Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಾವಿನಲ್ಲೂ ಒಂದಾದ ವೃದ್ಧ ದಂಪತಿ; ಪತಿಯ ಸಾವಿನ ಆಘಾತದಿಂದ ಪತ್ನಿಗೂ ಹೃದಯಾಘಾತ!

Spread the love

ಧಾರವಾಡದ ದೇವರ ಹುಬ್ಬಳ್ಳಿಯಲ್ಲಿ ಪತಿಯ ಸಾವಿನ ಸುದ್ದಿ ಕೇಳಿ ಪತ್ನಿಗೂ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಈಶ್ವರಪ್ಪ ಮತ್ತು ಪಾರ್ವತೆವ್ವಾ ಎಂಬ ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿದ್ದು, ಊರಿಗೆಲ್ಲಾ ದುಃಖ ತಂದಿದೆ.


ಧಾರವಾಡ: ಪತಿಯ ಸಾವಿನ ಸುದ್ದಿ ತಿಳಿದು ತೀವ್ರ ಆಘಾತದಿಂದ ಪತ್ನಿಗೂ ಹೃದಯಾಘಾತವಾಗಿ ಸಾವಿನಲ್ಲಿ ಒಂದಾದ ಘಟನೆ ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿಯಲ್ಲಿ ನಡೆದಿದೆ.
ಪತಿ ಈಶ್ವರಪ್ಪಾ(79), ಪಾರ್ವತೆವ್ವಾ(74) ಮೃತ ವೃದ್ಧದಂಪತಿ. ಇಬ್ಬರು ಪರಸ್ಪರ ತುಂಬಾ ಪ್ರೀತಿಯಿಂದಿದ್ದರು, ತುಂಬು ಜೀವನ ನಡೆಸಿದ ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಇಬ್ಬರೂ ಕುಳಿತು ಊಟ ಮಾಡಿದ್ದರು. ಆದರೆ ಏಕಾಏಕಿ ಪತಿ ಈಶ್ವರಪ್ಪಾಗೆ ಹೃದಯಾಘಾತವಾಗಿ ಮೃತಪಟ್ಟಿದ್ದರು. ಪತಿ ಸಾವಿನ ಸುದ್ದಿ ತಿಳಿದ ಪಾರ್ವತೆವ್ವ ಆಘಾತಕ್ಕೊಳಗಾಗಿ ಮೃತಪಟ್ಟರು

ಬದುಕಿದ್ದಾಗಲೂ ಒಬ್ಬರನ್ನೊಬ್ಬರು ಬಿಟ್ಟು ಕ್ಷಣದ ಜೀವಗಳು ಸಾವಿನಲ್ಲೂ ಒಂದಾಗಿದ್ದಾರೆ. ವೃದ್ಧ ದಂಪತಿಗಳನ್ನು ನೆನೆದು ಇಡೀ ಗ್ರಾಮವೇ ಕಂಬನಿ ಮಿಡಿಯಿತು. ನಾಲ್ಕು ಜನ ಮಕ್ಕಳ, 12 ಜನ ಮೊಮ್ಮಕ್ಕಳನ್ನು ಅಗಲಿದ್ದಾರೆ


Spread the love
Share:

administrator

Leave a Reply

Your email address will not be published. Required fields are marked *