ಅಫ್ಘಾನಿಸ್ತಾನ: ಒಂದೇ ಕುಟುಂಬದ 13 ಜನರನ್ನು ಕೊಂದಿದ್ದ ಹಂತಕನಿಗೆ ಸಾರ್ವಜನಿಕ ಮರಣದಂಡನೆ; 80,000 ಜನರ ಎದುರು ಗುಂಡಿಕ್ಕಿ ಹತ್ಯೆ!

ಕಾಬೂಲ್: ಅಫ್ಘಾನಿಸ್ತಾನದಲ್ಲಿ (Afghanistan) ಒಂದೇ ಕುಟುಂಬದ 13 ಜನರನ್ನು ಕೊಂದ ಹಂತಕ ಮಂಗಲ್ ಎಂಬಾತನನ್ನು ಅದೇ ಕುಟುಂಬಕ್ಕೆ ಸೇರಿದ 13 ವರ್ಷದ ಬಾಲಕನಿಂದ ಗುಂಡಿಟ್ಟು ಹತ್ಯೆ ಮಾಡಿಸಲಾಗಿದೆ.


ಅಫ್ಘಾನ್ ಸುಪ್ರೀಂ ಕೋರ್ಟ್ ಆದೇಶ ಮತ್ತು ತಾಲಿಬಾನ್‌ನ ಸರ್ವೋಚ್ಛ ನಾಯಕ ಹಿಬತುಲ್ಲಾ ಅಖುಂಜಾದಾ ಅನುಮೋದಿಸಿದ ಸಾರ್ವಜನಿಕ ಮರಣದಂಡನೆಯನ್ನು ಸುಮಾರು 80,000 ಜನರು ವೀಕ್ಷಿಸಿದ್ದಾರೆ.

ಮೊದಲಿಗೆ ಕೊಲೆಗಾರನನ್ನು ಮೈದಾನಕ್ಕೆ ಕರೆತಂದು, ವೈದ್ಯರು ತಪಾಸಣೆ ನಡೆಸಿದ ಬಳಿಕ ಗುಂಡಿಟ್ಟು ಕೊಲ್ಲಿಸಲಾಗಿದೆ. ಖೋಸ್ಟಾ ಎಂಬ ನಗರದಲ್ಲಿ ಅಬ್ದುಲ್ ರೆಹಮಾನ್, ಆತನ ಕುಟುಂಬದ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 13 ಜನರನ್ನು ಕೊಂದ ಅಪರಾಧಕ್ಕಾಗಿ ಮಂಗಲ್‌ಗೆ ಮರಣದಂಡನೆ ವಿಧಿಸಲಾಗಿತ್ತು.

2021ರಲ್ಲಿ ತಾಲಿಬಾನ್ ಸರ್ಕಾರ ಬಂದ ಬಳಿಕ ವಿಧಿಸಿರುವ 11ನೇ ಮರಣದಂಡನೆ ಇದಾಗಿದೆ.