ಯುವತಿ ಮದುವೆ ನಿರಾಕರೀಸಿದ್ದಕ್ಕೆ ಮಾವನಿಂದ ಆಯಸಿಡ್ ದಾಳಿ

ಚಿಕ್ಕಬಳ್ಳಾಪುರ:ರಾಜ್ಯದಲ್ಲಿ ಶಾಕಿಂಗ್ ಘಟನೆ ಎನ್ನುವಂತೆ ಮದುವೆಯಾಗಲು ನಿರಾಕರಿಸಿದಂತ ಯುವತಿಗೆ ಮಾನವೇ ಟಾಯ್ಲೆಟ್ ಕ್ಲೀನರ್ ಆಯಸಿಡ್ ಎರಚಿದಂತ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡನಬಲೆ ಗ್ರಾಮದಲ್ಲಿ ಮದುವೆಯಾಗೋದಕ್ಕೆ ಯುವತಿ ವೈಶಾಲಿ(19) ನಿರಾಕರಿಸಿದ್ದಳು.

ಈ ಹಿನ್ನಲೆಯಲ್ಲಿ ಸೋದರ ಮಾವ ಆನಂದ್ ಕುಮಾರ್ ಎಂಬಾತ ಟಾಯ್ಲೆಟ್ ಕ್ಲೀನ್ ಮಾಡುವಂತ ಆಯಸಿಡ್ ಎರಚಿದ್ದಾರೆ.
ಯುವತಿ ವೈಶಾಲಿ ಮೇಲೆ ಆಯಸಿಡ್ ಎರಚಿದಂತ ಸೋದರ ಮಾವ, ಆ ಬಳಿಕ ತಾನು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಆನಂದ್ ಕುಮಾರ್ ಯತ್ನಿಸಿದ್ದಾನೆ. ಯುವತಿಯ ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಿಹಳ್ಳಿ ನಿವಾಸಿ ಆನಂದ್ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಸೋದರ ಮಾವನ ಆಯಸಿಡ್ ದಾಳಿಗೆ ಒಳಗಾದಂತ ಯುವತಿ ವೈಶಾಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇತ್ತ ಆತ್ಮಹತ್ಯೆಗೆ ಯತ್ನಿಸಿದಂತ ಆನಂದ್ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾನೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
