Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಿನ್ನ ಕಳ್ಳಸಾಗಣೆ ಕೇಸ್‌ನಲ್ಲಿ ನಟಿ ರನ್ಯಾ ರಾವ್ ಹೆಸರು; ₹1.23 ಕೋಟಿ ಡ್ರಗ್ಸ್‌ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ

Spread the love

ಬೆಂಗಳೂರು : ದುಬೈ ನಿಂದ ಅಕ್ರಮವಾಗಿ 14 ಕೆಜಿಗೂ ಹೆಚ್ಚು ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ರನ್ಯರ ವಿರುದ್ಧ 153 ಕೋಟಿ ರೂಪಾಯಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಕಳೆದ 6 ತಿಂಗಳಿಂದ ತನಿಖೆ ನಡೆಸುತ್ತಾ ಇದ್ದ ಡಿಆರ್‌ಐ ದೋಷಾರೋಪ ಪಟ್ಟಿ ಸಲ್ಲಿಕೆಗೆ ತಯಾರಿ ನಡೆಸಿದೆ. 123 ಕೋಟಿ ಮೌಲ್ಯದ ಚಿನ್ನವನ್ನ ಅಕ್ರಮವಾಗಿ ಸಾಗಾಟ ಮಾಡಿರೋದು ಪ್ರಕರಣದ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಈಗಾಗಲೇ 5 ಜನ ಆರೋಪಿಗಳಿಗೂ ಕೂಡ ಶೋಕಾಸ್ ನೋಟಿಸ್ ನೀಡಿದ್ದ ಡಿಆರ್‌ಐ ಕೇವಲ ರನ್ಯಾ ರಾವ್ 102 ಕೋಟಿ ಮೌಲ್ಯದ ಚಿನ್ನವನ್ನ ಅಕ್ರಮ ಮಾಡಿದ್ದಾರೆ ಅನ್ನೋದು ಸ್ಪಷ್ಟವಾಗಿ ತನಿಖೆಯಲ್ಲಿ ಅನಾವರಣ ಆಗಿದೆ.ಇದ್ರಲ್ಲಿ ಮಲತಂದೆ ರಾಮಚಂದ್ರರಾವ್ ಅವರ ಕಾರು ದುರ್ಬಳಕೆ, ರಾಜಕಾರಣಿಗಳ ಹೆಸರು ದುರ್ಬಳಕೆ ಎಲ್ಲಾ ಮಾಹಿತಿಯೂ ತನಿಖೆಯಲ್ಲಿ ಬಹಿರಂಗ ಆಗಿದೆ.ಇನ್ನುಳಿದ ನಾಲ್ವರು ಆರೋಪಿಗಳಿಗೂ ಕೂಡ ಪ್ರತ್ಯೇಕ ಶೋಕಾಸ್ ನೋಟಿಸ್ ನೀಡಲಾಗಿತ್ತು. ಈಗ ಪ್ರಕರಣ ಕೊನೆಯ ಹಂತಕ್ಕೆ ತಲುಪಿದ್ದು ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲು ತಯಾರಿ ನಡೆದಿದೆ.


Spread the love
Share:

administrator

Leave a Reply

Your email address will not be published. Required fields are marked *