ಅದಾನಿ ಗ್ರೂಪ್ನಿಂದ ಸರ್ಕಾರಕ್ಕೆ 74,945 ಕೋಟಿ ರೂ. ತೆರಿಗೆ ಪಾವತಿ

ಬೆಂಗಳೂರು: ಅದಾನಿ ಗ್ರೂಪ್ ಸಂಸ್ಥೆಗೆ ಸೇರಿದ ವಿವಿಧ ಕಂಪನಿಗಳು 2024-25ರ ಹಣಕಾಸು ವರ್ಷದಲ್ಲಿ ಸರ್ಕಾರಕ್ಕೆ ಪಾವತಿಸಿರುವ ತೆರಿಗೆಗಳನ್ನು ಒಟ್ಟು ಸೇರಿಸಿದರೆ ಬರೋಬ್ಬರಿ 74,945 ಕೋಟಿ ರೂ ಆಗುತ್ತದೆ. ಹಿಂದಿನ ವರ್ಷದಲ್ಲಿ (2023-24) ಅದಾನಿ ಗ್ರೂಪ್ನಿಂದ (Adani group) ಸರ್ಕಾರಕ್ಕೆ 58,104 ಕೋಟಿ ರೂ ಟ್ಯಾಕ್ಸ್ ಪಾವತಿಯಾಗಿತ್ತು.
ಈ ವರ್ಷ ಅದು ನೀಡಿದ ತೆರಿಗೆ ಹಣದಲ್ಲಿ ಶೇ. 29ರಷ್ಟು ಹೆಚ್ಚಾಗಿದೆ. ಭಾರತದಲ್ಲಿ ಅತಿಹೆಚ್ಚು ತೆರಿಗೆ ನೀಡುವ ಬ್ಯುಸಿನೆಸ್ ಗ್ರೂಪ್ ಇದಾಗಿದೆ.
ಅದಾನಿ ಗ್ರೂಪ್ನಿಂದ ಸಿಕ್ಕ ತೆರಿಗೆ ಹಣ ಸಾಮಾನ್ಯ ಮೊತ್ತವಲ್ಲ…
ಅದಾನಿ ಗ್ರೂಪ್ 2024-25ರಲ್ಲಿ ನೀಡಿದ ಒಟ್ಟು ತೆರಿಗೆ ಹಣ 75,000 ಕೋಟಿ ರೂ. ಇದು ಸಾಮಾನ್ಯ ಮೊತ್ತವಲ್ಲ. ಬೆಂಗಳೂರು ಮೆಟ್ರೋ ಯೋಜನೆಯ ಇಲ್ಲಿಯವರೆಗಿನ ವೆಚ್ಚವನ್ನು ಭರಿಸುವಷ್ಟು ಹಣ ಇದು. ಅಂದರೆ, ನಮ್ಮ ಮೆಟ್ರೋದ ಮೊದಲ ಹಂತ, ಎರಡನೇ ಹಂತ ಹಾಗೂ ಮೂರನೇ ಹಂತದ ಯೋಜನೆಯ ಎಲ್ಲ ವೆಚ್ಚವನ್ನೂ ಈ ಹಣದಿಂದ ಭರಿಸಬಹುದು.
ಭಾರೀ ಉದ್ದಿಮೆಗಳಿರುವ ಅದಾನಿ ಗ್ರೂಪ್
ಅದಾನಿ ಗ್ರೂಪ್ನಲ್ಲಿ 10ರಿಂದ 20 ಕಂಪನಿಗಳಿವೆ. ಅದಾನಿ ಎಂಟರ್ಪ್ರೈಸಸ್, ಅದಾನಿ ಪೋರ್ಟ್ಸ್, ಅದಾನಿ ಸಿಮೆಂಟ್ಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪವರ್, ಅದಅನಿ ಎನರ್ಜಿ ಸಲ್ಯೂಷನ್ಸ್, ಅದಾನಿ ಡಿಫೆನ್ಸ್, ಅದಾನಿ ವಿಲ್ಮರ್, ಅದಾನಿ ಟೋಟಲ್ ಗ್ಯಾಸ್ ಇತ್ಯಾದಿ ಕಂಪನಿಗಳಿವೆ. ಈ ಎಲ್ಲಾ ಕಂಪನಿಗಳಿಂದ ಸರ್ಕಾರಕ್ಕೆ ಸಂದಾಯವಾದ ತೆರಿಗೆ ಹಣ ಅದು. ಇದರಲ್ಲಿ ಅದಾನಿ ಎಂಟರ್ಪ್ರೈಸಸ್, ಅದಾನಿ ಸಿಮೆಂಟ್, ಅದಾನಿ ಪೋರ್ಟ್ಸ್ ಮತ್ತು ಅದಾನಿ ಗ್ರೀನ್ ಎನರ್ಜಿ ಕಂಪನಿಗಳಿಂದ ಅತಿಹೆಚ್ಚು ಟ್ಯಾಕ್ಸ್ ಸಲ್ಲಿಕೆ ಆಗಿದೆ.
ಒಟ್ಟಾರೆ 74,945 ಕೋಟಿ ರೂನಲ್ಲಿ ನೇರ ತೆರಿಗೆ ರೂಪದಲ್ಲಿ 28,720 ಕೋಟಿ ರೂ, ಇನ್ಡೈರೆಕ್ಟ್ ಟ್ಯಾಕ್ಸ್ ರೂಪದಲ್ಲಿ 45,407 ಕೋಟಿ ರೂ ಸಲ್ಲಿಕೆ ಆಗಿರುವುದು ತಿಳಿದುಬಂದಿದೆ.
ಇತರ ಕಾರ್ಪೊರೇಟ್ ಕಂಪನಿಗಳಿಂದ ಎಷ್ಟು ಟ್ಯಾಕ್ಸ್?
ಅದಾನಿ ಗ್ರೂಪ್ ಬಿಟ್ಟರೆ ಭಾರತದಲ್ಲಿ ಅತಿಹೆಚ್ಚು ಟ್ಯಾಕ್ಸ್ ಕೊಡುಗೆ ನೀಡುವುದು ಟಾಟಾ ಗ್ರೂಪ್. ಇದರಲ್ಲಿ 25ಕ್ಕೂ ಹೆಚ್ಚು ಕಂಪನಿಗಳಿವೆ. 2022-23ರಲ್ಲೇ ಈ ಗ್ರೂಪ್ ಕಂಪನಿಗಳಿಂದ 30,000 ಕೋಟಿ ರೂನಷ್ಟು ಟ್ಯಾಕ್ಸ್ ಸಂದಾಯವಾಗಿತ್ತು.
ಮುಕೇಶ್ ಅಂಬಾನಿಯವರ ರಿಲಾಯನ್ಸ್ ಗ್ರೂಪ್ಗೆ ಸೇರಿದ ಕಂಪನಿಗಳಿಂದಲೂ ಸಾಕಷ್ಟು ಟ್ಯಾಕ್ಸ್ ಬರುತ್ತದೆ. ಬಿರ್ಲಾ ಗ್ರೂಪ್, ಮಹೀಂದ್ರ, ಜೆಎಸ್ಡಬ್ಲ್ಯು, ಬಜಾಜ್, ವೇದಾಂತ, ಎಲ್ ಅಂಡ್ ಟಿ, ಗೋದ್ರೇಜ್, ಹಿಂದೂಜಾ ಇತ್ಯಾದಿ ದೊಡ್ಡ ದೊಡ್ಡ ಬ್ಯುಸಿನೆಸ್ ಗ್ರೂಪ್ಗಳಿದ್ದು ಅವುಗಳಿಂದ ಸಾವಿರಾರು ಕೋಟಿ ರೂ ಟ್ಯಾಕ್ಸ್ ಆದಾಯವು ಸರ್ಕಾರಕ್ಕೆ ಬರುತ್ತದೆ.