Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಶ್ಲೀಲ ಪ್ರಶ್ನೆ ಕೇಳಿದವನಿಗೆ ನಟಿ ಅದಾ ಶರ್ಮಾ ‘ಚಪ್ಪಲಿ’ ಏಟು: ನಟಿಯ ಬೋಲ್ಡ್ ಉತ್ತರ ವೈರಲ್!

Spread the love

ನಟಿ ಅದಾ ಶರ್ಮಾ (Adah Sharma) ಅವರು ಕನ್ನಡ ಚಿತ್ರರಂಗದವರಿಗೂ ಪರಿಚಿತರು. ಪುನೀತ್ ರಾಜ್​​ಕುಮಾರ್ ನಟನೆಯ ‘ರಣ ವಿಕ್ರಮ’ ಸಿನಿಮಾದಲ್ಲಿ ಅದಾ ಶರ್ಮಾ ಅವರು ನಟಿಸಿದ್ದರು. ಈ ಸಿನಿಮಾ ಮೆಚ್ಚುಗೆ ಪಡೆಯಿತು. ‘ದಿ ಕೇರಳ ಸ್ಟೋರಿ’ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು. ಸದ್ಯ ಅವರು ಬಾಲಿವುಡ್​​ನಲ್ಲಿ ಬ್ಯುಸಿ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿರೋ ಅದಾ ಶರ್ಮಾ ಅವರು ಆಗಾಗ ವಿವಿಧ ರೀತಿಯ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ಅಶ್ಲೀಲವಾಗಿ ಪ್ರಶ್ನೆ ಕೇಳಿದವರಿಗೆ ಉತ್ತರ ನೀಡಿದ್ದಾರೆ.
ಸೆಲೆಬ್ರಿಟಿಗಳು ಕೆಲವೊಮ್ಮೆ ಬೋಲ್ಡ್ ಆಗಿ ಕಾಣಿಸಿಕೊಂಡು ಫೋಟೋ ಹಾಕುತ್ತಾರೆ. ಈ ಪೋಸ್ಟ್​​ಗಳ ಕಮೆಂಟ್ ಸೆಕ್ಷನ್​​ಗೆ ತೆರಳಿದರೆ ಸಾಕಷ್ಟು ಕೆಟ್ಟ​ ಕಮೆಂಟ್​​​ಗಳನ್ನು ಕಾಣಬಹುದು. ಕೆಲವು ನಟಿಯರು ಇದಕ್ಕೆ ಉತ್ತರ ಕೊಡದೆ ಸುಮ್ಮನೆ ಇದ್ದರೆ ಇನ್ನೂ ಕೆಲವರು ಈ ರೀತಿಯ ಪ್ರಶ್ನೆ ಕೇಳಿದವರಿಗೆ ಖಡಕ್ ಆಗಿ ಉತ್ತರ ನೀಡುತ್ತಾರೆ. ಅದಾ ಶರ್ಮಾ ಕೂಡ ಹಾಗೆಯೇ ಮಾಡಿದ್ದಾರೆ.ಅದಾ ಶರ್ಮಾ ಅವರು ‘ಆಸ್ಕ್ ಮಿ ಎನಿಥಿಂಗ್’ ಸೆಷನ್ ನಡೆಸಿದ್ದರು. ಈ ವೇಳೆ ಅದಾ ಶರ್ಮಾ ಅವರಿಗೆ ‘ನಿಮ್ಮ ಸೈಜ್ ಎಷ್ಟು’ ಎಂದು ಕೇಳಲಾಗಿದೆ. ಇದು ಕೆಟ್ಟ ಉದ್ದೇಶದಿಂದ ಕೇಳಿದ ಪ್ರಶ್ನೆ ಎಂಬುದು ಅದಾಗೆ ಗೊತ್ತಾಗಿದೆ. ಹೀಗಾಗಿ, ಅವರು ‘ಸೈಜ್ 9, ನನ್ನ ಚಪ್ಪಲಿಯದ್ದು’ ಎಂದಿದ್ದಾರೆ. ಈ ವೇಳೆ ಅವರು ಪರೋಕ್ಷವಾಗಿ ಮಧ್ಯ ಬೆಟ್ಟನ್ನು ತೋರಿಸಿದ್ದಾರೆ. ಈ ಮೂಲಕ ಪ್ರಶ್ನೆ ಕೇಳಿದವನಿಗೆ ಅದಾ ಮಂಗಳಾರತಿ ಮಾಡಿದ್ದಾರೆ. ಅವರ ಕ್ರಮಕ್ಕೆ ಎಲ್ಲರೂ ಸಂತಸ ಹೊರಹಾಕಿದ್ದಾರೆ.ಸಾಮಾನ್ಯವಾಗಿ ಮುಜುಗರ ತರುವ ಪ್ರಶ್ನೆ ಅಥವಾ ಅಶ್ಲೀಲ ಪ್ರಶ್ನೆ ಕೇಳಿದಾಗ ಸೆಲೆಬ್ರಿಟಿಗಳು ಆ ಬಗ್ಗೆ ಉತ್ತರ ನೀಡಲು ಹಿಂದೇಟು ಹಾಕುತ್ತಾರೆ. ಆ ರೀತಿಯ ಪ್ರಶ್ನೆಗಳನ್ನು ಸ್ಕಿಪ್ ಮಾಡುತ್ತಾರೆ. ಆದರೆ, ಅದಾ ಶರ್ಮಾ ಅವರು ಆ ರೀತಿ ಮಾಡಿಲ್ಲ. ಅವರು ಈ ಪ್ರಶ್ನೆಯನ್ನು ಗಂಭೀರವಾಗಿ ಸ್ವೀಕರಿಸಿ, ಅದಕ್ಕೆ ಉತ್ತರ ಕೊಟ್ಟಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *