Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಎಐ ಏನು ಬೇಕಾದ್ರೂ ಮಾಡಲಿ, ಈ ಉದ್ಯೋಗಗಳಿಗೆ ಮಾತ್ರ ಲೇಆಫ್ ಅಸಾಧ್ಯ!

Spread the love

ಇಂದು ಸಾಕಷ್ಟು ಕಂಪೆನಿಗಳು ಲೇಆಫ್‌ ಮಾಡುತ್ತಿವೆ. ಕೃಷಿ ಮಾಡಲು ಜನರಿಲ್ಲ ಎಂದು ಮಶಿನ್‌ಗಳ ಮೇಲೆ ಆಧಾರಿತರಾಗುತ್ತಿದ್ದೇವೆ. ಇನ್ನೊಂದು ಕಡೆ ಎಐ ತಂತ್ರಜ್ಞಾನವು ನೂರು ಜನರು ನೂರು ದಿನ ಮಾಡುವ ಕೆಲಸವನ್ನು ಒಂದೇ ದಿನದಲ್ಲಿ ಮಾಡಿ, ಉದ್ಯೋಗಿಗಳ ಲೇಆಫ್‌ ಮಾಡುತ್ತಿದೆ. ಹೀಗಿರುವಾಗ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಕೂಡ ಈ ಉದ್ಯೋಗಳಿಗೆ ಮಾತ್ರ ಹೊಡೆತ ಬೀಳೋದಿಲ್ಲ. ಅವು ಯಾವುವು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. ಸಾಮಾಜಿಕ ಕಾರ್ಯಕರ್ತರು
AI ಡೇಟಾವನ್ನು ವಿಶ್ಲೇಷಿಸಬಹುದು, ಆದರೆ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಅಥವಾ ನೈತಿಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್. ಉದಾಹರಣೆಗೆ ಜೇನ್ ಮಾದಕ ವಸ್ತು ಬಳಕೆಯ ಬಗ್ಗೆ ಗೌಪ್ಯ ಮಾಹಿತಿ ಗೊತ್ತಾದಾಗ, ಗೌಪ್ಯತೆಯನ್ನು ಕಾಪಾಡುವ, ಮಕ್ಕಳ ಸುರಕ್ಷತೆಯನ್ನು ಖಾತ್ರಿಪಡಿಸುವ ನಡುವೆ ನಿರ್ಧಾರ ತೆಗೆದುಕೊಳ್ಳಬೇಕು. AIಗೆ ಇಂತಹ ಸೂಕ್ಷ್ಮ ಸಂದರ್ಭದ ಮ್ಯಾನೇಜ್‌ ಮಾಡಲು ಬರೋದಿಲ್ಲ. ವೈದ್ಯರು, ಆರೋಗ್ಯ ಕಾರ್ಯಕರ್ತರು
AI ತಂತ್ರಜ್ಞಾನವು ಆರೋಗ್ಯ ಕ್ಷೇತ್ರದಲ್ಲಿ ಸೆಪ್ಸಿಸ್, ಕ್ಯಾನ್ಸರ್ ಪತ್ತೆಯಂತಹ ಕ್ರಾಂತಿಕಾರಿ ಬದಲಾವಣೆ ತರುತ್ತಿದೆ. ಆದರೆ, ವೈದ್ಯರ ಚೆಕಪ್‌, ನಿರ್ಧಾರ ತಗೊಳ್ಳೋದು, ಭಾವನಾತ್ಮಕ ಬೆಂಬಲವನ್ನು AI ಕೊಡಲಾಗೋದಿಲ್ಲ. 60% ಜನರು AI ಆಧಾರಿತ ಆರೋಗ್ಯ ಸೇವೆಯ ಬಗ್ಗೆ ಕಿರಿಕಿರಿ ಅನುಭವಿಸುತ್ತಾರೆ. AI ಕೂಡ ಮಾನವ ವೈದ್ಯರ ಸಹಯೋಗದೊಂದಿಗೆ ಕೆಲಸ ಮಾಡುತ್ತದೆ, ಆದರೆ ಅವರ ಸ್ಥಾನವನ್ನು ತುಂಬುವುದಿಲ್ಲ.ಕಲಾತ್ಮಕ ಪ್ರದರ್ಶನ
ಕಲಾತ್ಮಕ ಪ್ರದರ್ಶನವು AIಗೆ ಸಂಪೂರ್ಣವಾಗಿ ಬದಲಾಯಿಸಲಾಗದ ಕ್ಷೇತ್ರವಾಗಿದೆ. AI ಪ್ರದರ್ಶನವನ್ನು ಸುಧಾರಿಸಬಹುದಾದರೂ, ಗಾಯನ, ನಟನೆ, ವೇದಿಕೆ ಪ್ರದರ್ಶನದಂತಹ ಕಲೆಯನ್ನು ಮನುಷ್ಯರಂತೆ ಅನುಕರಿಸಲಾರದು. ಡೀಪ್‌ಫೇಕ್, 3D ಮಾಡೆಲಿಂಗ್‌ನಂತಹ ತಂತ್ರಜ್ಞಾನಗಳು ಸಿನಿಮಾ ಇಂಡಸ್ಟ್ರಿಯನ್ನು ಬದಲಾಯಿಸಬಹುದು. ಆದರೆ ಕಲಾವಿದರ ಭಾವನೆಯು ಹೊರಹಾಕೋದು ಮುಖ್ಯ ಆಗುತ್ತದೆ.

ನಾಯಕತ್ವ ಗುಣಗಳು
ಒಂದು ಉತ್ತಮ ಲೀಡರ್‌ಶಿಪ್‌ಗೆ ನಿರ್ಧಾರ ತೆಗೆದುಕೊಳ್ಳುವುದು, ಸಂವಹನ ಕೌಶಲ್ಯಗಳು ಬೇಕು. ಇದನ್ನು AI ಮಾಡುವುದಿಲ್ಲ. 57% ಜನರು AIಗೆ ಮಾನವ ನಾಯಕರಂತೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಭಾವಿಸುತ್ತಾರೆ. AI ಸಾಮಾನ್ಯ ಕಾರ್ಯಗಳನ್ನು ನಿರ್ವಹಿಸಬಹುದು, ಆದರೆ ದೃಷ್ಟಿಕೋನ, ಪ್ರೇರಣೆಯಂತಹ ಗುಣಗಳನ್ನು ನೀಡುವುದಿಲ್ಲ.

ಆಧ್ಯಾತ್ಮಿಕ ಪಾತ್ರಗಳು
AI ಧಾರ್ಮಿಕ ಸೇವೆಗಳನ್ನು ಬದಲಾಯಿಸಲಾರದು, ಏಕೆಂದರೆ ಇದು ಮಾನವ ಸಂಪರ್ಕ, ಸಮುದಾಯದ ಪ್ರಜ್ಞೆಯನ್ನು ಕೆಡಿಸಬಹುದು. ಉದಾಹರಣೆಗೆ, AI ಪಾದ್ರಿ ಫಾದರ್ ಜಸ್ಟಿನ್ ತಪ್ಪಾದ ಶಿಫಾರಸುಗಳಿಂದಾಗಿ ಮುಚ್ಚಲ್ಪಟ್ಟಿತು. ಎಐಗೆ ಸಲಹೆ, ಆರಾಮ ಒದಗಿಸಲು ಸಾಧ್ಯವಿಲ್ಲ.

ರಾಜಕಾರಣಿಗಳು
ರಾಜಕಾರಣಿಗಳಿಗೆ ಮಾತುಕತೆ, ಸಹಾನುಭೂತಿಯ ಕೌಶಲ ಬೇಕು. AI ಸಂಕೀರ್ಣ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಲಾರದು.

ಕೌಶಲ್ಯಪೂರ್ಣ ವೃತ್ತಿಗಳು
ಕಂಚಿನ ಕೆಲಸಗಾರ, ವಿದ್ಯುತ್ ಕೆಲಸಗಾರರಂತಹ ವೃತ್ತಿಗಳಿಗೆ ಚಾಕಚಕ್ಯತೆ, ಸಮಸ್ಯೆ-ಪರಿಹಾರ ಬೇಕು, ಇದು AIಗೆ ಕಷ್ಟ. AI ಪೂರ್ವಭಾವಿ ನಿರ್ವಹಣೆಯಲ್ಲಿ ಸಹಾಯ ಮಾಡಬಹುದು, ಆದರೆ ಮಾನವ ಸಂವಾದ, ಸಹಾನುಭೂತಿಯನ್ನು ಬದಲಾಯಿಸಲಾರದು.

ಶಿಕ್ಷಕರು
AI ಶಿಕ್ಷಣವನ್ನು ವೈಯಕ್ತಿಕ ಕಲಿಕೆಯ ಮೂಲಕ ಸುಧಾರಿಸಬಹುದು, ಆದರೆ ಶಿಕ್ಷಕರ ಮಾರ್ಗದರ್ಶನ, ಶಿಕ್ಷಕ-ವಿದ್ಯಾರ್ಥಿ ಸಂಬಂಧವನ್ನು ಸೃಷ್ಟಿ ಮಾಡೋದಿಲ್ಲ. ಕೋವಿಡ್-19 ಸಾಂಕ್ರಾಮಿಕವು ರಿಮೋಟ್ ಕಲಿಕೆಯ ಸವಾಲುಗಳನ್ನು ತೋರಿಸಿತು. ಪೋಷಕರು ಮಾನವ ಶಿಕ್ಷಕರಿಗೆ ಆದ್ಯತೆ ನೀಡುತ್ತಾರೆ.

ತಂತ್ರಜ್ಞಾನ ಮುಂದುವರೆದಿರಬಹುದು, ಆದರೆ ಮಾನವನ ಭಾವನೆಗಳನ್ನು ಅದು ರಿಪ್ಲೇಸ್‌ಮೆಂಟ್‌ ಮಾಡೋದಿಲ್ಲ. ಒಟ್ಟಿನಲ್ಲಿ ಎಐ ತಂತ್ರಜ್ಞಾನದ ಬೆಳವಣಿಗೆ ಇನ್ಮುಂದೆ ಎಲ್ಲಿಗೆ ಹೋಗಿ ಮುಟ್ಟತ್ತೋ ಏನೋ! ಆದರೆ ಸಾಕಷ್ಟು ಕೌಶಲ ಹೊಂದಿದ್ದಲ್ಲಿ ಮಾತ್ರ ಕೆಲಸವನ್ನು ಉಳಿಸಿಕೊಳ್ಳಬಹುದು. ಏನಂತೀತಾ? ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?


Spread the love
Share:

administrator

Leave a Reply

Your email address will not be published. Required fields are marked *