ಭಾರತದಲ್ಲಿ ಏರಿದ ವಾಯು ಮಾಲಿನ್ಯ– ವಿಶ್ವದ ಟಾಪ್ 20 ಕಲುಷಿತ ನಗರಗಳಲ್ಲಿ 13 ನಗರ ಭಾರತದಲ್ಲೇ ಇದೆ!

ನವದೆಹಲಿ: ವಿಶ್ವದ 20 ಅತ್ಯಂತ ಕಲುಷಿತ ನಗರಗಳ ಪಟ್ಟಿ ಬಿಡುಗಡೆಯಾಗಿದೆ. ಆತಂಕದ ಸಂಗತಿ ಎಂದರೆ ಆ 20 ನಗರಗಳ ಪೈಕಿ 13 ನಗರಗಳು ಭಾರತದಲ್ಲೇ ಇದೆ. ಇದು ಅಚ್ಚರಿ ಅನ್ನಿಸಿದರೂ ಸತ್ಯ.
ಹೌದು.. ವಿಶ್ವದ ಅತ್ಯಂತ ಕಲುಷಿತ ನಗರಗಳು ಭಾರತದಲ್ಲಿವೆ. ಜಗತ್ತಿನ 20 ಅತ್ಯಂತ ಕಲುಷಿತ ನಗರಗಳಲ್ಲಿ 13 ಭಾರತದಲ್ಲೇ ಇವೆ. ಮೇಘಾಲಯದ ಬರ್ನಿಹತ್ ನಗರ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ದೆಹಲಿ ಇನ್ನೂ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಎಂಬ ನಾಚಿಕೆಗೇಡಿನ ಪಟ್ಟಿಯಿಂದ ಹೊರಬಂದಿಲ್ಲ. ಮಂಗಳವಾರ ಪ್ರಕಟವಾದ ಹೊಸ ವರದಿಯಲ್ಲಿ ಈ ಆಘಾತಕಾರಿ ಸಂಗತಿ ಬಹಿರಂಗವಾಗಿದೆ.

ಸ್ವಿಸ್ ವಾಯು ಗುಣಮಟ್ಟದ ತಂತ್ರಜ್ಞಾನ ಕಂಪನಿ ಐಕ್ಯೂಏರ್‌ನ ‘ವಿಶ್ವ ವಾಯು ಗುಣಮಟ್ಟ ವರದಿ 2024’ ಪ್ರಕಾರ, ದೆಹಲಿ ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯಾಗಿ ಉಳಿದಿದ್ದು, 2024 ರಲ್ಲಿ, ಭಾರತವು ವಿಶ್ವದ ಐದನೇ ಅತ್ಯಂತ ಕಲುಷಿತ ರಾಷ್ಟ್ರವಾಗಿತ್ತು. 2023 ರಲ್ಲಿ, ಭಾರತವು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿತ್ತು.