Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಟ್ರಕ್ ತುಂಬಿದ ಕೋಳಿಗಳನ್ನು ದುಪ್ಪಟ್ಟು ಬೆಲೆಗೆ ಖರೀದಿಸಿದ ಅನಂತ್ ಅಂಬಾನಿ

Spread the love

ಖ್ಯಾತ ಉದ್ಯಮಿ ಮುಕೇಶ್‌ ಅಂಬಾನಿ ಅವರ ಕಿರಿಯ ಪುತ್ರ ಹಾಗೂ ರಿಲಯನ್ಸ್‌ ಇಂಡಸ್ಟ್ರಿಯ ನಿರ್ದೇಶಕ ಅನಂತ್‌ ಅಂಬಾನಿ ತಮ್ಮ ಹುಟ್ಟು ಹಬ್ಬದಂದು ಶ್ರೀ ಕೃಷ್ಣನ ದರ್ಶನ ಪಡೆಯಲು ಜಾಮ್‌ ನಗರದಿಂದ ದ್ವಾರಕಾಕ್ಕೆ ಪಾದಯಾತ್ರೆಹೊರಟಿದ್ದಾರೆ. ಮಾರ್ಚ್‌ 27 ರಂದು ಜಾಮ್‌ನಗರದಿಂದ 141 ಕಿಲೋಮೀಟರ್‌ ದೂರದಲ್ಲಿರುವ ದ್ವಾರಕಾಗೆ ಪಾದಯಾತ್ರೆ ಹೊರಟಿರುವ ದೈವ ಭಕ್ತ ಅನಂತ್‌ ಅಂಬಾನಿ ಏಪ್ರಿಲ್‌ 10 ರಂದು ದ್ವಾರಕಾ ತಲುಪಲಿದ್ದಾರೆ. ಈ ಮಧ್ಯೆ ಅವರು ಕೋಳಿಗಳ ಹಿಂಡನ್ನು ರಕ್ಷಿಸುವ ಮೂಲಕ ಸಖತ್‌ ಸುದ್ದಿಯಲ್ಲಿದ್ದಾರೆ. ಹೌದು ಪಾದಯಾತ್ರೆ ವೇಳೆ ಅನಂತ್‌ ಅಂಬಾನಿ ಟ್ರಕ್‌ನಲ್ಲಿ ತುಂಬಿದ್ದ ಕೋಳಿಗಳ ಹಿಂಡನ್ನು ದುಪ್ಪಟ್ಟು ಬೆಲೆಗೆ ಖರೀದಿಸುವ ಮೂಲಕ ಅವುಗಳನ್ನು ರಕ್ಷಣೆ ಮಾಡಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಭಾರೀ ವೈರಲ್‌ ಆಗುತ್ತಿದೆ. ಪಾದಯಾತ್ರೆಯ ಸಮಯದಲ್ಲಿ ಅನಂತ್ ಅಂಬಾನಿಯವರ ಪ್ರಾಣಿ ಪ್ರೇಮ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹೌದು ಅಂಬಾನಿ ಪುತ್ರ ಪಾದಯಾತ್ರೆ ವೇಳೆ ದಾರಿ ಮಧ್ಯೆ ಟ್ರಕ್‌ನಲ್ಲಿ ತುಂಬಿದ್ದ ಕೋಳಿಗಳ ಹಿಂಡನ್ನು ರಕ್ಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆ ಟ್ರಕ್‌ನಲ್ಲಿದ್ದ ಸುಮಾರು 250 ಕೋಳಿಗಳನ್ನು ದುಪ್ಪಟ್ಟು ಬೆಲೆ ಕೊಟ್ಟು ಖರೀದಿ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.


Spread the love
Share:

administrator

Leave a Reply

Your email address will not be published. Required fields are marked *