ಅಂಗನವಾಡಿ ಶಿಕ್ಷಕಿ vs ಸಹಾಯಕಿ: ಶಾಲೆಯಲ್ಲಿ ಹೈಡ್ರಾಮಾ

ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಯ ನಡುವೆ ಮಾರಾಮಾರಿ ನಡೆದಿರುವ ಘಟನೆಯೊಂದು ನಡೆದಿದ್ದು, ಸದ್ಯ ಅದರ ವಿಡಿಯೋ Viral ಆಗಿದೆ. ಉತ್ತರ ಪ್ರದೇಶದ ಮಥುರಾದ ಪ್ರಾಥಮಿಕ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ಈ ಸಂದರ್ಭದಲ್ಲಿ ಇಬ್ಬರು ಮಹಿಳೆಯರು ಪರಸ್ಪರರ ಕೂದಲನ್ನು ಎಳೆದುಕೊಂಡು, ಕೆನ್ನೆಗೆ ಹೊಡೆದುಕೊಂಡು ದೈಹಿಕವಾಗಿ ಜಗಳವಾಡಿದ್ದಾರೆ.ಇವರಿಬ್ಬರ ಜಗಳದಲ್ಲಿ ಶಾಲೆಯ ಕೆಲವು ಮಕ್ಕಳು ಸಹ ಈ ಜಗಳದಲ್ಲಿ ಭಾಗವಹಿಸಿದರು ಎಂದು ವರದಿಯಾಗಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಯ ಜಗಳವನ್ನು ಸ್ಥಳೀಯರು ಬಿಡಿಸಲು ಪ್ರಯತ್ನಿಸುತ್ತುರುವುದನ್ನು ಸಹ ನಾವು ವಿಡಿಯೋದಲ್ಲಿ ನೋಡಬಹುದಾಗಿದೆ.ಹೀಗೆ ಜುಟ್ಟು ಹಿಡಿದು ಹೊಡೆದಾಡಿಕೊಂಡ ಸಹಾಯಕ ಶಿಕ್ಷಕಿ ಪ್ರೀತಿ ತಿವಾರಿ ಮತ್ತು ಅಂಗನವಾಡಿ ಕಾರ್ಯಕರ್ತೆ ಚಂದ್ರಾವತಿ ಎಂದು ತಿಳಿದು ಬಂದಿದೆ.
