Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

2027ರಲ್ಲೇ ಎಐ ಆಡಳಿತ- ಅಬುಧಾಬಿಯ ಮಹತ್ವಾಕಾಂಕ್ಷಿ ಯೋಜನೆ

Spread the love

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಎಲ್ಲಾ ಕ್ಷೇತ್ರದಲ್ಲಿ ಬಳಕೆಯಾಗುತ್ತಿದೆ. ಆದರೆ ಅಬುಧಾಬಿ ಎಲ್ಲರಿಗಿಂತ ಹಲವು ಹೆಜ್ಜೆ ಮುಂದಿದೆ. ಕಾರಣ ಅಬುಧಾಬಿ ಶೀಘ್ರದಲ್ಲೇ ಸಂಪೂರ್ಣ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಚಾಲಿತ ಸರ್ಕಾರ ಹಾಗೂ ಆಡಳಿತಕ್ಕೆ ಸಾಕ್ಷಿಯಾಗುತ್ತಿದೆ. ಏನಿದು ನೇಟೀವ್ ಎಐ ಸಿಟಿ? ಅಬುಧಾಬಿ(ಏ.02) ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕುರಿತು ಹಲವು ಚರ್ಚೆಗಳು ನಡೆಯುತ್ತಿದೆ. ಪರ ವಿರೋಧಗಳು, ಕೆಲಸ ಕಳೆದುಕೊಳ್ಳುವ ಭೀತಿ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಯುತ್ತಿದೆ. ಇದರ ನಡುವೆ ಅಬುಧಾಬಿ ವಿಶ್ವವನ್ನೇ ಚಕಿತಗೊಲಿಸಿದೆ. 2027ರ ವೇಳೆಗೆ ಅಬುಧಾಬಿ ಸಂಪೂರ್ಣ ಎಐ ಚಾಲಿತ ಸರ್ಕಾರ ದೇಶವಾಗಲಿದೆ ಎಂದು ಘೋಷಿಸಿದೆ. ಇದಕ್ಕಾಗಿ 2025-27ರ ರೋಡ್‌ಮ್ಯಾಪ್ ಬಹಿರಂಗಪಡಿಸಿದೆ. ಅಬುಧಾಬಿ ಸರ್ಕಾರದ ಡಿಜಿಟಲ್ ರಣತಂತ್ರ 2025-27
ಅಬುಧಾಬಿ ಮಹತ್ವದ ಡಿಜಿಟಲ್ ಸ್ಟ್ರಾಟರ್ಜಿ 2025-27 ಪ್ಲಾನ್ ಘೋಷಿಸಿದೆ. ಇದಕ್ಕಾಗಿ ಬರೋಬ್ಬರಿ AED 13 ಬಿಲಿಯನ್ ಮೊತ್ತವನ್ನು ಮೀಲಿಟ್ಟಿದೆ. ಇದು ಸರ್ಕಾರದ ದಕ್ಷತೆ ಹೆಚ್ಚಿಸಲು ಮಾಡಿರುವ ಯೋಜನೆಯಲ್ಲ, ಇದರ ಜೊತೆಗೆ ಇದು ಭವಿಷ್ಯದ ಪ್ಲಾನ್. ಜಗತ್ತು ಎಐ ಚಾಲಿತ ಸರ್ಕಾರಕ್ಕೆ ಹೊರಳುವಾಗ ಅಬುಧಾಬಿ ಎಲ್ಲರಿಗಿಂತ ಮುಂಚೆ ದಕ್ಷ, ಪಾರದರ್ಶಕ ಹಾಗೂ ಸ್ವಚ್ಚ ಆಡಳಿತ ಎಐ ಮೂಲಕ ನೀಡಲಿದೆ. ಡಿಜಿಟಲ್ ಸ್ಟ್ರಾಟರ್ಜಿ 2025-27 ಪ್ರಮುಖ ಹೈಲೈಟ್ಸ್
ಸರ್ಕಾರಿ ಪ್ರಕ್ರಿಯೆಗಳಲ್ಲಿ ಶೇಕಡಾ 100 ರಷ್ಟು ಆಟೋಮೇಶನ್
2,000ಕ್ಕೂ ಹೆಚ್ಚು ಡಿಜಿಟಲ್ ಸರ್ವೀಸ್ ಎಐ ಮೂಲಕ ಕಾರ್ಯನಿರ್ವಹಣೆ
ಎಲ್ಲಾ ಕ್ಷೇತ್ರದಲ್ಲಿ 200ಕ್ಕೂ ಹೆಚ್ಚು ಎಐ ಸೊಲ್ಯೂಶನ್
ಇದರಿಂದ ಜಿಡಿಪಿಗೆ AED 24 ಬಿಲಿಯನ್ ಕೊಡುಗೆ
ಈ ಯೋಜನೆಯಿಂದ 2027ರ ವೇಳೆಗೆ 5,000+ ಹೊಸ ಉದ್ಯೋಗ ಸೃಷ್ಟಿ
ಎಐ ಮೂಲಕ ಶೇಕಡಾ 80 ರಷ್ಟು ಸೇವೆಗಳು ಅತೀ ವೇಗ ಹಾಗೂ ನಿಖರತೆಯೊದಿಗೆ ಸಿಗಲಿದೆ.

ಎಐ ಚಾಲಿತ ಸರ್ಕಾರಕ್ಕಾಗಿ ಅಬಧಾಬಿ ಈಗಲೇ ಮೂಲಭೂತ ಸೌಕರ್ಯ ಒದಗಿಸುವ ಕಾರ್ಯಗಳು ಆರಂಭಗೊಂಡಿದೆ. ಸರ್ಕಾರದ ಆಡಳಿ, ನಿರ್ವವಹಣೆ ಪ್ರಕ್ರಿಯ, ಕಾರ್ಯಾಚರಣೆ ಎಲ್ಲವನ್ನೂ ಎಐ ವ್ಯಾಪ್ತಿಗೆ ತರುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಎಐ ಚಾಲಿತ ಆಡಳಿತದಲ್ಲಿ ಎದುರಾಗವು ಸವಾಲು, ಆಗಬೇಕಾದ ಕೆಲಸಗಳು, ತಯಾರಿಗಳ ಕುರಿತು ತರಬೇತಿ ನೀಡಲಾಗತ್ತಿದೆ.

ಎಐ ಸರ್ಕಾರ ಆಡಳಿತ ವ್ಯವಸ್ಥೆಯಿಂದ ಯಾವುದೇ ಯೋಜನಗಳು ಸ್ಪಷ್ಟವಾಗಿ ಜಾರಿಯಾಗಲಿದೆ. ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರಲಿದೆ. ಇದರ ಜೊತೆಗೆ ಜನರಿಗೆ ತ್ವರಿತಗತಿಯಲ್ಲಿ ಪರಿಹಾರ ಸಿಗಲಿದೆ. ಸಮಸ್ಯೆಗೆ ತಕ್ಷಣದ ಸ್ಪಂದನೆ, ಅದಕ್ಕೆ ಪರಿಹಾರ ಲಭ್ಯವಾಗಲಿದೆ. ಫೈಲ್ ಹಿಡಿದು ಅಲೆದಾಡುವ ಪ್ರೇಮೆಯ ಇಲ್ಲ. ಸರ್ಕಾರದ ಸೇವೆಗಳು, ಪ್ರಕ್ರಿಯೆಗಳು ಹೆಚ್ಚು ಪಾರದರ್ಶಕವಾಗಿರಲಿದೆ. ಇದರಿಂದ ದಕ್ಷ ಹಾಗೂ ಅಭಿವೃದ್ಧಿ ಆಡಳಿತಕ್ಕೆ ನೆರವಾಗಲಿದೆ.2027ರಲ್ಲೇ ಎಐ ಆಡಳಿತ- ಅಬುಧಾಬಿಯ ಮಹತ್ವಾಕಾಂಕ್ಷಿ ಯೋಜನೆ2027ರಲ್ಲೇ ಎಐ ಆಡಳಿತ- ಅಬುಧಾಬಿಯ ಮಹತ್ವಾಕಾಂಕ್ಷಿ ಯೋಜನೆ.


Spread the love
Share:

administrator

Leave a Reply

Your email address will not be published. Required fields are marked *