ಕೇರಳದಲ್ಲಿ ಮೊದಲ ‘ಫೆರಾರಿ ಪುರೋಸಾಂಗ್ಯು’ ಕಾರು ಖರೀದಿಸಿದ ನಟ ಫಹಾದ್ ಫಾಸಿಲ್

ಮಲಯಾಳಂ ನಟ ಫಹಾದ್ ಫಾಸಿಲ್ ಈಗ ತಮಿಳು, ತೆಲುಗು ಮೊದಲಾದ ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ಅವರ ಖ್ಯಾತಿ ವಿಶ್ವ ಮಟ್ಟದಲ್ಲಿ ಹಬ್ಬಿದೆ. ಅವರು ಕಾರು ಪ್ರಿಯರು. ಈಗ ಅವರು ತಮ್ಮ ಗ್ಯಾರೆಜ್ಗೆ ಹೊಸ ಕಾರನ್ನು ಸೇರ್ಪಡೆ ಮಾಡಿದ್ದಾರೆ. ಅದುವೇ, ಫೆರಾರಿ ಪುರೋಸಾಂಗ್ಯು. ಆ ಬಗ್ಗೆ ಇಲ್ಲಿದೆ ವಿವರ.

ಮಲಯಾಳಂ ನಟ ಫಹಾದ್ ಫಾಸಿಲ್ ಅವರು ಕಾರು ಪ್ರಿಯರು. ಅವರ ಬಳಿ ಲ್ಯಾಂಬೋರ್ಗಿನಿ, ಪೋರ್ಷಾ, ಮರ್ಸೀಡಿಸ್ ಬೆಂಜ್ ಜಿ63 ಎಎಂಜಿ, ರೇಂಜ್ ರೋವರ್ ಆಟೋಬಯೋಗ್ರಫಿ ರೀತಿಯ ಕಾರುಗಳು ಇವೆ.
ಈಗ ಅವರು ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ಫೆರಾರಿ ಪುರೋಸಾಂಗ್ಯು ಅನ್ನು ಖರೀದಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕಾರಿನ ಬೆಲೆ ಬರೋಬ್ಬರಿ 13 ಕೋಟಿ ರೂಪಾಯಿ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ 10 ಕೋಟಿ ರೂಪಾಯಿ. ಈ ಕಾರು ಸಾಕಷ್ಟು ವಿಶೇಷತೆ ಹೊಂದಿದೆ.

ಸದ್ಯ ಫಹಾದ್ ಕಾರಿನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಕಾರಿನ ಇಂಟೀಯರ್ ಕೂಡ ಗಮನ ಸೆಳೆದಿದೆ. ಈ ಕಾರು ನಾಲ್ಕು ಡೋರ್ಗಳನ್ನು ಹೊಂದಿದೆ ಎಂಬುದು ವಿಶೇಷ. ಸಾಮಾನ್ಯವಾಗಿ ಫೆರಾರಿ ಕಾರು ಕೇವಲ ಎರಡು ಡೋರ್ಗಳನ್ನು ಹೊಂದಿರುತ್ತವೆ.
ಫೆರಾರಿ ರೇಸ್ ಕಾರುಗಳನ್ನು ನಿರ್ಮಾಣ ಮಾಡಲು ಹೆಚ್ಚು ಫೇಮಸ್. ಇದೇ ಮೊದಲ ಬಾರಿಗೆ ಎಸ್ಯುವಿ ಕಾರನ್ನು ಖರೀದಿ ಮಾಡಿದ್ದಾರೆ. ಕೇರಳದಲ್ಲಿ ಇದು ಮೊದಲ ಫೆರಾರಿ ಪುರೋಸಾಂಗ್ಯು ಎನ್ನಲಾಗಿದೆ.
ಫೆರಾರಿ ಪುರೋಸಾಂಗ್ಯು ಕಾರು 6.5 ಲೀಟರ್ ವಿ12 ಎಂಜಿನ್ ಹೊಂದಿದೆ. ಈ ಕಾರು 3.3 ಸೆಕೆಂಡ್ನಲ್ಲಿ ಜೀರೋದಿಂದ 100 ಕಿ.ಮೀ ವೇಗ ತಲುಪಬಲ್ಲದು. 310 ಕಿ.ಮೀ ಇದರ ಗರಿಷ್ಠ ವೇಗ. ಇದರ ಬೆಲೆ 13 ಕೋಟಿ ರೂಪಾಯಿ.
