಚಿ ಯಂತ್ರವನ್ನು ಅಡ್ಡಲಾಗಿ ನಿಲ್ಲಿಸಿ ಗಮನ ಸೆಳೆದರು

‘ಹಿಟಾಚಿ ಸರಿಪಡಿಸಿ ಕೊಡಬೇಕು, ಇಲ್ಲವಾದರೆ ನಾವು ಕಟ್ಟಿದ ಹಣವನ್ನು ವಾಪಸ್ ನೀಡಬೇಕು. ಯಂತ್ರ ಖರೀದಿ ಮಾಡಲು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದೇನೆ. ಕಂಪನಿ ಹೇಳುವುದೊಂದು, ಖರೀದಿಸಿದ ನಂತರ ಮಾಡುವುದೊಂದು’ ಎಂದು ಗಿರೀಶ್ ಆರೋಪಿಸಿದ್ದಾರೆ.

ಈ ಘಟನೆ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ಗ್ರಾಹಕ ಶೋರೂಂಗೆ ಬೀಗ ಹಾಕಿರುವುದನ್ನು ನೋಡಲು ಜನ ಆಗಮಿಸುತ್ತಿದ್ದಾರೆ. ಈ ಬಗ್ಗೆ ಶೋರೂಂ ಹಾಗೂ ಹಿಟಾಚಿ ಕಂಪನಿ ಇನ್ನಷ್ಟೇ ಅಧಿಕೃತ ಪ್ರತಿಕ್ರಿಯೆ ನೀಡಬೇಕಿದೆ.


Spread the love
Share:

administrator

Leave a Reply

Your email address will not be published. Required fields are marked *