ನಟಿ ಸಾಕ್ಷಿ ಮಲಿಕ್‌ಗೆ ರಾಘವ್ ಜುಯಾಲ್ ಕಪಾಳಮೋಕ್ಷ: ವೈರಲ್ ಆದ ವಿಡಿಯೋದ ರಹಸ್ಯ ಬಯಲು

‘ಬೊಮ್ ಡಿಗ್ಗಿ ಡಿಗ್ಗಿ’ ಖ್ಯಾತಿಯ ಸಾಕ್ಷಿ ಮಲಿಕ್ ಮತ್ತು ನಟ ರಾಘವ್ ಜುಯಾಲ್ ಜಗಳದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿದೆ. ತಾಳ್ಮೆ ಕಳೆದುಕೊಂಡ ರಾಘವ್ ಸಾಕ್ಷಿ ಕೆನ್ನೆಗೆ ಹೊಡೆದಿದ್ದಾರ
ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..

ಇತ್ತೀಚಿಗೆ ನಟ-ನಟಿಯರು ಎನೇ ಮಾಡಿದರೂ ಅವರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ತಕ್ಷಣ ವೈರಲ್ ಆಗುತ್ತವೆ. ಈ ಪೈಕಿ ಪ್ರಸ್ತುತ ರಾಘವ್ ಜುಯಾಲ್ ಮತ್ತು ಸಾಕ್ಷಿ ಮಲಿಕ್ ಅವರ ವಿಡಿಯೋ ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ಘಟನೆ ಕುರಿತು ಇಬ್ಬರೂ ಸ್ಪಷ್ಟತೆ ನೀಡಿದ್ದಾರೆ.
ಸ್ವತಃ ರಾಘವ್ ಸ್ಪಷ್ಟ ಸಂದೇಶದೊಂದಿಗೆ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದು ನಾವು ನಮ್ಮ ಸಿನಿಮಾದ ಸ್ಕ್ರಿಪ್ಟ್ ಗಾಗಿ ಅಭ್ಯಾಸ ಮಾಡುವ ಸಮಯದಲ್ಲಿ ನಡೆದ ಪ್ರಸಂಗ, ದಯವಿಟ್ಟು ಇದು ನಿಜ ಎಂದು ಭಾವಿಸಬೇಡಿ.. ಇದು ಸಿನಿಮಾ ಸ್ಕ್ರಿಪ್ಟ್‌ಗಾಗಿ ಪ್ರಾಕ್ಟೀಸ್ ಅಂತ ತಿಳಿಸಿದಸ್ದಾರೆ.
ಸಾಕ್ಷಿ ಕೂಡ.. ನಿಜವಾಗಿ ಹೊಡೆದಾಡಿದಂತೆ ಕಾಣುವ ಈ ದೃಶ್ಯ ಕೇವಲ ಸ್ಕ್ರಪ್ಟ್‌ನ ಪೂರ್ವಾಭ್ಯಾಸ, ಇದನ್ನು ಹಂಚಿಕೊಳ್ಳುವ ಹಿಂದೆ ಯಾರನ್ನೂ ನೋಯಿಸುವ ಅಥವಾ ಕೆಟ್ಟ ಉದ್ದೇಶವಿರಲಿಲ್ಲ. ಇದನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಸಾಕ್ಷಿ ಬೊಮ್ ಡಿಗ್ಗಿ ಡಿಗ್ಗಿ ಹಾಡಿನ ಮೂಲಕ ಮುನ್ನೆಲೆಗೆ ಬಂದರು. ಸಾಕ್ಷಿ, ಅರ್ಮಾನ್ ಮಲಿಕ್ ಅವರ ವೇಹಮ್ ಮತ್ತು ವಿಶಾಲ್ ಮಿಶ್ರಾ ಮತ್ತು ಶ್ರೇಯಾ ಘೋಷಾಲ್ ಅವರ ಮುಲಾಕಾತ್‌ನಂತಹ ಸಂಗೀತ ವೀಡಿಯೊಗಳಲ್ಲಿಯೂ ಮಿಂಚಿದ್ದಾರೆ. 2023 ರಲ್ಲಿ, ಅವರು ಡ್ರೈ ಡೇ ಚಿತ್ರಕ್ಕೆ ಚುನ್ನಿ ಬಾಯಿ ಪಾತ್ರವನ್ನು ನಿರ್ವಹಿಸುವ ಮೂಲಕ ತಮ್ಮ ಕ್ರೇಜ್ ಗಿಟ್ಟಿಸಿಕೊಂಡರು.
ರಾಘವ್ ಜುಯಾಲ್ ಡಾನ್ಸಿಂಗ್ ಸೆನ್ಸೇಷನ್ ಆಗಿದ್ದರು.. ಪ್ರಸ್ತುತ ನಟನಾಗಿ ತಮ್ಮ ಟ್ಯಾಲೆಂಟ್ ಪ್ರದರ್ಶಿಸುತ್ತಿದ್ದಾರೆ. ರಾಘವ್ ಸಲ್ಮಾನ್ ಖಾನ್ ಅವರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ನಲ್ಲಿಯೂ ಕಾಣಿಸಿಕೊಂಡಿಸದ್ದರು. ಪ್ರಸ್ತುತ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
