ಯಶವಂತ್ ಕುಮಾರ್ ಅವರ ಮೃತದೇಹ ಹಸ್ತಾಂತರಕ್ಕೆ ಎ.ಜೆ. ಆಸ್ಪತ್ರೆಯ ನಿರಾಕರಣೆ

ಇಂಟಕ್ ಸದಸ್ಯ ಯಶವಂತ್ ಕುಮಾರ್ ನಿಧನರಾದ ನಂತರ, ಆಸ್ಪತ್ರೆಯ ವೆಚ್ಚವಾದ ₹4.15 ಲಕ್ಷ ಪಾವತಿಸದ ಕಾರಣ, ಎ.ಜೆ. ಆಸ್ಪತ್ರೆ ಮೃತದೇಹ ಹಸ್ತಾಂತರಿಸಲು ನಿರಾಕರಿಸಿತು.ಮೊಹಿಯುದ್ದೀನ್ ಬಾವಾರವರು ಮಾನವೀಯ ನೆಲೆಯಲ್ಲಿ, ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ₹1 ಲಕ್ಷ ಕಡಿತಗೊಳಿಸಿ, ಉಳಿದ ₹3 ಲಕ್ಷ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕರ ನೆರವಿನಿಂದ ಭರಿಸುವ ಭರವಸೆ ನೀಡಲಾಯಿತು. ಅವರು ನೀಡದಿದ್ದರೆ ಮೊಹಿಯುದ್ದೀನ್ ಬಾವಾರವರು ಸ್ವತಃ ಪಾವತಿಸುವಂತೆ ಬರೆಯಲಾಯಿತು. ಒಂದು ತಿಂಗಳ ಕಾಲಾವಕಾಶ ಪಡೆದು, ಯಶವಂತ್ ಕುಮಾರನ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದರು.
