40ರ ವಯಸ್ಸಿನಲ್ಲಿ ಸಿಂಗಲ್ ಮದರ್ ಆದ ನಟಿ ಭಾವನಾ ರಾಮಣ್ಣ: IVF ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಲು ಸಿದ್ಧತೆ!

ಬೆಂಗಳೂರು: 40 ವರ್ಷ ಕಳೆದ ಮೇಲೆ ಹೆಣ್ಣುಮಕ್ಕಳು ಗರ್ಭಧರಿಸುವುದು ತಾಯಿ-ಮಗು ಇಬ್ಬರ ಆರೋಗ್ಯದ ದೃಷ್ಟಿಯಿಂದಲೂ ಅಪಾಯಕಾರಿ ಎಂದು ವೈದ್ಯರೇ ಹೇಳುತ್ತಾರೆ. ಆರ್ಥಿಕವಾಗಿ ಸಬಲರಾಗಿರುವವರು, ಸೆಲೆಬ್ರಿಟಿಗಳು ಅನೇಕ ಸುರಕ್ಷತಾ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಿ ಗರ್ಭ ಧರಿಸುವುದುಂಟು.

ಕನ್ನಡದ ನಟಿ ಹಾಗೂ ರಾಜಕಾರಣಿ ಭಾವನಾ ರಾಮಣ್ಣ ಈ ಸಾಲಿಗೆ ಹೊಸ ಸೇರ್ಪಡೆ. 40 ವರ್ಷ ದಾಟಿರುವ ಅವರು ಈಗ ತಾಯಿಯಾಗುವ ಸಂಭ್ರಮದಲ್ಲಿ, ಅದೂ ಅವಳಿ ಜವಳಿ ಮಕ್ಕಳಿಗೆ. ಮದುವೆಯಾಗದೆ ಸಿಂಗಲ್ ಮದರ್ ಅನಿಸಿಕೊಳ್ಳುತ್ತಿರುವ ಭಾವನಾ ಐವಿಎಫ್ ಚಿಕಿತ್ಸೆ ಮೂಲಕ ಅವಳಿ ಮಕ್ಕಳನ್ನು ತಮ್ಮ ಜೀವನಕ್ಕೆ ಬರಮಾಡಿಕೊಳ್ಳುತ್ತಿದ್ದಾರೆ.

ಆರು ತಿಂಗಳ ಗರ್ಭಿಣಿಯಾಗಿರುವ ಭಾವನಾ, ತಾವು ಐವಿಎಫ್ ಚಿಕಿತ್ಸೆ ಮೂಲಕ ಮಗು ಪಡೆಯಲು ನಿರ್ಧರಿಸಿದ್ದು, ಚಿಕಿತ್ಸಾ ಪ್ರಕ್ರಿಯೆಗಳನ್ನು ಇಂಗ್ಲಿಷ್ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಎಳೆಎಳೆಯಾಗಿ ಹೇಳಿಕೊಂಡಿದ್ದಾರೆ.
ಪಾಲಕರು, ಮೂವರು ಒಡಹುಟ್ಟಿದವು, ಸಂಬಂಧಿಕರು, ಸ್ನೇಹಿತರು ಇರುವ ಮನೆಯಲ್ಲಿ ನಾನು ಬೆಳೆದೆನು. ನಾನು ಮದುವೆ ಮಾಡಿಕೊಂಡಿಲ್ಲ, ಹಾಗೆಂದು ನನಗೆ ಮಕ್ಕಳೆಂದರೆ ತುಂಬ ಇಷ್ಟ. ತಾಯಿಯಾಗುವ ಹಂಬಲ ನನ್ನಲ್ಲಿ ತುಂಬಾ ವರ್ಷಗಳಿಂದ ಇತ್ತು. ನಾನು 20ನೇ ವಯಸ್ಸಿನಲ್ಲಿ ಮಗು ಮಾಡಿಕೊಳ್ಳುವ ಬಗ್ಗೆ ಯೋಚಿಸಿರಲಿಲ್ಲ. ನನಗೆ 30 ವಯಸ್ಸು ಆದಾಗ ಲವ್‌ಮಾಡಲು ರೆಡಿ ಇದ್ದೆ. 40 ಇದ್ದಾಗ ಮಗು ಮಾಡಿಕೊಳ್ಳೋದನ್ನು ಇಗ್ನೋರ್ ಮಾಡಲು ಆಗೋದಿಲ್ಲ. ಈ ವರ್ಷಾಂತ್ಯದಲ್ಲಿ ನಾನು ಅವಳಿ ಮಕ್ಕಳನ್ನು ಹೆರುವ ಖುಷಿಯಲ್ಲಿದ್ದೇನೆ ಎಂದರು.
ಕಾನೂನು ಬೆಂಬಲಿಸಿರಲಿಲ್ಲ
ತುಂಬ ಸಮಯದಿಂದ ಮಹಿಳೆಯರು ಸಿಂಗಲ್ ಪೇರೆಂಟ್ ಆಗೋದನ್ನು ಕಾನೂನು ಬೆಂಬಲಿಸಿರಲಿಲ್ಲ. ಕಾನೂನು ಕೆಲಸ ಆದಬಳಿಕ ನಾನು ಈ ನಿರ್ಧಾರಕ್ಕೆ ಬಂದೆ. ಐವಿಎಫ್ ಕ್ಲಿನಿಕ್ ಹೋಗಿ ನಾನು ಈ ಬಗ್ಗೆ ವಿಚಾರಿಸಿದೆ.
ನಮ್ಮ ಮನೆ ಬಳಿ ಇರುವ ಕ್ಲಿನಿಕ್ ಹೋಗಿ ಅಲ್ಲಿ ಚಿಕಿತ್ಸೆ ಪಡೆದೆ. ವೈದ್ಯರು ನನಗೆ ತುಂಬ ಸಲಹೆ ಕೊಟ್ಟರು. ಮೊದಲ ಪ್ರಯತ್ನದಲ್ಲೇ ನಾನು ತಾಯಿಯಾಗಿರೋದು ಖುಷಿ ಕೊಟ್ಟಿದೆ. ನಾನು ತಾಯಿ ಆಗ್ತಿದೀನಿ ಅಂತ ಗೊತ್ತಾದಾಗ ನನ್ನ ತಂದೆ ತುಂಬ ಖುಷಿಪಟ್ಟರು. ನೀನು ಮಹಿಳೆ, ನಿನಗೆ ತಾಯಿ ಆಗುವ ಹಕ್ಕಿದೆ ಎಂದು ನನ್ನ ತಂದೆ ಹೇಳಿದ್ದಾರೆ. ನನ್ನ ಕನಸು, ಆಸೆಗೆ ನನ್ನ ತಂದೆ, ಒಡಹುಟ್ಟಿದವರು ಬೆಂಬಲ ನೀಡಿದ್ದಾರೆ. ಇನ್ನೂ ಕೆಲವರು ಇದರ ಬಗ್ಗೆ ಪ್ರಶ್ನೆ ಮಾಡುತ್ತಾರೆ, ಏನೂ ಮಾಡಲು ಸಾಧ್ಯವಿಲ್ಲ. ನನ್ನನ್ನು ನೋಡಿ ಓರ್ವ ಮಹಿಳೆಗೆ ಪ್ರೇರಣೆ ಸಿಕ್ಕಿ, ಆಕೆ ನಾನು ಜೀವನದಲ್ಲಿ ಒಂಟಿಯಲ್ಲ ಎಂದು ಯೋಚಿಸಿದರೆ ಅದುವೇ ನನ್ನ ಜಯ ಎಂದುಕೊಳ್ಳುತ್ತೇನೆ ಎನ್ನುತ್ತಾರೆ.
