ಕನ್ನಡ ವಿರೋಧಿ ಹೇಳಿಕೆ ವಿವಾದದ ಬೆನ್ನಲ್ಲೇ ಮತ್ತೆ ಕನ್ನಡ ಚಿತ್ರರಂಗದಲ್ಲಿ ಸೋನು ನಿಗಮ್: ಹಾಡಿಗೆ ಅನುಮತಿ ನೀಡಿದ ಚಲನಚಿತ್ರ ವಾಣಿಜ್ಯ ಮಂಡಳಿ

ಕನ್ನಡಿಗರನ್ನು ಕೆಣಕಿ, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದ ಗಾಯಕ ಸೋನು ನಿಗಮ್‌ಗೆ ಮತ್ತೆ ಮಣೆ ಹಾಕಲಾಗುತ್ತಿದೆ. ಹೌದು ಕೇವಲ ಮೂರು ತಿಂಗಳ ಹಿಂದಷ್ಟೇ ಕನ್ನಡಿಗರನ್ನು ಕೆಣಕಿ ರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಗಳಿಸಿದ್ದ ಸೋನು ನಿಗಮ್ ಇದೀಗ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದು ಈ ವಿಚಾರವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸೋನು ನಿಗಮ್ ಮಾತನಾಡಿದ್ದ ಮಾತು ಹಾಗೂ ಇದಾದ ಮೇಲೆ ಮಾಡಿದ್ದ ವಿಡಿಯೋ ಎರಡೂ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಕನ್ನಡಿಗರನ್ನು ಅವಮಾನ ಮಾಡಿದರೂ ಗಾಯಕ ಸೋನು ನಿಗಮ್ ಕನ್ನಡಿಗರ ಕ್ಷಮೆ ಕೇಳಿರಲಿಲ್ಲ.
ಇದೀಗ ಸೋನು ನಿಗಮ್ ಮತ್ತೆ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳಿಗೆ ಹಾಡುವುದಕ್ಕೆ ಮುಂದಾಗಿರುವುದು ಹಾಗೂ ಕೇವಲ ಮೂರು ತಿಂಗಳ ಅವಧಿಯಲ್ಲೇ ಮತ್ತೆ ವಾಪಸ್ ಬಂದಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ ಮೂರು ತಿಂಗಳ ಹಿಂದಷ್ಟೇ ಗಾಯಕ ಸೋನು ನಿಗಮ್ ಅವರು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು. ಕನ್ನಡಿಗರ ಬಗ್ಗೆ ಸೋನು ನಿಗಮ್ ಅವರು ಮಾತನಾಡಿದ್ದ ಮಾತುಗಳು ಹಾಗೂ ವಿಡಿಯೋ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಕೇವಲ ಮೂರು ತಿಂಗಳ ಹಿಂದೆ ಕನ್ನಡ .. ಕನ್ನಡ .. ಕನ್ನಡ ಎಂದು ಹೇಳಿ.. ಈ ವಿಡಿಯೋ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಅವರು ಮಾತನಾಡಿದ್ದು ಭಾರೀ ಅಸಮಾಧಾನಕ್ಕೆ ಕಾರಣವಾಗಿತ್ತು.
ಕಾರ್ಯಕ್ರಮವೊಂದರಲ್ಲಿ ಕನ್ನಡಿಗರೊಬ್ಬರು ಕನ್ನಡ ಹಾಡು ಕೇಳಿದ್ದಕ್ಕೆ ಸೋನು ನಿಗಮ್ ಅವರು ಗರಂ ಆಗಿದ್ದರು. ಅಲ್ಲದೇ ಸೋನು ನಿಗಮ್ ಅವರು ಈ ರೀತಿ ಕನ್ನಡ… ಕನ್ನಡ ಅಂತಾ ಹೇಳಿರುವುದಕ್ಕೆನೇ ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆದಿರುವುದು ಎಂದು ಹೇಳಿದ್ದರು. ಕನ್ನಡಿಗರ ಅಭಿಮಾನವನ್ನು ಭಯೋತ್ಪಾದಕ ಕೃತ್ಯಕ್ಕೆ ಹೋಲಿಕೆ ಮಾಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಕನ್ನಡ ಚಿತ್ರರಂಗದಿಂದ ಸೋನು ನಿಗಮ್ ಅವರನ್ನು ಬ್ಯಾನ್ ಮಾಡಬೇಕು ಎಂದು ಆಕ್ರೋಶ ಹೆಚ್ಚಾಗಿತ್ತು. ಅಲ್ಲದೇ ಸೋನು ನಿಗಮ್ ಕನ್ನಡಿಗರ ಕ್ಷಮೆ ಕೇಳದೆ ಇರುವುದಕ್ಕೆ ಅಸಮಾಧಾನ ವ್ಯಕ್ತವಾಗಿತ್ತು.
ಈ ವಿಚಾರವಾಗಿ ಕನ್ನಡ ಚಿತ್ರರಂಗದ ಮಾತೃ ಸಂಸ್ಥೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹ ಸೋನು ನಿಗಮ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ಗಾಯಕ ಸೋನು ನಿಗಮ್ ವಿರುದ್ಧ ಅಸಹಕಾರ ಚಳವಳಿಯನ್ನು ನಡೆಸಲಾಗಿತ್ತು. ಇಷ್ಟೆಲ್ಲಾ ನಡೆದ ಮೇಲೆ ಸೋನು ನಿಗಮ್ ಒಲ್ಲದ ಮನಸ್ಸಿನಿಂದಲೇ ಕ್ಷಮೆ ಕೇಳಿದ್ದರು. ಕ್ಷಮಿಸಿ ಕರ್ನಾಟಕ ನನ್ನ ಅಂಹಕಾರಕ್ಕಿಂತ ನಿಮ್ಮ ಮೇಲಿನ ಪ್ರೀತಿ ದೊಡ್ಡದು ಎಂದಿದ್ದರು.
ಈ ನಡುವೆ ಸೋನು ನಿಗಮ್ ಮೇಲೆ ಹೇರಿದ್ದ ನಿರ್ಬಂಧವನ್ನು ವಾಪಸ್ ಪಡೆದಿರುವುದು ಸುದ್ದಿಗೆ ಗ್ರಾಸವಾಗಿದೆ. ಹೌದು ಸೋನು ನಿಗಮ್ ”ನಿದ್ರಾದೇವಿ NEXT ಡೋರ್” ಎಂಬ ಸಿನಿಮಾದ ಹಾಡಿಗೆ ಧ್ವನಿಯಾಗಿದ್ದರು. ಕನ್ನಡಪರ ಹೋರಾಟಗಾರ ಪ್ರವೀಣ್ ಶೆಟ್ಟಿ ಅವರ ಪುತ್ರ ಪ್ರವೀರ್ ಶೆಟ್ಟಿ ಅಭಿನಯದ ಚಿತ್ರ ಇದಾಗಿದೆ.
ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು ಸೋನು ನಿಗಮ್ ಹಾಡಿರುವ ಹಾಡನ್ನು ಚಿತ್ರದಲ್ಲಿ ಬಳಸಿಕೊಳ್ಳಬೇಕೇ ಅಥವಾ ತೆಗೆದು ಹಾಕಬೇಕೇ ಎನ್ನುವ ಪ್ರಶ್ನೆ ಎದುರಾಗಿತ್ತು. ಈ ಸಮಯದಲ್ಲಿ ಹಾಡನ್ನು ಹಾಗೇ ಉಳಿಸಿಕೊಳ್ಳುವುದಕ್ಕೆ ಅವಕಾಶ ನೀಡಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ ನರಸಿಂಹಲು ಸೋನು ನಿಗಮ್ ಅವರಿಂದ, ಇನ್ಮುಂದೆ ಹಾಡನ್ನು ಹಾಡಿಸಲು ಬಯಸುವವರಿಗೆ ಈಗಾಗಲೇ ಹಾಡನ್ನು ಹಾಡಿಸಿರುವವರಿಗೆ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ. ಈ ಮೂಲಕ ಸೋನು ನಿಗಮ್ ಹಾಡು ಬಿಡುಗಡೆ ಆಗುತ್ತಿದೆ ಎಂದು ಹೇಳಲಾಗಿದೆ.