ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ಎಲಾನ್ ಮಸ್ಕ್ ತಣ್ಣಗಾದರು: ಮುನಿಸು ಶಮನ?

ವಾಷಿಂಗ್ಟನ್: ವಿಶ್ವದ ನಂ.1 ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಕ್ರಮದ ಘೋಷಣೆ ಮಾಡಿದ ಬೆನ್ನಲ್ಲೇ ಮಸ್ಕ್ ತಣ್ಣಗಾಗಿದ್ದಾರೆ. ಟ್ರಂಪ್ ಕುರಿತ ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಮಸ್ಕ್, ‘ಅಮೆರಿಕ ಅಧ್ಯಕ್ಷರ ಕುರಿತಾದ ನನ್ನ ಕೆಲವು ಹೇಳಿಕೆಗಳು ಮಿತಿಮೀರಿ ಹೋಗಿತ್ತು. ಆ ಬಗ್ಗೆ ನನಗೆ ವಿಷಾದವಿದೆ ಎಂದಿದ್ದಾರೆ.
ಅದರ ಬೆನ್ನಲ್ಲೇ ಟ್ರಂಪ್ ಕೂಡ ಮಸ್ಕ್ ಬಗ್ಗೆ ಮೃಧು ಧೋರಣೆ ತೋರಿದ್ದು, ‘ನಾನು ಅದರಿಂದ ಬೇಸರಗೊಂಡಿದ್ದೇನೆ. ಅದು ನಿಮಗೂ ತಿಳಿದಿದೆ. ಅದು ಹಾಗೆಯೇ ಇದೆ. ನನಗೆ ಸ್ವಲ್ಪ ನಿರಾಸೆಯಾಯಿತು. ಆದರೆ ನಾನು ನಾನು ಯಾವುದಕ್ಕೂ ಆತನನ್ನು ದೂಷಿಸುವುದಿಲ್ಲ’ ಎಂದಿದ್ದಾರೆ.ಈ ಬೆಳವಣಿಗೆ ಇಬ್ಬರ ನಡುವೆ ಮುನಿಸು ಶಮನದ ಸೂಚನೆ ಇರಬಹುದು ಎಂದು ವಿಶ್ಲೇಷಿಸಲಾಗಿದೆ. ಇತ್ತೀಚೆಗೆ ಟ್ರಂಪ್‌ರ ಕೆಲ ಯೋಜನೆಗಳನ್ನು ಮಸ್ಕ್ ಬಹಿರಂಗವಾಗಿ ದೂಷಿಸಿದ್ದರು. ಅದರ ಬೆನ್ನಲ್ಲೇ ಮಸ್ಕ್ ಕಂಪನಿಗೆ ನೀಡಿರುವ ಎಲ್ಲಾ ಗುತ್ತಿಗೆ ರದ್ದುಪಡಿಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದರು