Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಂಗನವಾಡಿಯಲ್ಲಿ ಮಕ್ಕಳನ್ನು ಲಾಕ್ ಮಾಡಿ ಜಮೀನು ಕೆಲಸಕ್ಕೆ ಹೋದ ಸಹಾಯಕಿ

Spread the love

ಯಾದಗಿರಿ: ಮಕ್ಕಳನ್ನು ಅಂಗನವಾಡಿಯಲ್ಲಿ ಲಾಕ್​ ಮಾಡಿ ಸಹಾಯಕಿ ಜಮೀನು ಕೆಲಸಕ್ಕೆ ಹೋದ ಘಟನೆ ಗುರುಮಠಕಲ್​ ತಾಲೂಕಿನ ಬುದೂರ್​ ಗ್ರಾಮದಲ್ಲಿ ನಡೆದಿದೆ. ಗುರುವಾರ (ಜು.31) ಮಾಸಿಕ ಸಭೆ ನಿಮಿತ್ತ ಅಂಗನವಾಡಿ ಮುಖ್ಯ ಸಹಾಯಕಿ ಬೇರೆ ಗ್ರಾಮಕ್ಕೆ ಹೋಗಿದ್ದರು.

ಅಂಗನವಾಡಿ ಮುಖ್ಯ ಸಹಾಯಕಿ ಅತ್ತ ಹೋಗುತ್ತಿದ್ದಂತೆ ಇತ್ತ, ಸಹಾಯಕಿ ಸಾವಿತ್ರಮ್ಮ ಮಕ್ಕಳನ್ನು ಅಂಗನವಾಡಿಯಲ್ಲಿ ಲಾಕ್​ ಮಾಡಿ ಜಮೀನು ಕೆಲಸಕ್ಕೆ ಹೋಗಿದ್ದಾಳೆ. ಆಗ, ಮಕ್ಕಳು ಅಳಲು ಆರಂಭಿಸಿದವು. ಮಕ್ಕಳು ಅಳುತ್ತಿರುವ ಶಬ್ದ ಕೇಳಿ ಸ್ಥಳೀಯರು ಅಂಗನವಾಡಿ ಮುಖ್ಯ ಸಹಾಯಕಿಗೆ ವಿಷಯ ತಿಳಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಕೂಡಲೆ ಅಂಗನವಾಡಿಗೆ ಆಗಮಿಸಿದ ಮುಖ್ಯ ಸಹಾಯಕಿ ಬಾಗಿಲು ತೆರೆದಿದ್ದಾರೆ. ಮಕ್ಕಳನ್ನು ಲಾಕ್​ ಮಾಡಿದ ಸಹಾಯಕಿ ಸಾವಿತ್ರಮ್ಮ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *