Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅದಾನಿ ಶಾಲೆಯ ಆಹಾನ್ ನ ಎಐ ಆವಿಷ್ಕಾರಕ್ಕೆ ಯುಕೆ ಗೋಲ್ಡ್ ಕ್ರೆಸ್ಟ್ ಪ್ರಶಸ್ತಿ

Spread the love

ಅದಾನಿ ಇಂಟರ್‌ನ್ಯಾಷನಲ್‌ ಸ್ಕೂಲ್‌ನ ಆಹಾನ್ ರಿತೇಶ್ ಪ್ರಜಾಪತಿ ಎಂಬ ವಿದ್ಯಾರ್ಥಿಯು ಕೆಂಪು-ಹಸಿರು ಬಣ್ಣ ಕುರುಡುತನ ಸಮಸ್ಯೆ ಇರುವ ಮಕ್ಕಳ ಶಿಕ್ಷಣಕ್ಕಾಗಿ ಕೃತಕ ಬುದ್ಧಿಮತ್ತೆಯ (ಎಐ) ವಿಶೇಷ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಬಣ್ಣ ಗುರುತಿಸದ ಮಕ್ಕಳ ಶಿಕ್ಷಣಕ್ಕಾಗಿ ಆಹಾನ್ ಒಂದು ಯಂತ್ರ ಕಲಿಕೆ ಆಧಾರಿತ ಮಾದರಿಯನ್ನು ರೂಪಿಸಿದ್ದಾರೆ.

ಇದರಿಂದ ಪಠ್ಯಪುಸ್ತಕಗಳ ನಕ್ಷೆಗಳು ಮತ್ತು ರೇಖಾಚಿತ್ರಗಳನ್ನು ಬಣ್ಣದ ಕುರುಡುತನ ಇರುವ ಮಕ್ಕಳು ಸುಲಭವಾಗಿ ತಿಳಿದುಕೊಳ್ಳಬಹುದು. ಈ ಸಾಧನೆಗೆ ಪ್ರತಿಷ್ಠಿತ ಯುಕೆ ಗೋಲ್ಡ್ ಕ್ರೆಸ್ಟ್ ಪ್ರಶಸ್ತಿ ಸಂದಿದೆ.

ಕೆಂಪು-ಹಸಿರು ಬಣ್ಣ ಕುರುಡುತನವು ಸಾಮಾನ್ಯ ಬಣ್ಣ ಕುರುಡುತನವಾಗಿದ್ದು, ಇದರಲ್ಲಿ ವ್ಯಕ್ತಿಗಳು ಕೆಂಪು ಮತ್ತು ಹಸಿರು ಛಾಯೆಗಳ ನಡುವೆ ವ್ಯತ್ಯಾಸ ಮಾಡಲು ಕಷ್ಟಪಡುತ್ತಾರೆ. ಇದು ಸಾಮಾನ್ಯವಾಗಿ ಆನುವಂಶಿಕವಾಗಿದ್ದು, ಕಣ್ಣುಗಳಲ್ಲಿನ ಕೋನ್ ಕೋಶಗಳಲ್ಲಿನ ದೋಷಗಳಿಂದ ಉಂಟಾಗುತ್ತದೆ. ಇದೇ ಕೆಂಪು-ಹಸಿರು ಬಣ್ಣ ಕುರುಡುತನದಿಂದ ಜನಿಸಿದ 17 ವರ್ಷದ ಆಹಾನ್ ರಿತೇಶ್ ಪ್ರಜಾಪತಿ ಭಾರತದಾದ್ಯಂತ ಬಣ್ಣ ಕುರುಡು ಹೊಂದಿರುವ ಮಕ್ಕಳ ಶಿಕ್ಷಣಕ್ಕಾಗಿ ಸ್ಫೂರ್ತಿಯ ಕೆಲಸ ಮಾಡಿದ್ದಾರೆ.

ಪ್ರಾಯೋಗಿಕ ಮತ್ತು ದೃಶ್ಯ ವಿಷಯಗಳಲ್ಲಿ ಈ ಸಮಸ್ಯೆ ಎದುರಿಸಿದ ಆಹಾನ್ ನಾಲ್ಕನೇ ತರಗತಿಯಲ್ಲೇ ಅನೇಕ ವಿದ್ಯಾರ್ಥಿಗಳು ತಮಗೆ ತಿಳಿಯದೆಯೇ ಇದೇ ರೀತಿಯ ಸವಾಲುಗಳನ್ನು ಎದುರಿಸುತ್ತಾರೆ ಎಂಬುದನ್ನು ಅರಿತುಕೊಂಡರು. ಬಳಿಕ ಅವರು “ಏಡಿಂಗ್ ಕಲರ್ಸ್” ಅನ್ನು ಪ್ರಾರಂಭಿಸಿದರು. ಅವರು ತಮ್ಮದೇ ಅನುಭವವನ್ನು ಶಕ್ತಿಯಾಗಿಸಿಕೊಂಡು, ಬಣ್ಣಕುರುಡು ಮಕ್ಕಳಿಗೆ ಸಹಾಯ ಮಾಡಲು ಒಂದು ವಿಶಿಷ್ಟ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ.

ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಮಕ್ಕಳಿಗೆ ಈ ಸಮಸ್ಯೆ ಇದ್ದು, ಈ ಆಸಕ್ತಿಯಿಂದ ಅವರಿಗೆ ಪಠ್ಯಪುಸ್ತಕಗಳ ಚಿತ್ರ, ಚಾಟ್, ನಕ್ಷೆ ಇವುಗಳನ್ನು ತೋರಿಸುವುದರಲ್ಲಿ ಹಲವು ಸವಾಲುಗಳಿದ್ದವು. ಬಣ್ಣ ಗುರುತಿಸಲು ಆಗದ ಕಾರಣ ಈ ಮಾಹಿತಿ ಮಕ್ಕಳಿಗೆ ಅರ್ಥವಾಗುತ್ತಿರಲಿಲ್ಲ. ಹಾಗಾಗಿ ಆಹಾನ್ ನಿರ್ಮಿಸಿದ ಈ ಸಾಧನವು ಪಠ್ಯ ಅಥವಾ ಚಿತ್ರಗಳಲ್ಲಿ ಬಣ್ಣಗಳನ್ನೇ ಅವಲಂಬಿಸದೆ ಬೇರೆ ಚಿಹ್ನೆ, ಗಾತ್ರ, ವಿನ್ಯಾಸದ ಚಿತ್ರಗಳ ಮೂಲಕ ಕಲಿಯಲು ಹಾಗೂ ಪ್ರಾಯೋಗಿಕ ವಿಷಯಗಳ ಗ್ರಹಿಕೆಗೆ ನೆರವಾಗುತ್ತದೆ.

30 ಶಾಲೆಗಳಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಆಹಾನ್ ಸುಮಾರು 120 ಬಣ್ಣ ಕುರುಡು ವಿದ್ಯಾರ್ಥಿಗಳನ್ನು ಗುರುತಿಸಿದರು. ಬಣ್ಣ ದೃಷ್ಟಿಯ ಕೊರತೆಗಳನ್ನು ಸರಿದೂಗಿಸಲು ಪಠ್ಯಪುಸ್ತಕ ರೇಖಾಚಿತ್ರಗಳು ಮತ್ತು ನಕ್ಷೆಗಳನ್ನು ವರ್ಧಿಸುವ ಸಾಮರ್ಥ್ಯವಿರುವ ಯಂತ್ರ-ಕಲಿಕಾ ಮಾದರಿಯನ್ನು ಸಿದ್ಧಪಡಿಸಿದರು. ಇದು ಶೇ 99.7ರಷ್ಟು ನಿಖರತೆಯನ್ನು ಸಾಧಿಸಿತು.

ಆಹಾನ್ ಅವರ ಅದ್ಭುತ ಸಾಧನೆಯನ್ನು ಗುರುತಿಸಿ ಪ್ರತಿಷ್ಠಿತ ಗೋಲ್ಡ್ ಕ್ರೆಸ್ಟ್ ಪ್ರಶಸ್ತಿ (ಯುಕೆ) ನೀಡಲಾಗಿದೆ. ಇದು ಅಸಾಧಾರಣ ಯುವ ವೈಜ್ಞಾನಿಕ ಪ್ರತಿಭೆಗಳಿಗೆ ನೀಡುವ ಪ್ರಶಸ್ತಿಯಾಗಿದೆ. ಅವರ ಈ ಯೋಜನೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಐಐಟಿ-ದೆಹಲಿಯಲ್ಲಿ ನಡೆದ ಕೃತಕ ಬುದ್ಧಿಮತ್ತೆ ಮತ್ತು ಆರೋಗ್ಯ ರಕ್ಷಣೆ ಕುರಿತ ಇಂಡೋ-ಫ್ರೆಂಚ್ ಸಮ್ಮೇಳನದಲ್ಲೂ ಪ್ರದರ್ಶನಗೊಂಡಿದೆ. ನ್ಯೂಯಾರ್ಕ್‌ನ ಇಂಟರ್ನ್ಯಾಷನಲ್ ಜರ್ನಲ್ ಆಫ್ ಹೈಸ್ಕೂಲ್ ರಿಸರ್ಚ್‌ನಲ್ಲಿ ಪ್ರಕಟಣೆಗೂ ಸಿದ್ಧವಾಗಿದೆ.

ಅದಾನಿ ಇಂಟರ್ನ್ಯಾಷನಲ್ ಸ್ಕೂಲ್‌ಗೆ ಆಹಾನ್ ಮಹತ್ವದ ಮನ್ನಣೆ ನೀಡಿದ್ದಾರೆ. ಆಹಾನ್‌ ಅವರ ಈ ಸಾಧನೆಗೆ ಶಾಲೆಯಿಂದ ಬೆಂಬಲ ಸಿಕ್ಕಿತ್ತು. ಶಾಲೆಯು ವೇದಿಕೆಗಳು, ಸಂಪನ್ಮೂಲಗಳು ಮತ್ತು ಪ್ರೋತ್ಸಾಹವನ್ನು ಒದಗಿಸಿತು. ಅದಾನಿ ಇಂಟರ್ನ್ಯಾಷನಲ್ ಶಾಲೆಗೆ ಸ್ಥಳಾಂತರಗೊಂಡ ನಂತರ, ನನ್ನ ಶಾಲೆ ನನಗೆ ಬಹಳಷ್ಟು ಬೆಂಬಲ ನೀಡಿತು ಮತ್ತು ನನಗೆ ವೇದಿಕೆಯನ್ನು ನೀಡಿತು ಎಂದು ಆಹಾನ್‌ ಹೇಳಿದ್ದಾರೆ.

ಶಿಕ್ಷಣವು ಪಠ್ಯಪುಸ್ತಕಗಳನ್ನು ಮೀರಿ ಹೋಗಬೇಕು. ಅದು ಜೀವನವನ್ನು ಸ್ಪರ್ಶಿಸಬಲ್ಲ ಸಹಾನುಭೂತಿಯ ನಾಯಕರನ್ನು ರೂಪಿಸಬೇಕು ಎಂದು ಅದಾನಿ ಅಂತರರಾಷ್ಟ್ರೀಯ ಶಾಲೆಯ ಪ್ರಮುಖರಾದ ನಮ್ರತಾ ಅದಾನಿ ಹೇಳಿದ್ದಾರೆ.

ಆಹಾನ್ ಅವರ ಪ್ರಯತ್ನಗಳು ಡಾ.ಶಿವಾನಿ ಭಟ್ ಚಾರಿಟೇಬಲ್ ಫೌಂಡೇಶನ್ ಸಹಾಯದಿಂದ ನಾಲ್ಕು ಜಿಲ್ಲೆಗಳಲ್ಲಿ ಸ್ಕ್ರೀನಿಂಗ್ ಶಿಬಿರಗಳನ್ನು ಆಯೋಜಿಸಲಾಯಿತು. ಈ ಶಿಬಿರಗಳು 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪರೀಕ್ಷಿಸಿದವು. ಇದರಲ್ಲಿ 131 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು. ಇವರಿಗಾಗಿ ಆಹಾನ್ ಇಂಗ್ಲಿಷ್ ಮತ್ತು ಗುಜರಾತಿ ಭಾಷೆಗಳಲ್ಲಿ ಜಾಗೃತಿ ಕರಪತ್ರಗಳು, ಲೇಖನ ಸಾಮಗ್ರಿಗಳು ಮತ್ತು ಶಿಕ್ಷಕರಿಗೆ ಮಾರ್ಗದರ್ಶಿಗಳನ್ನು ಅಭಿವೃದ್ಧಿಪಡಿಸಿದರು. ಭವಿಷ್ಯದಲ್ಲಿ ಆಹಾನ್ ತನ್ನ ಯೋಜನೆಯನ್ನು ಗುಜರಾತ್ ಮತ್ತು ಭಾರತದಾದ್ಯಂತ ವಿಸ್ತರಿಸುವ ಗುರಿ ಹೊಂದಿದ್ದಾರೆ. ಶಾಲೆಗಳಲ್ಲಿ ಕಡ್ಡಾಯ ಬಣ್ಣ ಕುರುಡುತನದ ತಪಾಸಣೆ ಮತ್ತು ಪಠ್ಯಪುಸ್ತಕಗಳಲ್ಲಿ ಲಭ್ಯವಿರುವ ಸಾಮಗ್ರಿಗಳನ್ನು ಒದಗಿಸಲಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *