ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದ ನಟಿ ಮಾರಿಕಣ್ಣು ಇಂದು ಬೀದಿಯಲ್ಲಿ ನಿರಾಶ್ರಿತೆ!

ಸಾಮಾನ್ಯವಾಗಿ, ಅನೇಕ ಜನರು ಮಾನವ ಜೀವನದಲ್ಲಿ ಯಾವುದೇ ಆಧಾರವಿಲ್ಲದೆ, ಉಳಿಯಲು ಸ್ಥಳವಿಲ್ಲದೆ, ತಿನ್ನಲು ಆಹಾರವಿಲ್ಲದೆ ಬಳಲುತ್ತಿದ್ದಾರೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ, ವಯಸ್ಸಿನ ಬೇಧವಿಲ್ಲದೆ ಎಲ್ಲರಿಗೂ ಇದೇ ಪರಿಸ್ಥಿತಿ. ಪ್ರಪಂಚದಾದ್ಯಂತ ಇಂತಹ ಅನೇಕ ಜನರಿದ್ದಾರೆ.
ಇದಕ್ಕೆಲ್ಲಾ ಕಾರಣ ಅವರ ಸಂದರ್ಭಗಳು ಮತ್ತು ಸಂಬಂಧಿಕರು ಎಂದು ಹೇಳಬಹುದು. ಅಷ್ಟೇ ಅಲ್ಲ, ಬೀದಿಗಳಲ್ಲಿ ನಿರಾಶ್ರಿತರಾಗಿರುವ ಅನೇಕ ಜನರು ಸಾಮಾನ್ಯ ಜನರಲ್ಲ, ಸೆಲೆಬ್ರಿಟಿಗಳೂ ಆಗಿದ್ದಾರೆ. ಅದರಲ್ಲೂ ಸಿನಿಮಾದಲ್ಲಿ ಹೆಸರು ಮಾಡಿದ ನಟ-ನಟಿಯರು ತಮ್ಮ ಕೊನೆಯ ದಿನಗಳಲ್ಲಿ ಯಾವುದೇ ಬೆಂಬಲವಿಲ್ಲದೆ ಅನಾಥರಾಗಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು ರಾಷ್ಟ್ರಪತಿಗಳಿಂದ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಮಹಾನ್ ನಟಿಗೆ ಈ ಪರಿಸ್ಥಿತಿ ಬಂದಿದೆ. ಅವರು ಬೇರೆ ಯಾರೂ ಅಲ್ಲ, ಪ್ರಸಿದ್ಧ ನಟಿ ಮಾರಿಕಾ. ಮಾರಿಕಣ್ಣು ತಮ್ಮ ನಾಟಕಗಳ ಮೂಲಕ ಜನರಲ್ಲಿ ಜನಪ್ರಿಯರಾಗಿದ್ದರು. ಇವರನ್ನು ಜನ ಮಾರಿ, ಮಾರಿಕಣ್ಣು ಎಂತಲೂ ಕರೆಯುತ್ತಿದ್ದರು..
ಸಾಮಾನ್ಯವಾಗಿ, ಸಿನಿಮಾ ಪ್ರಪಂಚವು ರಂಗಭೂಮಿಯಿಂದ ಹೊರಹೊಮ್ಮಿತು. ಎಂಜಿಆರ್, ಶಿವಾಜಿ, ರಜನಿ, ಕಮಲ್ ಮುಂತಾದ ಅನೇಕ ನಟರು ರಂಗಭೂಮಿಯ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿದರು. ಮಾರಿಕಣ್ಣು ಅವರು ಆ ರೀತಿಯೇ ರಂಗಭೂಮಿಯ ಮೂಲಕ ಜನರಲ್ಲಿ ಸ್ಥಾನ ಪಡೆದವರು. ಅವರು ವಲ್ಲಿ ತಿರುಮನ ಮತ್ತು ತಿರುವಿಳಯದಲ್ ನಂತಹ ಅನೇಕ ಕಥೆಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ, ಅವರ ಪ್ರದರ್ಶನವನ್ನು ನೋಡಲು ಜನಸಂದಣಿ ಸೇರುತ್ತಿತ್ತು. ಅವರು ತಮ್ಮ ನಟನೆಗೆ ಅಷ್ಟೊಂದು ಪ್ರಸಿದ್ಧರು. ಇವರ ಅತ್ಯುತ್ತಮ ಅಭಿನಯಕ್ಕಾಗಿ ಆಗಿನ ರಾಷ್ಟ್ರಪತಿಗಳು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನೀಡಿದ್ದರು. ಇದಾದ ನಂತರ ಅವರು ಹಲವು ಚಿತ್ರಗಳಲ್ಲಿ ನಟಿಸಿದರು. ನಂತರ ನಟಿ ವಿವಾಹವಾದರು.. ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳಿದ್ದಾರೆ..
ಸಂತೋಷದಿಂದ ಮತ್ತು ಹೆಮ್ಮೆಯಿಂದ ಬದುಕುತ್ತಿದ್ದ ನಟಿ ಮಾರಿಕಣ್ಣು ಈಗ ಆಸರೆಯಿಲ್ಲದೆ ಅನಾಥಳಾಗಿ ಬೀದಿಗಳಲ್ಲಿ ವಾಸಿಸುತ್ತಿದ್ದಾರೆ. ಗ್ರಾಮಸ್ಥರಲ್ಲಿ ಅವರ ಬಗ್ಗೆ ಸಂದರ್ಶಕರು ಕೇಳಿದಾಗ ʼಈ ತಾಯಿಯನ್ನು ನೋಡಲು ಯಾರೂ ಬರುವುದಿಲ್ಲ.. ಅವರು ಬಹಳ ಸಮಯದಿಂದ ಹೀಗೆಯೇ ಇದ್ದಾರೆ. ಅವರನ್ನು ಸರಿಯಾದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರೆ, ಅವರು ಚೇತರಿಸಿಕೊಳ್ಳುತ್ತಿದ್ದರು. ನಾವು ಅವರ ಎಲ್ಲಾ ಬೀದಿ ನಾಟಕಗಳನ್ನು ನೋಡಿದ್ದೇವೆ. ತುಂಬಾ ಸುಂದರವಾಗಿ ನಟಿಸುತ್ತಾರೆ. ಅಂತಹ ನಟಿಗೆ ಈ ಪರಿಸ್ಥಿತಿ ಇದೆ ಎಂದು ಯೋಚಿಸಿದರೇ ಬೇಸರವಾಗುತ್ತದೆ.. ಅವರಿಗೆ ಆಹಾರವನ್ನು ನಾವೇ ಒದಗಿಸುತ್ತೇವೆ. ಅವರು ರಸ್ತೆಗಳಲ್ಲಿ ಮತ್ತು ದೇವಾಲಯಗಳ ಅಂಗಳಗಳಲ್ಲಿ ಎಲ್ಲೆಲ್ಲೋ ಓಡಾಡುತ್ತಾರೆ.. ಹಾಗಿದ್ದರೂ, ಆಕೆ ಯಾರಿಗೂ ಯಾವುದೇ ತೊಂದರೆ ಕೊಡುವುದಿಲ್ಲ. ಆದರೆ ಆಗ್ಗಾಗೆ ಅವರು ಯಾರನ್ನೂ ನಂಬಬೇಡಿ, ಹುಷಾರಾಗಿರಿ ಎನ್ನುತ್ತಿದ್ದರುʼ ಎಂದು ಹೇಳಿದ್ದಾರೆ..
ಇನ್ನೂ ಕೆಲವರು ಹೇಳುವಂತೆ ಆಕೆಯ ಪತಿ ತೀರಿಕೊಂಡ ನಂತರ ಆಕೆ ಹೀಗಾದಳು. ಆದರೆ, ಇದು ಎಷ್ಟರ ಮಟ್ಟಿಗೆ ನಿಜ ಆದರೆ, ತಿಳಿದಿಲ್ಲ. ಒಟ್ಟಿನಲ್ಲಿ ಆಕೆ ಯಾರನ್ನೂ ನಂಬುವುದಿಲ್ಲ, ಮತ್ತು ಏನನ್ನೂ ಬಯಸುವುದಿಲ್ಲ.. ಕೆಟ್ಟ ಸ್ಥಿತಿಯಲ್ಲಿದ್ದರೂ ಯಾರಿಗೂ ತೊಂದರೆ ಕೊಡದೇ ಬದುಕಿದ್ದಾರೆ ಎನ್ನಲಾಗಿದೆ
