ನಟಿ ಸಮಂತಾ ರುತ್ ಪ್ರಭು 2ನೇ ವಿವಾಹ: ನಿರ್ದೇಶಕ ರಾಜ್ ನಿಡಿಮೋರು ಜೊತೆ ಸರಳ ವಿವಾಹ

ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಒಂಟಿಯಾಗಿದ್ದ ತೆಲುಗು ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಇದೀಗ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿರ್ದೇಶಕ ರಾಜ್ ನಿಡಿಮೋರು (Raj Nidimoru) ಜೊತೆ ನಟಿ ಸಮಂತಾ ರುತ್ ಪ್ರಭು ಅವರಿಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ಹಲವು ದಿನಗಳಿಂದ ಹಬ್ಬಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.


ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಇಶಾ ಫೌಂಡೇಶನ್ (Isha Foundation) ಆವರಣದಲ್ಲಿರುವ ಲಿಂಗಭೈರವಿ ದೇವಿಯ ದೇವಸ್ಥಾನದಲ್ಲಿ (Ling Bhairavi Temple) ಇಂದು ಸರಳ ವಿವಾಹವಾಗಿದ್ದಾರೆ. ಸಮಂತಾ ಕೆಂಪು ಸೀರೆ ಧರಿಸಿ ಮಿಂಚಿದ್ರೆ, ರಾಜ್ ನಿಡಿಮೋರು ವೈಟ್ & ವೈಟ್ ಕುರ್ತಾ ಧರಿಸಿ ಸರಳವಾಗಿ ಕಾಣಿಸಿಕೊಂಡಿದ್ದಾರೆ.

ʻಫ್ಯಾಮಿಲಿ ಮ್ಯಾನ್ʼ, ʻಸಿಟಾಡೆಲ್ ಹನಿಬನಿʼ ನಿರ್ದೇಶಕನ ಜೊತೆ ಸಮಂತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವು ತಿಂಗಳಿಂದ ಬಹಿರಂಗವಾಗೇ ಈ ಜೋಡಿ ಕಾಣಿಸ್ಕೊಳ್ತಾ ಬಂದಿತ್ತು. ಇದೀಗ ಗುಟ್ಟಾಗಿ ಕಲ್ಯಾಣವಾಗಿರುವ ವಿಚಾರವನ್ನ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ. ಮದುವೆಯ ಫೋಟೋಗಳನ್ನ ಸಮಂತಾ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ರಾಜ್ ನಿಡಿಮೋರು ಈಗಾಗ್ಲೇ ವಿವಾಹವಾಗಿದ್ದು ಸಮಂತಾ ಜೊತೆ ಅವರಿಗೆ 2ನೇ ವಿವಾಹ.