ನಟಿ ಭಾಗ್ಯಶ್ರೀ ಗಾಯಗೊಂಡು ಆಸ್ಪತ್ರೆಗೆ ದಾಖಲು – ಶಸ್ತ್ರಚಿಕಿತ್ಸೆಯ ಬಳಿಕ ಫೋಟೋಗಳು ವೈರಲ್

ನಟಿ ಭಾಗ್ಯಶ್ರೀ ಅವರು ಪಿಕಲ್ ಬಾಲ್ ಆಡುವಾಗ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನೋವಿನಿಂದ ಬಳಲುತ್ತಿದ್ದ ನಟಿಗೆ ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆ ಮುನ್ನ ಮತ್ತು ಬಳಿಕ ತೆಗೆದ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.


ಭಾಗ್ಯಶ್ರೀ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ. “ನಟಿಗೆ ಏನಾಗಿದೆ? ಆಸ್ಪತ್ರೆಯಲ್ಲಿ ಭಾಗ್ಯಶ್ರೀ ಈಗ ಹೇಗಿದ್ದಾರೆ?” ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಇದರೊಂದಿಗೆ, ಭಾಗ್ಯಶ್ರೀ ಅವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥನೆಗಳು ಹರಿದು ಬರುತ್ತಿವೆ.

ತಮ್ಮ ಮನೆಯವರೊಂದಿಗೆ ಹೋಳಿ ಹಬ್ಬವನ್ನು ಆಚರಿಸಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದ ಭಾಗ್ಯಶ್ರೀ, ಅದೇ ಸಮಯದಲ್ಲಿ ಪಿಕಲ್ ಬಾಲ್ ಆಡುವಾಗ ಅಪಘಾತಕ್ಕೊಳಗಾದರು ಎನ್ನಲಾಗಿದೆ.