Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

AI ಭವಿಷ್ಯದ ಉದ್ಯೋಗಗಳ ಮೇಲೆ ಪರಿಣಾಮ: ಬಿಲ್ ಗೇಟ್ಸ್ ಹೇಳುವ ಮಾನವರು ಅಳಿಸಲಾಗದ 5 ವಲಯಗಳು!

Spread the love

ವಿಶ್ವದ ಅನೇಕ ಕಂಪನಿಗಳು ತಮ್ಮ ಬ್ಯುಸಿನೆಸ್ ಮತ್ತು ಕಾರ್ಯಾಚರಣೆಯಲ್ಲಿ ಎಐ ಅನ್ನು ಅಳವಡಿಸುತ್ತಿವೆ. ನೂರಾರು ಮಂದಿ ಮಾಡುವ ಕೆಲಸವನ್ನು ಎಐ ಮಾಡಬಲ್ಲುದು ಎಂದು ಹಲವು ಕಂಪನಿಗಳ ಸಿಇಒಗಳು ಹೇಳುತ್ತಿದ್ದಾರೆ. ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಉದ್ಯೋಗಗಳು ಮನುಷ್ಯರಿಂದ ಎಐ ಪಾಲಾಗಲಿವೆ ಎಂದು ಬಹಳ ಮಂದಿ ಎಚ್ಚರಿಸುತ್ತಿದ್ದಾರೆ.

ಉದ್ಯೋಗದ ಮೇಲೆ ಎಐ ಪರಿಣಾಮದ ಬಗ್ಗೆ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ಹಲವು ಬಾರಿ ಮಾತನಾಡಿದ್ದಾರೆ. ವಿಂಡೋಸ್ ಸೆಂಟ್ರಲ್ನಿಂದ ಬಂದ ವರದಿಯೊಂದರ ಪ್ರಕಾರ, ಬಿಲ್ ಗೇಟ್ಸ್ ಅವರು, ಮನುಷ್ಯರ ಕೆಲ ಕೆಲಸಗಳನ್ನು ಮುಂದಿನ 100 ವರ್ಷವಾದರೂ ಕಸಿದುಕೊಳ್ಳಲು ಆಗುವುದಿಲ್ಲ ಎಂದಿದ್ದಾರೆ.

ಸೃಜನಶೀಲತೆ ಆಧಾರಿತ ಉದ್ಯೋಗಗಳು ಯಂತ್ರಗಳ ಪಾಲಾಗುವುದಿಲ್ಲ…

ಕಲೆ, ಬರವಣಿಗೆ, ಸಂಗೀತ, ವಿನ್ಯಾಸ ಇತ್ಯಾದಿ ಸೃಜನಶೀಲತೆ ಬೇಡುವ ಕೆಲಸಗಳನ್ನು ಮನುಷ್ಯರಷ್ಟು ನವಿರಾಗಿ ಮತ್ತು ಸೂಕ್ಷ್ಮವಾಗಿ ಮಾಡಲು ಎಐನಿಂದ ಆಗುವುದಿಲ್ಲ. ದತ್ತಾಂಶ ಆಧಾರವಾಗಿ ಎಐ ಒಂದು ಪ್ಯಾಟರ್ನ್ ನಿರ್ಮಿಸಬಲ್ಲುದಾದರೂ, ಮೂಲ ಪರಿಕಲ್ಪನೆ, ಭಾವ ತೀವ್ರತೆ ಇತ್ಯಾದಿ ಅಂಶವು ಮನುಷ್ಯರಿಂದಲೇ ಬರಬೇಕು ಎಂಬುದು ಬಿಲ್ ಗೇಟ್ಸ್ ಅನಿಸಿಕೆ.

ಬುದ್ಧಿವಂತಿಕೆ ಬಯಸುವ ಕೆಲಸಗಳು…

ಶಿಕ್ಷಕರು, ಕನ್ಸಲ್ಟೆಂಟ್ಗಳು, ವೈದ್ಯರು, ಔಷಧೋಪಚಾರ ವರ್ಗದವರು ಇತ್ಯಾದಿ ವೃತ್ತಿಗಳವರ ಕೆಲಸವನ್ನು ಎಐ ಸಮರ್ಪಕವಾಗಿ ಮಾಡಲು ಆಗುವುದಿಲ್ಲ. ವಿದ್ಯಾರ್ಥಿಗಳು, ರೋಗಿಗಳ ಭಾವನೆಯನ್ನು ಗ್ರಹಿಸಲು ಎಐನಿಂದ ಆಗದೇ ಇರಬಹುದು ಎಂದು ಮೈಕ್ರೋಸಾಫ್ಟ್ ಸಂಸ್ಥಾಪಕರು ಹೇಳುತ್ತಾರೆ.

ಸಂಕೀರ್ಣ ನಿರ್ಧಾರದ ಅಗತ್ಯ ಇರುವ ಕೆಲಸಗಳಿಗೆ ಏನೂ ಆಗಲ್ಲ…

ಬಹು ಆಯಾಮದ, ಸಂಕೀರ್ಣವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ರಾಜಕಾರಣಿಗಳು, ಹಿರಿಯ ಮ್ಯಾನೇಜರ್ಗಳು, ವಿಜ್ಞಾನಿಗಳ ಕೆಲಸಗಳಿಗೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಈ ಮೇಲಿನ ಕೆಲಸಗಳನ್ನು ಮಾಡಲು ನೈತಿಕತೆ ಹಾಗೂ ಅನುಭವದ ಅಗತ್ಯತೆ ಇರುತ್ತದೆ.

ಮನುಷ್ಯರ ಸಂಪರ್ಕ ಆಧಾರಿತ ಕೆಲಸಗಳಿಗೆ ಅಪಾಯ ಇಲ್ಲ…

ಮಾನವೀಯ ಸಂಬಂಧ ಮತ್ತು ನಂಬುಗೆ ಆಧಾರದ ಮೇಲೆ ನಿಂತಿರುವ ಸಾಮಾಜಿಕ ಕಾರ್ಯ, ಧಾರ್ಮಿಕ ನಾಯಕತ್ವ, ಸಮುದಾಯ ಸಂಘಟನೆಯ ಕ್ಷೇತ್ರದ ಕೆಲಸಗಳನ್ನು ಮೆಷಿನ್ಗಳು ಮಾಡಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಬಿಲ್ ಗೇಟ್ಸ್.

ಕೋಡಿಂಗ್ ಕೆಲಸದಲ್ಲಿ ಯಾವುತ್ತೂ ಮನುಷ್ಯರೇ ಕಿಂಗ್….

ಬಿಲ್ ಗೇಟ್ಸ್ ಪ್ರಕಾರ ಎಐ ಏನೇ ಕೋಡಿಂಗ್ ಮಾಡಿದರೂ ಪ್ರೋಗ್ರಾಮಿಂಗ್ ಮಾಡಿದರೂ ಮನುಷ್ಯರ ಸೃಜನಶೀಲ ಪ್ರಯೋಗ ಮಾಡಲು ಸಾಧ್ಯವಾಗುವುದಿಲ್ಲ. ಹೊಸ ಸಾಫ್ಟ್ವೇರ್ ಪರಿಕಲ್ಪನೆ ಮಾಡಲು, ಮಾನವ ಕುಲದ ಹಿತವನ್ನು ಗಮನದಲ್ಲಿಟ್ಟುಕೊಂಡು ನೈತಕತೆಯಿಂದ ಕೆಲಸ ಮಾಡುವುದನ್ನು ಎಐಗೆ ಮಾಡಲಾಗುವುದಿಲ್ಲ. ಹೀಗಾಗಿ, ಕೋಡಿಂಗ್ ಯಾವತ್ತೂ ಮನುಷ್ಯರ ಬಳಿ ಇರುತ್ತೆ ಎಂತಾರೆ.


Spread the love
Share:

administrator

Leave a Reply

Your email address will not be published. Required fields are marked *