Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಿಂಧೂರ ಶೋಭೆಯಿಂದ ಕಾನ್ ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಐಶ್ವರ್ಯಾ!

Spread the love

ಮುಂಬೈ : ಆಪರೇಷನ್ ಸಿಂಧೂರದ ಬಳಿಕ ಭಾರತದಲ್ಲಿ ಸಿಂಧೂರಕ್ಕಿರುವ ಗೌರವ ಇನ್ನಷ್ಟು ಹೆಚ್ಚಾಗಿದೆ. ಇದೀಗ ಪೂರಕವಂತೆ 78ನೇ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ಎಲ್ಲರ ಗಮನ ಸೆಳೆದಿದ್ದಾರೆ.

ಮೇ 13 ರಂದು ಪ್ರಾರಂಭವಾದ 78ನೇ ಕ್ಯಾನೆಸ್ ಚಲನಚಿತ್ರೋತ್ಸವ ಮೇ 24 ರಂದು ಕೊನೆಗೊಳ್ಳಲಿದ್ದು, ಈ ವರ್ಷ ಹಲವಾರು ಭಾರತೀಯ ನಟ-ನಟಿಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಈ ಎಲ್ಲರ ನಡುವೆ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಮಿಂಚಿದ್ದಾರೆ.

ಕಾನ್‌ ಫಿಲ್ಮ್‌ ಫೆಸ್ಟಿವಲ್‌‌‌ 2025 ರ ರೆಡ್ ಕಾರ್ಪೆಟ್ ನಲ್ಲಿ ಮಹಾರಾಣಿಯಂತೆ ಆಗಮಿಸಿದ ಐಶ್ವರ್ಯ ರೈ, ರಾಜಮನೆತನದ ಬಿಳಿ ಸೀರೆಯಲ್ಲಿ ಸೊಬಗನ್ನು ಪ್ರದರ್ಶಿಸಿದರು. ಕೆಂಪು ಪಚ್ಚೆ ಹಾರದೊಂದಿಗೆ, ಕೆಂಪು ಸಿಂದೂರ್ ಇಟ್ಟುಕೊಂಡು, ಗಮನ ಸೆಳೆದರು.

ಇದೀಗ ಐಶ್ವರ್ಯ ರೈ ಅವರ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರಗೆ ನಟಿ ಐಶ್ವರ್ಯ ರೈ ಅವರು ಬೆಂಬಲ ಸೂಚಿಸಿದ್ದಾರೆ ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ.

ಇನ್ನು ಐಶ್ವರ್ಯ ರೈ ಕಾರಿನಿಂದ ಇಳಿಯುತ್ತಿದ್ದಂತೆ ಅಭಿಮಾನಿಗಳು ಅವರ ಹೆಸರನ್ನು ಕೂಗಿದ್ದಾರೆ. ಲೋರಿಯಲ್ ಪ್ಯಾರಿಸ್ ಬ್ರಾಂಡ್ ರಾಯಭಾರಿಯಾಗಿ ಕೇನ್ಸ್‌ನಲ್ಲಿ ದೀರ್ಘಕಾಲ ಭಾಗವಹಿಸಿರುವ ಐಶ್ವರ್ಯಾ, ಅವರು ಆಗಾಗ್ಗೆ ಪ್ರಶಂಸಿಸಲ್ಪಡುತ್ತಿರುತ್ತಾರೆ.


Spread the love
Share:

administrator

Leave a Reply

Your email address will not be published. Required fields are marked *