ಅಗ್ರಿಗೇಟರ್ ಕಂಪನಿಗಳ ಟಿಪ್ಸ್ ನ ಹಗಲು ದರೋಡೆ

ಬೆಂಗಳೂರು :ಅಗ್ರಿಗೇಟರ್ ಸಂಸ್ಥೆಗಳ ಹಗಲು ದರೋಡೆ ಮಿತಿಮೀರಿದ್ದು, ಪ್ರಯಾಣಿಕರು ಕಂಗಲಾಗಿದ್ದಾರೆ. ಅಗ್ರಿಗೇಟರ್ ಕಂಪನಿಗಳು ಪ್ರಯಾಣಿಕರಿಂದ ದುಪ್ಪಟ್ಟು ಟಿಪ್ಸ್‌ನ್ನು ಪಡೆದುಕೊಳ್ಳುತ್ತಿವೆ ಎಂಬ ಆರೋಪ ಎಲ್ಲೆಡೆ ಕೇಳಿಬರುತ್ತಿದೆ.

ಓಲಾ, ಉಬರ್, ರ‍್ಯಾಪಿಡೋ ಮುಂತಾದ ಅಗ್ರಿಗೇಟರ್ ಕಂಪನಿಗಳು ಈ ಸಮಸ್ಯೆಗೆ ಕಾರಣವೆಂದು ಪ್ರಯಾಣಿಕರು ಆರೋಪಿಸಲಾಗಿದೆ.
ಕೇಂದ್ರ ಸರ್ಕಾರ ನೋಟಿಸ್ ನೀಡಿದ್ದರೂ, ಕಂಪನಿಗಳು ಸ್ಪಂದಿಸುತ್ತಿಲ್ಲ. ಇದೇ ವಿಚಾರ ಎಲ್ಲೆಡೆ ಸಂಚಲನ ಮೂಡಿಸಿದೆ.
ಕ್ಯಾಬ್ ಬುಕ್ ಮಾಡುವಾಗ ಅಂದ್ರೆ 10 ರಿಂದ 100 ರೂ. ವರೆಗೆ ಟಿಪ್ಸ್ ಕೊಡಬೇಕು, ಇಲ್ಲಾಂದರೆ ಆಟೋ, ಕ್ಯಾಬ್ ಬರುವುದಿಲ್ಲ ಎಂಬ ರೂಲ್ಸ್ ಮಾಡಿದ್ದು, ಇದರ ವಿರುದ್ಧ ಪ್ರಯಾಣಿಕರು ಕೆಂಡವಾಗಿದ್ದಾರೆ..
ಕ್ಯಾಬ್ ಬುಕ್ ಮಾಡಬೇಕಾದ್ರೆ ಟಿಪ್ಸ್ ಅನ್ನೋ ಆಯಪ್ಷನ್ ನಿಮ್ಮ ಕಣ್ಣಿಗೆ ಕಾಣಿಸುತ್ತಿದೆ. ಹತ್ತೋ ಇಪ್ಪತ್ತೋ ಟಿಪ್ಸ್ ಆಯಡ್ ಮಾಡಿದರೆ, ಡ್ರೈವರ್ ಬರ್ತಾರೆ. ಹೀಗೆ ಜನರ ಅಸಹಾಕತೆಯನ್ನೇ ಈ ಆಯಪ್ಗಳು ಬಂಡಾವಳ ಮಾಡಿಕೊಳ್ಳುತ್ತಿವೆ. ಗ್ರಾಹಕರಿಗೆ ಗೊತ್ತೇ ಆಗದ ಹಾಗೇ ಹಣ ಪೀಕುತ್ತಿದ್ದು, ಈ ಬಗ್ಗೆ ಸ್ವತಃ ಕ್ಯಾಬ್ ಚಾಲಕರೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
