ಎಐ ಹಾಗೂ ಡ್ರೋನ್ ಮೂಲಕ ಸೊಳ್ಳೆ ನಿಯಂತ್ರಣಕ್ಕೆ ಆಂಧ್ರ ಹೊಸ ಉಪಾಯ

ಅಮರಾವತಿ:ಕೃತಕ ಬುದ್ಧಿಮತ್ತೆಯು ಊಹೆಗೂ ಮೀರಿ ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ, ಸೊಳ್ಳೆಗಳ ಮೇಲೆ ಕಣ್ಣಿಡಲು ಮತ್ತು ಅವುಗಳನ್ನು ನಿಯಂತ್ರಿಸಲು ಎಐ ಬಳಸಲು ಆಂಧ್ರಪ್ರದೇಶ ಮುಂದಾಗಿದೆ.

ಈ ಬಗ್ಗೆ ಟಿಡಿಪಿ ಪ್ರಕಟಣೆ ಹೊರಡಿಸಿದ್ದು, ‘ಸೊಳ್ಳೆಗಳ ಪ್ರಭೇದ, ಲಿಂಗ ಮತ್ತು ಸಾಂದ್ರತೆಯನ್ನು ಪತ್ತೆಹಚ್ಚಲು ಪುರಸಭೆ ಆಡಳಿತ ಮತ್ತು ನಗರಾಭಿವೃದ್ಧಿ ಇಲಾಖೆಯು ಎಐ ಚಾಲಿತ ಸೆನ್ಸಾರ್ ಮತ್ತು ಡ್ರೋನ್ಗಳನ್ನು ನಿಯೋಜಿಸಲಿದೆ.
ಇವುಗಳನ್ನು 6 ಮಹಾನಗರ ಪಾಲಿಕೆಗಳ 66 ಸ್ಥಳಗಳಲ್ಲಿ ನಿಯೋಜಿಸಲಾಗುವುದು’ ಎಂದು ತಿಳಿಸಲಾಗಿದೆ.
ಡ್ರೋನ್ಗಳಲ್ಲಿರುವ ಸೆನ್ಸಾರ್ಗಳು ಸೊಳ್ಳೆಗಳ ಸಾಂದ್ರತೆ ಮತ್ತು ತಾಪಮಾನದಂತಹ ಹವಾಮಾನ ಪರಿಸ್ಥಿತಿಗಳ ನೈಜಸಮಯದ ಮೇಲ್ವಿಚಾರಣೆಯನ್ನು ನಡೆಸುತ್ತವೆ. ಇದರಿಂದ, ರಾಸಾಯನಿಕವನ್ನು ಸುಮ್ಮನೆ ಎಲ್ಲೆಡೆ ಸಿಂಪಡಿಸುವುದು ತಪ್ಪುತ್ತದೆ. ಅಂತೆಯೇ, ರಾಸಾಯನಿಕ ಸಿಂಪಡಿಸಲು ಡ್ರೋನ್ ಬಳಸುವುದರಿಂದ ಸಮಯ, ರಾಸಾಯನಿಕ ಪ್ರಮಾಣ, ವೆಚ್ಚಗಳು ಇಳಿಕೆಯಾಗುತ್ತವೆ.
ಕೆಲ ತಿಂಗಳುಗಳ ಹಿಂದೆ ಗುಜರಾತ್ನ ಸೂರತ್ನಲ್ಲೂ ಸೊಳ್ಳೆ ಪತ್ತೆ ಮತ್ತು ನಾಶಕ್ಕೆ ಡ್ರೋನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿತ್ತು.
ಸೊಳ್ಳೆ ಕಡಿತದ ಸಮಸ್ಯೆಯಿಂದ ಹೀಗೆ ತಪ್ಪಿಸಿಕೊಳ್ಳಿ :
ಐಸ್ ಕ್ಯೂಬ್ (Ice Cube) : ನಿಮ್ಮ ದೇಹದ ಮೇಲೆ ಸೊಳ್ಳೆ ಕಾರಣಕ್ಕೆ ಊತವಾಗಿದ್ದರೆ ನೀವು ಐಸ್ ಕ್ಯೂಬ್ ಬಳಸಬಹುದು. ಸೊಳ್ಳೆ ಕಡಿದ ಜಾಗಕ್ಕೆ ಐಸ್ ಕ್ಯೂಬ್ ಇಡಬೇಕು. ಇದು ಊತವನ್ನು ಹಾಗೂ ಉರಿಯನ್ನು ಬೇಗ ಕಡಿಮೆ ಮಾಡುತ್ತದೆ. ನೀವು ಐಸ್ ಕ್ಯೂಬನ್ನು ಊತದ ಮೇಲೆ ನೇರವಾಗಿ ಇಡಬೇಡಿ. ಒಂದು ತೆಳುವಾದ ಬಟ್ಟೆಯಲ್ಲಿ ಐಸ್ ಸುತ್ತಿ ನಂತ್ರ ಅದನ್ನು ಊತವಾಗಿರುವ ಜಾಗದಲ್ಲಿ ಇಡಿ.
ಅಲೋವೇರಾ (Alovera) : ಅಲೋವೇರಾ ಅನೇಕ ಆರೋಗ್ಯ ಗುಣವನ್ನು ಹೊಂದಿದೆ. ಅದು ತುರಿಕೆ, ಉರಿ ಸಮಸ್ಯೆಗೆ ಮುಕ್ತಿ ನೀಡುತ್ತದೆ. ಸೊಳ್ಳೆ ಕಡಿತದ ಸಮಯದಲ್ಲಿ ನೀವು ಆ ಜಾಗಕ್ಕೆ ಅಲೋವೇರಾ ಹಚ್ಚುವುದ್ರಿಂದ ಹೆಚ್ಚು ಲಾಭವಿದೆ. ನೀವು ತಾಜಾ ಅಲೋವೇರಾ ಜೆಲ್ ಬಳಕೆ ಮಾಡಿ. ಊತದ ಮೇಲೆ ಹಚ್ಚಿ 10 – 15 ನಿಮಿಷ ಬಿಡಬೇಕು.

ಅಸಿಡಿಟಿ ವಿರುದ್ಧ ಹೋರಾಡಲು ಸಹಾಯ ಮಾಡುವ ಭಾರತೀಯ ಸೂಪರ್ ಫುಡ್ಗಳು
ಜೇನುತುಪ್ಪ (Honey) : ಜೇನುತುಪ್ಪ ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ಇದು ತುರಿಕೆ ಕಡಿಮೆ ಮಾಡುತ್ತದೆ. ಸೊಳ್ಳೆ ಕಡಿತ ಜಾಗಕ್ಕೆ ನೀವು ಸ್ವಲ್ಪ ಪ್ರಮಾಣದ ಜೇನುತುಪ್ಪವನ್ನು ಹಚ್ಚಬೇಕು. 10 – 15 ನಿಮಿಷ ಅದನ್ನು ಹಾಗೆ ಬಿಟ್ಟು ನಂತ್ರ ಕ್ಲೀನ್ ಮಾಡಬೇಕು.
ಆಪಲ್ ವಿನೇಗರ್ (Apple Vinegar) : ಒಂದು ಹತ್ತಿಯಲ್ಲಿ ಆಪಲ್ ಸೈಡರ್ ವಿನೆಗರನ್ನು ಅದ್ದಿ ಅದನ್ನುಸೊಳ್ಳೆ ಕಡಿತದ ಜಾಗಕ್ಕೆ ಹಚ್ಚಬೇಕು. ವಿನೆಗರ್ನಲ್ಲಿರುವ ಆಮ್ಲೀಯತೆಯು ತುರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅಡುಗೆ ಸೋಡಾ (Baking Soda) : ಸೊಳ್ಳೆ ಕಡಿತದಿಂದ ಆಗಿರುವ ಊತ, ತುರಿಕೆಗೆ ನೀವು ಅಡುಗೆ ಸೋಡಾ ಕೂಡ ಬಳಕೆ ಮಾಡಬಹುದು. ಅಡುಗೆ ಸೋಡಾಕ್ಕೆ ನೀರು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ಸೊಳ್ಳೆ ಕಡಿದ ಜಾಗಕ್ಕೆ ಹಚ್ಚಿ. 10 -15 ನಿಮಿಷ ಹಾಗೆ ಬಿಡಿ. ನಂತ್ರ ಅದನ್ನು ತೊಳೆಯಿರಿ. ಅಡುಗೆ ಸೋಡಾ ಕೂಡ ಔಷಧಿ ಗುಣಗಳನ್ನು ಹೊಂದಿದ್ದು, ಅದು ಸೊಳ್ಳೆ ಊತವನ್ನು ಕಡಿಮೆ ಮಾಡುತ್ತದೆ
ಓಟ್ ಮೀಲ್ (Oat Meal) : ಉಪಾಹಾರಕ್ಕಾಗಿ ಹೆಚ್ಚಾಗಿ ಬಳಕೆ ಮಾಡಲಾಗುವ ಓಟ್ ಮೀಲ್ ಅನ್ನು ನೀವು ತುರಿಕೆಯನ್ನು ಕಡಿಮೆ ಮಾಡಲು ಬಳಸಬಹುದು. ಒಂದು ಪಾತ್ರೆಗೆ ಸಮ ಪ್ರಮಾಣದಲ್ಲಿ ಓಟ್ ಮೀಲ್ ಮತ್ತು ನೀರನ್ನು ಬೆರೆಸಿ ಓಟ್ ಮೀಲ್ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ತುರಿಕೆ ಇರುವ ಜಾಗಕ್ಕೆ ಹಚ್ಚಿಕೊಳ್ಳಿ. 10 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತ್ರ ಸ್ವಚ್ಛಗೊಳಿಸಿದ್ರೆ ಸೊಳ್ಳೆಯಿಂದಾಗುವ ತುರಿಕೆ, ಊತ ಕಡಿಮೆಯಾಗುತ್ತದೆ
