ತಂದೆ ಸತ್ತ ಬಳಿಕ ಮತ್ತೊಂದು ಮದುವೆ: ಹಣ, ಒಡವೆ ಕದ್ದು ಪ್ರಿಯಕರನೊಂದಿಗೆ ಓಡಿಹೋದ ಅಮ್ಮ!

ಲಕ್ನೋ: ಗಂಡನ ಸಾವಿನ ಬಳಿಕ ಮತ್ತೊಂದು ಮದುವೆಯಾಗೋದು ಮಹಿಳೆಯ ವಿವೇಚನೆಗೆ ಬಿಟ್ಟಿದ್ದು. ಸಾಮಾನ್ಯವಾಗಿ ಪುರುಷರು ಪತ್ನಿ ನಿಧನದ ಬಳಿಕ ಎರಡನೇ ಮದುವೆಯಾಗುತ್ತಾರೆ. ಮಹಿಳೆಯರು ಸಹ ಒಂಟಿಯಾಗಿ ಜೀವನ ನಡೆಸಲು ಸಾಧ್ಯವಾಗದಿದ್ದರೆ ಎರಡನೇ ಮದುವೆಯಾಗುತ್ತಾರೆ. ಇದೀಗ ಇಂತಹವುದೇ ಒಂದು ಘಟನೆಯೊಂದು ಉತ್ತರ ಪ್ರದೇಶ ದಲ್ಲಿ ನಡೆದಿದೆ.

ಪತಿಯ ನಿಧನದ ಬಳಿಕ ಮಹಿಳೆ ತನಗಿಂತ ಚಿಕ್ಕ ವಯಸ್ಸಿನ ಪುರುಷನನ್ನು ಮದುವೆಯಾಗಿದ್ದಾರೆ. ಮನೆಯಿಂದ ಹೋಗುವಾಗ 3.5 ಲಕ್ಷ ರೂಪಾಯಿ ಮೌಲ್ಯದ ನಗದು ಮತ್ತು ಅಮೂಲ್ಯ ಆಭರಣಗಳೊಂದಿಗೆ ಓಡಿ ಹೋಗಿದ್ದಾರೆ ಎಂದು ವರದಿಯಾಗಿದೆ. ಅಮ್ಮ ಹೋದ ಬಳಿಕ ಒಂಟಿಯಾದ 17 ವರ್ಷದ ಮಗ ಪೊಲೀಸ್ ಠಾಣೆ ಮೆಟ್ಟಿಲೇರಿ ರಕ್ಷಣೆ ಕೇಳಿದ್ದಾನೆ.
ಗೆಳತಿಯರೊಂದಿಗೆ ಪಂಜಾಬ್‌ಗೆ ಹೋಗಿದ್ದ ಅಮ್ಮ ಬರಲೇ ಇಲ್ಲ
ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆ ಮುಜಾಫರ್‌ನಗರದಲ್ಲಿ ಈ ಘಟನೆ ನಡೆದಿದೆ. 17 ವರ್ಷದ ಮಗ ಮನೀಶ್ ವರ್ಮಾ, ತನಗೆ ತಾಯಿ ಮತ್ತು ಆಕೆಯ ಪ್ರಿಯಕರನಿಂದ ಜೀವಕ್ಕೆ ಅಪಾಯವಿದೆ ಎಂದು ಪೊಲೀಶ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾನೆ. ಕೆಲ ತಿಂಗಳ ತಂದೆ ಅನಾರೋಗ್ಯದಿಂದಾಗಿ ಮೃತರಾದರು. ನಂತರ ಮುಜಾಫರ್ ನಗರದ ನಿವಾಸಿ ಅನುಜ್ ಭಾಟಿ ಎಂಬ ಯುವಕನೊಂದಿಗೆ ರಿಲೇಶನ್‌ಶಿಪ್‌ನಲ್ಲಿದ್ದರು. ಜುಲೈ 25ರಂದು ಗೆಳತಿಯರಾದ ರಿಹಾನ್ನಾ, ಶಹಜಾದಿ ಮತ್ತು ನೂರ್ ಜಹಾನ್ ಎಂಬವರ ಜೊತೆ ತಾಯಿ ಪಂಜಾಬ್‌ಗೆ ತೆರಳಿದ್ದರು. ಅಲ್ಲಿಂದ ಅನುಜ್ ಭಾಟಿ ಜೊತೆ ಅಮ್ಮ ಓಡಿ ಹೋಗಿದ್ದಾರೆ ಎಂದು ಮನೀಶ್ ವರ್ಮಾ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಅಮ್ಮನ ಮೂವರು ಗೆಳತಿಯರಿಂದ ಬೆದರಿಕೆ ಸಂದೇಶದ ಆರೋಪ
ಅಮ್ಮ ದೂರವಾದ ಬಳಿಕ ಮನೀಶ್ ಮತ್ತು ಆತನ ಸೋದರ ಒಂಟಿಯಾಗಿದ್ದಾನೆ. ನಂತರ ತಮಗೆ ನಿರಂತರವಾಗಿ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಮನೀಶ್ ವರ್ಮಾ ಆರೋಪಿಸಿದ್ದಾನೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸದಂತೆ ಬೆದರಿಕೆ ಹಾಕಲಾಗಿತ್ತು. ತಮ್ಮ ಮೇಲೆ ಹಲ್ಲೆ ಸಹ ನಡೆಸಲಾಗಿದೆ ಎಂದು ಮನೀಶ್ ಆರೋಪಿಸಿದ್ದಾರೆ. ಅಮ್ಮನ ಮೂವರು ಗೆಳತಿಯರಾದ ರಿಹಾನ್ನಾ, ಶಹಜಾದಿ ಮತ್ತು ನೂರ್ ಜಹಾನ್ ರೈತ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದಾರೆ.
ರಿಹಾನ್ನಾ, ಶಹಜಾದಿ ಮತ್ತು ನೂರ್ ಜಹಾನ್ ಬೆದರಿಕೆ
ಪೊಲೀಸರಿಗೆ ದೂರು ನೀಡಿದ್ರೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸೋದಾಗಿ ರಿಹಾನ್ನಾ, ಶಹಜಾದಿ ಮತ್ತು ನೂರ್ ಜಹಾನ್ ಬೆದರಿಕೆ ಹಾಕಿದ್ದಾರೆ. ನಾನು ಮತ್ತು ಅಣ್ಣ ಬೆದರಿಕೆಯ ನೆರಳಿನಲ್ಲಿ ಬದುಕುತ್ತಿರೋದಾಗಿ ಹೇಳಿದ್ದಾರೆ. ಹೀಗಾಗಿ ರಕ್ಷಣೆ ಕೋರಿ ಮನೀಶ್ ವರ್ಮಾ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.