Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಿದ್ದರಾಮಯ್ಯ ಪರ ತವರು ಜಿಲ್ಲೆಯಲ್ಲೇ ‘ಅಹಿಂದ’ ಕಹಳೆ: ಜನವರಿ 25ಕ್ಕೆ ಮೈಸೂರಿನಲ್ಲಿ ಬೃಹತ್ ಸಮಾವೇಶ!”

Spread the love

ಮೈಸೂರು: ಮೈಕೊರೆಯುವ ಚಳಿಯಲ್ಲೂ ರಾಜ್ಯ ರಾಜಕಾರಣದಲ್ಲಿ ಕುರ್ಚಿ ಕದನ ಕಾವೇರಿದೆ. ಜನವರಿ 6 ರಂದು ಸಿಎಂ ಸಿದ್ದರಾಮಯ್ಯ (Siddaramaiah) ಸುದೀರ್ಘ ಅವಧಿಯ ಸಿಎಂ ಎಂಬ ದಾಖಲೆ ಬರೆಯಲಿದ್ದಾರೆ. ಇದೇ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಆಗಲಿದೆ ಎಂಬ ನಿರೀಕ್ಷೆಯಲ್ಲಿ ಡಿಕೆಶಿ ಬಣ ಇದೆ. ಆದರೆ ಸಿದ್ದರಾಮಯ್ಯಗೆ ಬಲ ತುಂಬಲು ತವರು ಜಿಲ್ಲೆಯಲ್ಲೇ ಅಹಿಂದ ಕಹಳೆ (Ahinda Conference) ಮೊಳಗಲಿದೆ.

ಜನವರಿ 25ಕ್ಕೆ ಮೈಸೂರಿನಲ್ಲಿ ಅಹಿಂದ ಸಮಾವೇಶ ನಡೆಯಲಿದೆ. ಈ ಮೂಲಕ ಸಿಎಂ ಬದಲಾವಣೆ ಆಗಬಾರದು ಎಂದು ಒತ್ತಡ ಸೃಷ್ಟಿಸುವ ಉದ್ದೇಶ ಈ ಸಮಾವೇಶದ್ದಾಗಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ವತಿಯಿಂದ ಮೈಸೂರಿನಲ್ಲಿ ಪೂರ್ವಭಾವಿ ಸಭೆ ನಡೆಸಿದೆ. ಮೈಸೂರಿನ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಅಹಿಂದ ಸಮಾವೇಶ ನಡೆದಲು ಉದ್ದೇಶಿಸಲಾಗಿದೆ. ಅಹಿಂದ ಸಮಾವೇಶಕ್ಕೆ ಸುಮಾರು 15 ರಿಂದ 20 ಸಾವಿರ ಜನರನ್ನು ಸೇರಿಸಲು ಪ್ಲ್ಯಾನ್ ಮಾಡಲಾಗಿದೆ.

ಅಹಿಂದ ಸಮಾವೇಶದಲ್ಲಿ ಸಿಎಂ ಭಾಗಿಯಾಗಲ್ಲ. ಅವರ ಬೆಂಬಲಿಗರು, ಚಿಂತಕರು, ಸಾಹಿತಿಗಳು ಭಾಗಿಯಾಗಲಿದ್ದಾರೆ. ಇನ್ನೂ, ಅಹಿಂದ ಸಮಾವೇಶಕ್ಕೆ ಡಿಕೆಶಿ ಒಳ್ಳೆದಾಗಲಿ ಎಂದಿದ್ದಾರೆ. ಇನ್ನೂ, ಸಿದ್ದರಾಮಯ್ಯರನ್ನು ಕೆಳಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿರೋ ಸಚಿವ ಜಮೀರ್ ಅಹ್ಮದ್, 2028ವರೆಗೆ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದಿದ್ದಾರೆ


Spread the love
Share:

administrator

Leave a Reply

Your email address will not be published. Required fields are marked *