ಐಶ್ವರ್ಯಾ ರೈ ಅವರ ಕಾರಿಗೆ ಮುಂಬೈನಲ್ಲಿ ಬಸ್ ಡಿಕ್ಕಿ

ಮುಂಬೈ: ಬುಧವಾರ ಮುಂಬೈನ ಜುಹು ಪ್ರದೇಶದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಕಾರಿಗೆ ಹಿಂದಿನಿಂದ ಬಂದ ಮುಂಬೈ ನಗರ ಸಾರಿಗೆಯ ‘ಬೆಸ್ಟ್’ ಬಸ್ ಡಿಕ್ಕಿ ಹೊಡೆದಿದೆ. ಆದರೆ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

ಡಿಕ್ಕಿ ಬಳಿಕ ಅವರ ಸಿಬ್ಬಂದಿ ಕಾರಿನಿಂದ ಇಳಿದಿದಿದ್ದಾರೆ. ಆದರೆ ಹೀಗಾಗಿ ಅಪಘಾತದ ವೇಳೆ ನಟಿ ಕಾರಿನಲ್ಲಿ ಇರಲಿಲ್ಲ . ಕಾರಿನ ನಂಬರ್ ಪ್ಲೇಟ್ ಪರಿಶೀಲಿಸಿದಾಗ ಐಶ್ವರ್ಯಾ ಅವರದ್ದೇ ಎಂದು ತಿಳಿದುಬಂದಿದೆ. ಅಪಘಾತ ಲಘು ಪ್ರಮಾಣದಲ್ಲಿ ಆಗಿದ್ದರಿಂದ ಕೆಲ ಹೊತ್ತು ಬಳಿಕ ಅಲ್ಲಿಂದ ಕಾರು ಮುಂದೆ ಸಾಗಿತು.