ಜಮ್ಮು ಪ್ರವಾಹ: ಪ್ರವಾಹದ ನೀರಿಗೆ ನಡುಗುತ್ತಿದ್ದ ಕರು ರಕ್ಷಿಸಿದ ಮನುಷ್ಯ, ಹೃದಯಸ್ಪರ್ಶಿ ವಿಡಿಯೋ ವೈರಲ್!

ಜಮ್ಮು ಪ್ರವಾಹದಿಂದ ತತ್ತರಿಸಿದೆ. ಪ್ರವಾಹಕ್ಕೆ ಜನ ಜೀವನ ಸಂಕಷ್ಟದಲ್ಲಿದೆ. ಇದರ ನಡುವೆ ಹೃದಯದ್ರಾವಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮನುಷ್ಯರಿಗೆ ತಮ್ಮ ಜೀವದ ಜತೆಗೆ ತಾನು ಸಾಕಿದ ಪ್ರಾಣಿ ರಕ್ಷಣೆ ಕೂಡ ಅಗತ್ಯ ಎನ್ನುವುದು ಈ ವಿಡಿಯೋದಿಂದ ಕಾಣಬಹುದು. ಮನುಷ್ಯನಿಗೆ ಪ್ರಾಣಿಗಳ ಜತೆಗೆ ಎಷ್ಟು ಅಮೂಲ್ಯವಾದ ಪ್ರೀತಿ ಇದೆ ನೋಡಿ. ಪ್ರವಾಹದ ನಡುವೆ ವ್ಯಕ್ತಿಯೊಬ್ಬರು ತಮ್ಮ ಜೀವದ ಜತೆಗೆ ಕರುವಿನ ಜೀವವನ್ನು ಉಳಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವೀಡಿಯೊದಲ್ಲಿ ಕುಸಿದು ಬಿದ್ದ ರಸ್ತೆಗಳು, ಧರೆ ಬಿದ್ದ ದೈತ್ಯ ಮರಗಳು ಮತ್ತೊಂದು ಕಡೆ ಎಲ್ಲವೂ ಜಲಾವೃತಗೊಂಡಿರುವುದನ್ನು ಕಾಣಬಹುದು. ಇದರ ನಡುವೆ ಚಳಿಯಿಂದ ನಡುಗುತ್ತಿದ್ದ ಕರುವೊಂದನ್ನು ಪ್ಲಾಸ್ಟಿಕ್ನಲ್ಲಿ ಸುತ್ತಿಕೊಂಡು ಬೆನ್ನ ಮೇಲೆ ಎತ್ತಿಕೊಂಡಿರುವುದನ್ನು ಕಾಣಬಹುದು.

ಈ ವೈರಲ್ ಆಗಿರುವ ವಿಡಿಯೋದಲ್ಲಿ ಪ್ರವಾಹದ ನಡುವೆ ಭಕ್ತನೊಬ್ಬ ಹಸುವನ್ನು ರಕ್ಷಿಸುತ್ತಾನೆ, ಆಶೀರ್ವಾದ ಪಡೆಯುತ್ತಾನೆ ಎಂದು ಶೀರ್ಷಿಕೆ ಬರೆದಿದ್ದಾರೆ. ನರಿಂದರ್ ಸಿಂಗ್ ಎಂಬ ವ್ಯಕ್ತಿ, ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವಾರದಿಂದ ಸುರಿದ ಭಾರೀ ಮಳೆಯಿಂದಾಗಿ ಜಮ್ಮುವಿನಲ್ಲಿ ಅಪಾರ ಹಾನಿಯಾಗಿದೆ. ಮೇಘಸ್ಫೋಟ, ದಿಢೀರ್ ಪ್ರವಾಹ , ನದಿಗಳ ಉಕ್ಕಿ ಹರಿಯುವಿಕೆ, ಪರ್ವತ ಪ್ರದೇಶಗಳಲ್ಲಿ ಭೂಕುಸಿತ ಮತ್ತು ಸೇತುವೆಗಳು ಮತ್ತು ರಸ್ತೆಗಳಂತಹ ಮೂಲಸೌಕರ್ಯಗಳಿಗೆ ತೀವ್ರ ಹಾನಿಯಾಗಿದೆ. ತಗ್ಗು ಪ್ರದೇಶಗಳು ಇನ್ನೂ ಜಲಾವೃತವಾಗಿದ್ದು, ನಿವಾಸಿಗಳು ತೀವ್ರ ಪರಿಸ್ಥಿತಿಗಳನ್ನು ನಿಭಾಯಿಸಲು ಹೆಣಗಾಡುತ್ತಿದ್ದಾರೆ.
ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು, ಅವರ ಧೈರ್ಯ ಮತ್ತು ಸಹಾಸಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಪ್ರವಾಹದಲ್ಲಿ ಸಿಲುಕಿದ್ದ, ಕರುವನ್ನು ಪುಟ್ಟ ಮಗುವಿನಂತೆ ಅಪ್ಪಿಕೊಂಡಿ, ಅದಕ್ಕೆ ಚಳಿಯಾಗದಂತೆ ಪ್ಲಾಸ್ಟಿಕ್ ಸುತ್ತಿದ್ದಾರೆ. ಈ ವೀಡಿಯೊವನ್ನು ಆಗಸ್ಟ್ 28, 2025 ರಂದು ಹಂಚಿಕೊಳ್ಳಲಾಯಿತು ಮತ್ತು ಅಂದಿನಿಂದ 40,000 ವೀಕ್ಷಣೆಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ.
ಇನ್‌ಸ್ಟಾಗ್ರಾಮ್ ಬಳಕೆದಾರರು ಈ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ಆ ವ್ಯಕ್ತಿಯ ಧೈರ್ಯ ಮತ್ತು ಕರುಣೆಯನ್ನು ಈ ವಿಡಿಯೋ ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರೊಬ್ಬರು ನನ್ನನ್ನು ನಂಬಿರಿ, ಅವರು ನಿಜಕ್ಕೂ ರತ್ನ ಎಂದು ಹೇಳಿದ್ದಾರೆ. ಈ ಮನುಷ್ಯನಿಗೆ ದೊಡ್ಡ ಗೌರವ ನೀಡಬೇಕು ಎಂದು ಕಮೆಂಟ್ ಮಾಡಿದ್ದಾರೆ.
