ಗುರುದೇವ ದೃಷ್ಟಿಕೋನದಿಂದ ಭಾರತಾದ್ಯಂತ ಮಾನವೀಯ ಸ್ಪರ್ಶ ಪಡೆದ AI

ಬೆಂಗಳೂರು: ವಿಜಯದಶಮಿಯ ಶುಭ ದಿನವು ಶುಭ ಆರಂಭಗಳ ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯದ ದಿನವಾಗಿದೆ. ಇಂದಿನ ವಿಜಯದಶಮಿಯಂದು ಗುರುದೇವರು ಪ್ರಪ್ರಥಮವಾದ, ಜಗತ್ತಿನ ಅತೀ ಸುರಕ್ಷಿತವಾದ, ಅತೀ ಮುಂದುವರಿದ ಸ್ಮಾರ್ಟ್ ಸ್ಕೂಲ್ ಎಕ್ಸೆಲ್ ಎಐ (Smart school excel AI) ಕಲಿಕಾ ಮಾದರಿಯನ್ನು ಹರಸಿದರು. ಇದು 10 ನೆಯ ಜನರೇಷನ್ ನ AI LMS ಆಗಿದ್ದು, ಜಗತ್ತಿನಲ್ಲಿರುವ ಯಾವುದೇ LMS ಗಿಂತಲೂ ಮುಂದುವರಿದ LMS ಆಗಿದೆ.

ಇದು ಭಾರತದ ಪ್ರಪ್ರಥಮ ಮಾದರಿಯನ್ನು ಆರ್ಟ್ ಆಫ್ ಲಿವಿಂಗ್ ಮತ್ತು ಸುಮೇರು ಎಜು ಟೆಕ್ ಜಂಟಿಯಾಗಿ ಹೊರತಂದಿರುವ ಎಐ ಹಾಗೂ ಮಾನವೀಯ ಮೌಲ್ಯಗಳ ಸಂಗಮ. ಎಐ ಕಲಿಕೆಯನ್ನು ಭಾರತದ ಅತೀ ಹಿಂದುಳಿದ ಹಳ್ಳಿಗಳಿಗೆ ಮತ್ತು ಬುಡಕಟ್ಟು ಸಮುದಾಯಗಳಿಗೆ ಕೊಂಡೊಯ್ಯುವ ಉದ್ದೇಶವನ್ನು ಈ ಸಂಸ್ಥೆಯು ಹೊಂದಿದ್ದು, ಜಾಗತಿಕ ಗುಣಮಟ್ಟದ ಶಿಕ್ಷಣವು ಪ್ರತಿಯೊಂದು ಮಗುವಿಗೂ; ಆ ಮಗು ಎಲ್ಲೇ ವಾಸಿಸುತ್ತಿದ್ದರೂ ಲಭ್ಯವಾಗಬೇಕೆಂದು ಶ್ರಮಿಸಲಿದೆ.
ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ತಲುಪಲಿರುವ ಎಐ ಮಾರ್ಗದರ್ಶನ
ಆರ್ಟ್ ಆಫ್ ಲಿವಿಂಗ್ನ ಉಚಿತ ಶಾಲಾ ಚಳುವಳಿಯಾದ “ಗಿಫ್ಟ್ ಎ ಸ್ಮೈಲ್” ನೊಡನೆ ಸ್ಕೂಲ್ ಎಕ್ಸೆಲ್ ಸಹಯೋಗವನ್ನು ಹೊಂದಲಿದ್ದು, ಇದರಿಂದ ನೇರವಾಗಿ, 22 ರಾಜ್ಯಗಳಲ್ಲಿರುವ, 1,327 ಕ್ಕಿಂತಲೂ ಹೆಚ್ಚು ಉಚಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಒಂದು ಲಕ್ಷ ಮಕ್ಕಳನ್ನು ತಲುಪಲಿದೆ. ಈ ಶಾಲೆಗಳು 2032 ಗ್ರಾಮೀಣ, ಬುಡಕಟ್ಟು ಮತ್ತು ನಗರದ ಸಮುದಾಯಗಳನ್ನು ಒಳಗೊಂಡಿದೆ. “ಕೇವಲ ಕೃತಕ ಬುದ್ಧಿಮತ್ತೆಯಲ್ಲದೆ, ಪ್ರತಿಯೊಂದು ಮಗುವಿಗೂ ಪ್ರಜ್ಞಾಪೂರ್ವಕವಾದ ಬುದ್ಧಿಮತ್ತೆ” ಎಂಬುದು ಈ ಯೋಜನೆಯ ಉದ್ದೇಶವಾಗಿದೆ.
ಸ್ಕೂಲ್ ಎಕ್ಸೆಲ್ ಎಐ ಮಾರ್ಗದರ್ಶನ, ಅನುಭವಾತ್ಮಕ ಸ್ಟೆಮ್ ಸಿಮುಲೇಷನ್ಗಳನ್ನು, ಭಾವನಾತ್ಮಕ ಫೀಡ್ ಬ್ಯಾಕನ್ನು ಮತ್ತು ಬಹುಭಾಷೆಗಳನ್ನು ಒಳಗೊಂಡಿರುವ ಭಾರತದ ಪ್ರಪ್ರಥಮ ವೇದಿಕೆಯಾಗಿದೆ. ಭಾರತವು ಇಂದು ಎದುರಿಸುತ್ತಿರುವ, ಎಐ ಬೆಂಬಲಿತ ಶಿಕ್ಷಣದ ಸವಾಲುಗಳಿಗೆ ಈ ವೇದಿಕೆಯು ಉತ್ತರವಾಗಿದೆ. ಇದರ ವೈಶಿಷ್ಟ್ಯತೆಯೆಂದರೆ, ಇದೊಂದು ಜವಾಬ್ದಾರಿಯುತವಾದ ವಿನ್ಯಾಸವಾಗಿದ್ದು, ತಾರತಮ್ಯ, ವಿಷಮತೆ ಮತ್ತು ದುರುಪಯೋಗದ ವಿರುದ್ಧ ರಕ್ಷಣೆಯನ್ನು ಒಳಗೊಂಡಿದ್ದು, ಸುರಕ್ಷಿತವಾದ, ಎಲ್ಲರನ್ನೂ ಒಳಗೊಂಡಂತಹ, ಪ್ರಜ್ಞಾಪೂರ್ವಕವಾದ ಕಲಿಕಾ ತಂತ್ರಜ್ಞಾನವು ಇದಾಗಿದೆ.
ಮಗುವನ್ನು ಕಲಿಕೆಗೆ ಆಕರ್ಷಿಸುವಂತಹ ಅನೇಕ ರೀತಿಗಳು ಸ್ಕೂಲ್ ಎಕ್ಸೆಲ್ ನಲ್ಲಿದೆ
ಸುಮೇರು ಎಜುಟೆಕ್ ಪ್ರೈವೇಟ್ ಲಿಮಿಟೆಡ್ ಸಿಇಒ ಹಾಗೂ ಸಹ ಸಂಸ್ಥಾಪಕರಾದ ಆಶಿಶ್ ಪಾಂಡ್ಯರವರು, “ಅನೇಕ ದಶಕಗಳವರೆಗೆ ಭಾರತೀಯ ಶಿಕ್ಷಣವು ಬಾಯಿಪಾಠ ಮಾಡಿ ನೆನಪಿನಲ್ಲಿಟ್ಟುಕೊಳ್ಳುವುದರ ಬಗ್ಗೆಯೇ ಆಗಿತ್ತು. ಇತ್ತೀಚಿನ ದಿನಗಳಲ್ಲಿ ಇದು ಬದಲಿಸುತ್ತಿರುವುದು ಸಂತಸದ ವಿಷಯವಾಗಿದೆ. ಮಗುವನ್ನು ಕಲಿಕೆಗೆ ಆಕರ್ಷಿಸುವಂತಹ ಅನೇಕ ರೀತಿಗಳು ಸ್ಕೂಲ್ ಎಕ್ಸೆಲ್ ನಲ್ಲಿದೆ. ಕೆಲವು ಮಕ್ಕಳು ಓದಿ ಕಲಿಯುತ್ತಾರೆ. ಕೆಲವು ಮಕ್ಕಳು ನೋಡಿ ಕಲಿಯುತ್ತಾರೆ. ಇತರ ಮಕ್ಕಳು ಸ್ಪರ್ಶದಿಂದ ಅಥವಾ ಪರಸ್ಪರ ಸಂಪರ್ಕದಿಂದ ಕಲಿಯುತ್ತಾರೆ. ಈ ಎಲ್ಲಾ ರೀತಿಯ ಕಲಿಕೆಗೂ, ಪ್ರತಿಯೊಂದು ವಿಷಯದಲ್ಲೂ ಈ ಎಐ ಮಾದರಿಯು ಸಹಾಯ ಮಾಡುತ್ತದೆ” ಎನ್ನುತ್ತಾರೆ.
ಹಾರ್ವರ್ಡ್ನ ನೀತಿ ತಜ್ಞರಾದ, ಯುನೆಸ್ಕೋದ ಸಲಹಾಗಾರರಾದ ದರ್ಶ್ ಗೊಲೆಚ್ಚಾರವರು, “ಸ್ಕೂಲ್ ಎಕ್ಸೆಲ್ ಕೇವಲ ಮತ್ತೊಂದು ಕಲಿಕಾ ತಂತ್ರಜ್ಞಾನದ ವೇದಿಕೆಯಲ್ಲ. ಭಾರತದ ಅನುಪಮವಾದ ಸವಾಲುಗಳಿಗೆ ಇದು ಸಮಗ್ರ ಪರಿಹಾರವನ್ನು ಕೊಡುವುದರೊಡನೆ, ಅತ್ಯುನ್ನತ ಸುರಕ್ಷತಾ ಮಟ್ಟವನ್ನೂ ಹೊಂದಿದೆ” ಎನ್ನುತ್ತಾರೆ.
ಇದರಿಂದ ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚು ಗಮನ ಕೊಡಲಿದ್ದಾರೆ
ಪ್ರತಿಯೊಂದು ಮಗುವಿಗೂ ವೈಯಕ್ತಿಕವಾದ ಎಐ ಮಾರ್ಗದರ್ಶಕರಿದ್ದು, ಅದು ಸಂಶಯಗಳನ್ನು ನಿವಾರಿಸುತ್ತದೆ, ಸ್ಫೂರ್ತಿ ನೀಡುತ್ತದೆ, ಮತ್ತು ಕಲಿಯುತ್ತಿರುವವರ ವೇಗಕ್ಕೆ ಒಗ್ಗಿಕೊಳ್ಳುತ್ತದೆ. ಆಡಿಯೋ ಮತ್ತು ಪಾಡ್ ಕಾಸ್ಟ್ ಕಲಿಕೆಯನ್ನೂ ಇದು ಬೆಂಬಲಿಸುತ್ತದೆ. ಇದು ಕಡಿಮೆ ಬ್ಯಾಂಡ್ ವಿಡ್ತ್ ಇರುವ ಗ್ರಾಮೀಣ ಪ್ರದೇಶಗಳಲ್ಲಿ ಬಹಳ ಸಹಾಯಕವಾಗುತ್ತದೆ.
ಇದರೊಡನೆ ಎಐ ಬೆಂಬಲಿತವಾದ ದೃಶ್ಯದ ಫೀಡ್ ಬ್ಯಾಕ್ ನಿಂದಾಗಿ ವಿದ್ಯಾರ್ಥಿಗಳು ಕಲಿಕೆಗೆ ಎಷ್ಟು ಗಮನ ಕೊಡುತ್ತಿದ್ದಾರೆ ಮತ್ತು ಅವರಿಗೆ ದಣಿವಾಗುತ್ತಿದ್ದೆಯೇ ಎಂಬುದನ್ನು ಅದು ಅರಿತು, ಯಾವಾಗ ವಿರಾಮವನ್ನು ಪಡೆಯಬೇಕು, ಏಕಾಗ್ರತೆಯನ್ನು ಹೇಗೆ ಹೆಚ್ಚಿಸಿಕೊಳ್ಳುವುದು ಎಂದು ತಿಳಿಸುತ್ತದೆ. 3,500 ಕ್ಕೂ ಹೆಚ್ಚು ಸಿಮ್ಯುಲೇಶನ್‌ಗಳು ಮತ್ತು ವರ್ಚುವಲ್ ಲ್ಯಾಬ್‌ಗಳೊಂದಿಗೆ, ಮಕ್ಕಳು ಸುರಕ್ಷಿತ, ಸಂವಾದಾತ್ಮಕ, ಪ್ರಾಯೋಗಿಕ ಅನುಭವಗಳ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅನ್ವೇಷಿಸಬಹುದು.
ಮೌಕಿಕ ಪರೀಕ್ಷೆಯನ್ನು ಮೀರಿ ಮೌಲ್ಯಮಾಪನ
120 ಶಾಲೆಗಳನ್ನು ನಡೆಸುತ್ತಿರುವ ಶ್ರೀ ಶ್ರೀ ರವಿ ಶಂಕರ್ ವಿದ್ಯಾ ಮಂದಿರದ ಅಧ್ಯಕ್ಷರಾದ ಕಮೋಡರ್ ಹೆಚ್, ಜಿ ಹರ್ಷರವರು, “ಇದರಿಂದ ಶಿಕ್ಷಕರ ಮೇಲಿನ ಹೊರೆ ಕಡಿಮೆಯಾಗುತ್ತದೆ ಮತ್ತು ಕಕ್ಷೆಗಳಲ್ಲಿ ಸೃಜನಶೀಲತೆಯನ್ನೂ ತರುತ್ತದೆ. ಅನೇಕ ಎಐ ಬೆಂಬಲಿತ ವ್ಯವಸ್ಥೆಗಳ ಮೌಲ್ಯಮಾಪನವನ್ನು ಮಾಡಿದ್ದೇವೆ. ಸ್ಕೂಲ್ ಎಕ್ಸೆಲ್ ನೊಡನೆ ನಮ್ಮ ಸಹಯೋಗವು ಬಹಳ ಹರುಷವನ್ನು ತಂದಿದೆ” ಎಂದು ಹಂಚಿಕೊಂಡರು.
ಸ್ಕೂಲ್ ಎಕ್ಸೆಲ್ ಎಲ್ಲಾ ಭಾರತೀಯ ಭಾಷೆಗಳಲ್ಲಿ ಕಲಿಕೆಯನ್ನು ಬೆಂಬಲಿಸುತ್ತದೆ, ಇದು NEP 2020 ರ ಮಾತೃಭಾಷೆಗೆ ಒತ್ತು ನೀಡುವಿಕೆಗೆ ಅನುಗುಣವಾಗಿದೆ. ಮೌಲ್ಯಮಾಪನಗಳು ಭಾಗಶಃ ಕ್ರೆಡಿಟ್ ಮತ್ತು ವಿವರಣೆಗಳನ್ನು ನೀಡುವ ಮೂಲಕ ಮೌಖಿಕ ಪರೀಕ್ಷೆಯನ್ನು ಮೀರಿ ಹೋಗುತ್ತವೆ, ಸರಳ ಸರಿ-ತಪ್ಪು ಶ್ರೇಣೀಕರಣ ವ್ಯವಸ್ಥೆಗಿಂತ ಬೆಳವಣಿಗೆಯ ಮನಸ್ಥಿತಿಯನ್ನು ಪ್ರೋತ್ಸಾಹಿಸುತ್ತವೆ.
ಜಾಗತಿಕ ತಂತ್ರಜ್ಞಾನ ಆವಿಷ್ಕಾರರಾದ ರಸ್ ಫೋಲ್ಟ್ಜ್-ಸ್ಮಿತ್ ರವರು, “ಈ ವ್ಯವಸ್ಥೆಗೆ ಒಗ್ಗಿಕೊಳ್ಳುವ ಸಾಮರ್ಥ್ಯವಿದೆ. ಶಿಕ್ಷಣದ ಭವಿಷ್ಯದ ಬಗ್ಗೆ ನಿಖರವಾಗಿ ಹೇಳಲಾಗುವುದಿಲ್ಲ. ಆದ್ದರಿಂದಲೇ ಸ್ಕೂಲ್ ಎಕ್ಸೆಲ್ನಂತಹ ಯತ್ನದಲ್ಲಿ ನನಗೆ ನಂಬಿಕೆಯಿದೆ. ಜನರು ಹಾಗೂ ತಂತ್ರಜ್ಞಾನವು ಒಗ್ಗಿಕೊಳ್ಳುವಂತಹ ವ್ಯವಸ್ಥೆಗಳ ನಿರ್ಮಾಣ ಅತ್ಯಾವಶ್ಯಕ. ನಮ್ಮ ಮಕ್ಕಳಿಗೆ ಬೇಕಾಗಿರುವುದು ಇದೇ” ಎನ್ನುತ್ತಾರೆ.
ಭಾರತದಲ್ಲಿ ವಿನ್ಯಾಸಗೊಂಡಿರುವ, ಜಮೈಕಾದಲ್ಲೂ ಉಪಯೋಗಿಸಲ್ಪಡುತ್ತಿರುವ ಈ ತಂತ್ರಜ್ಞಾನವು, ಜಾಗತಿಕ ಹಂತದಲ್ಲೂ ಇದೆ ಮತ್ತು ಸಾಂಸ್ಕೃತಿಕವಾಗಿಯೂ ಮಹತ್ವವಾಗಿದೆ.
ಮೌಲ್ಯಾಧಾರಿತ ಶಿಕ್ಷಣದ ಪರಿಸರ ನಿರ್ಮಾಣ
ಕಳೆದ ನಾಲ್ಕು ದಶಕಗಳಿಂದ ಆರ್ಟ್ ಆಫ್ ಲಿವಿಂಗ್ ನ ಗಿಫ್ಟ್ ಎ ಸ್ಮೈಲ್ ಯೋಜನೆಯು ತನ್ನ ಉಚಿತ ಶಾಲೆಗಳ ಮೂಲಕ ಹಿಂದುಳಿದ ಸಮುದಾಯಗಳಿಗೆ ಶಿಕ್ಷಣವನ್ನು ನೀಡುತ್ತಲಿದೆ. ಸುಮೇರು ಎಜುಟೆಕ್ ನ ಸ್ಕೂಲ್ ಎಕ್ಸೆಲ್ ನ ಲೋಕಾರ್ಪಣೆಯಿಂದ ಈ ದೃಷ್ಟಿಕೋನವು ಭವಿಷ್ಯದೆಡೆಗೆ ದೊಡ್ಡ ಜಿಗಿತವಾಗಿದ್ದು, ಡಿಜಿಟಲ್ ಕಲಿಕೆಯ ಅಂತರವನ್ನು ಕುಗ್ಗಿಸುತ್ತದೆ. ಎಐ ಕಲಿಕೆಯಿಂದ ಕಲಿಕೆಯ ಕುತೂಹಲ ಕೆರಳುತ್ತದೆ, ಕಲಿಕೆಯು ವಿನೋದಮಯವಾಗಿರುತ್ತದೆ. ಇದರೊಡನೆ ಮಗುವಿಗೆ ಪ್ರಜ್ಞಾಪೂರ್ವಕವಾಗಿ, ಬೆಂಬಲವನ್ನು ನೀಡುವ, ಮೌಲ್ಯಾಧಾರಿತ ಶಿಕ್ಷಣದ ಪರಿಸರವನ್ನೂ ಕಲ್ಪಿಸುತ್ತದೆ.
ಈ ವೇದಿಕೆಯಲ್ಲಿ 10 ಕ್ಕಿಂತಲೂ ಹೆಚ್ಚು ಶಿಕ್ಷಕರಿದ್ದಾರೆ, 40 ಕ್ಕಿಂತಲೂ ಹೆಚ್ಚು ಡೆವಲಪರ್ ಗಳಿದ್ದಾರೆ. 14 ವರ್ಷಗಳು ನಿರ್ದಿಷ್ಟವಾಗಿ ಎಐ ಮತ್ತು ಬ್ಲಾಕ್ ಚೇನ್ ಡೊಮೇನ್ ನಲ್ಲಿ ಅನುಭವವನ್ನು ಹೊಂದಿರುವ ಸಹ ಸಂಸ್ಥಾಪಕರಾದ ಹಿಮಾಂಶು ದೇಸಾಯಿ ಇದರ ತಂತ್ರಜ್ಞಾನದ ಮುಖ್ಯಸ್ಥರಾಗಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: www.schoolexl.com ಗೆ ಭೇಟಿ ನೀಡಿ.