Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹೊಸ ಡಿಜಿಪಿ ನೇಮಕ ಚರ್ಚೆ ನಡುವೆ ಅಲೋಕ್ ಮೋಹನ್ ಸೇವಾವಧಿ ವಿಸ್ತರಣೆ

Spread the love

ಬೆಂಗಳೂರು: ರಾಜ್ಯ ಪೊಲೀಸ್​ ಮಹಾನಿರ್ದೇಶಕ (ಡಿಜಿ&ಐಜಿಪಿ) ಅಲೋಕ್ ಮೋಹನ್ ಅವರ ಸೇವಾವಧಿಯನ್ನು ಮೇ 21ರವರೆಗೆ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಪೊಲೀಸ್​ ಇಲಾಖೆಗೆ ನೂತನ ಡಿಜಿಪಿ ಆಯ್ಕೆ ಕುರಿತು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಡಿಜಿಪಿ ಅಲೋಕ್​ ಮೋಹನ್​ ಅವರ ಸೇವಾವಧಿಯನ್ನು ವಿಸ್ತರಣೆ ಮಾಡಲಾಗಿದೆ.ಬುಧವಾರ (ಏ.30) ರಂದು ವಯೋನಿವೃತ್ತಿ ಹೊಂದಬೇಕಿದ್ದ ಡಿಜಿಪಿ ಅಲೋಕ್​ ಮೋಹನ್ ಅವರ ಸೇವಾವಧಿಯನ್ನು 22 ದಿವಸಗಳ ಮಟ್ಟಿಗೆ ರಾಜ್ಯ ಸರ್ಕಾರ ವಿಸ್ತರಿಸಿದೆ. ಡಿಜಿಪಿ ಅಲೋಕ್ ಮೋಹನ್​ ಅವರು ತಮ್ಮ ಸೇವೆಯನ್ನು ಮೂರು ತಿಂಗಳ ಕಾಲ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದರು ಎಂದು ವರದಿಯಾಗಿತ್ತು.

  • ಈ ತಿಂಗಳ ಅಂತ್ಯಕ್ಕೆ ತಾವು (ಅಲೋಕ್ ಮೋಹನ್) ನಿವೃತ್ತಿಯಾಗುತ್ತಿರುವ ಕಾರಣ ಈ ಹುದ್ದೆಯಲ್ಲಿ ಎರಡು ವರ್ಷ ಪೂರೈಸಲು ಆಗುತ್ತಿಲ್ಲ. ಆದುದರಿಂದ ಸುಪ್ರೀಂಕೋರ್ಟ್ ತೀರ್ಪನ ಪ್ರಕಾರ ಪೊಲೀಸ್​ ಮುಖ್ಯಸ್ಥರ ಹುದ್ದೆಗಳಿಗೆ ಎರಡು ವರ್ಷಗಳ ಅವಧಿ ನೀಡಬೇಕೆಂದು ವಿನಂತಿಸಿದ್ದರು. ಇದನ್ನು ಸರ್ಕಾರ ಪುರಸ್ಕರಿಸಿದೆ.2023ರಲ್ಲಿ ಅಲೋಕ್ ಮೋಹನ್​ ಅವರು ಪೊಲೀಸ್​ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ಅಲೋಕ್ ಮೋಹನ್​ ಅವರು 1987ನೇ ಬ್ಯಾಚ್​ನ ಐಪಿಎಸ್​ ಅಧಿಕಾರಿಯಾಗಿದ್ದಾರೆ.

Spread the love
Share:

administrator

Leave a Reply

Your email address will not be published. Required fields are marked *