ಸ್ಪೇಸ್ ಎಕ್ಸ್ ಗೆ ಸಾಧ್ಯವಾಗದ ಸಾಧನೆ: ಬೆಂಗಳೂರಿನ ವಿಶ್ವದ ಮೊತ್ತಮೊದಲ ಪೂರ್ಣ ರೀಯೂಸಬಲ್ ರಾಕೆಟ್

ಬೆಂಗಳೂರು: ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಕಂಪನಿಗೂ ಸಾಧ್ಯವಾಗದ ಕೆಲಸವನ್ನು ಬೆಂಗಳೂರಿನ ಎತೀರಿಯಲ್ ಎಕ್ಸ್ ಎನ್ನುವ ಕಂಪನಿ ಮಾಡಿದೆ. ನಭಕ್ಕೆ ಹೋಗಿ ವಾಪಸ್ ಭೂಮಿಗೆ ವಾಪಸ್ ಬರಬಲ್ಲ ರಾಕೆಟ್ ಅನ್ನು ಎತಿರಿಯಲ್ ಕಂಪನಿ ಅಭಿವೃದ್ಧಿಪಡಿಸಿದೆ. ಈ ಮೂಲಕ ಬೆಂಗಳೂರಿನ ಸ್ಟಾರ್ಟಪ್ ಹೊಸ ದಾಖಲೆ ಬರೆದಿದೆ. ವಿಶ್ವದಲ್ಲಿ ಯಾರೂ ಕೂಡ ಪೂರ್ಣ ರೀತಿಯಲ್ಲಿ ರೀಯೂಸಬಲ್ ರಾಕೆಟ್.

ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆ ರೀಯೂಸಬಲ್ ರಾಕೆಟ್ ತಯಾರಿಸಿದೆಯಾದರೂ ಅದು ಪೂರ್ಣ ರೀಯೂಸಬಲ್ ಅಲ್ಲ. ರಾಕೆಟ್ನಲ್ಲಿನ ಲೋಯರ್ ಸ್ಟೇಜ್ನ ಭಾಗ ಮಾತ್ರ ಭೂಮಿಗೆ ಮರಳಿ, ಮರುಬಳಕೆಗೆ ಯೋಗ್ಯವಾಗಿರುತ್ತದೆ. ಬೂಸ್ಟರ್ ಭಾಗವು ತನ್ನ ಕೆಲಸ ಮುಗಿದ ಬಳಿಕ ನಾಶವಾಗಿ ಹೋಗುತ್ತದೆ. ಪೂರ್ಣವಾಗಿ ರೀಯೂಸಬಲ್ ಆಗಬಲ್ಲಂತಹ ಇಡೀ ರಾಕೆಟ್ ಅಥವಾ ಸ್ಪೇಸ್ಶಿಪ್ ಅನ್ನು ತಯಾರಿಸುವ ಪ್ರಯತ್ನದಲ್ಲಿ ಸ್ಪೇಸ್ ಎಕ್ಸ್ ಇದೆ. ಆದರೆ, ಅದಕ್ಕೂ ಮೊದಲೇ ಬೆಂಗಳೂರಿನ ಎತೀರಿಯಲ್ ಕಂಪನಿ ಈ ಕೆಲಸ ಮಾಡಿದೆ.
2022ರಲ್ಲಿ ಹುಟ್ಟಿದ ಎತೀರಿಯಲ್ಎಕ್ಸ್ ಕಂಪನಿ ಕೇವಲ ಮೂರು ವರ್ಷದಲ್ಲಿ ತನ್ನ ಛಾಪು ಮೂಡಿಸಿದೆ. ಅಪ್ಪರ್ ಮತ್ತು ಬೂಸ್ಟರ್ ಭಾಗಗಳೆರಡೂ ಭೂಮಿಗೆ ಸುರಕ್ಷಿತವಾಗಿ ಮರಳಿ, ಮರುಬಳಕೆಗೆ ಯೋಗ್ಯವಾಗಿರಬಲ್ಲ ರಾಕೆಟ್ಗಳನ್ನು ಈ ಕಂಪನಿ ತಯಾರಿಸುತ್ತಿದೆ. ಈ ತಂತ್ರಜ್ಞಾನವನ್ನು ಕಂಪನಿ ಯಶಸ್ವಿಯಾಗಿ ಪರೀಕ್ಷೆ ಮಾಡಿದೆ. ಇದನ್ನು ಬಳಸಿ ರಾಕೆಟ್ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ.
ಬಿಸಿಯಿಂದ ಹಾನಿಯಾಗದಂತೆ ಹೊಸ ತಂತ್ರಜ್ಞಾನ
ಎದಿರಿಯಲ್ಎಕ್ಸ್ ಸಂಸ್ಥೆ ವಿನೂತನ ರಾಕೆಟ್ ಎಂಜಿನ್ ಫೀಡ್ ಸೈಕಲ್ ನಿರ್ಮಿಸಿದೆ. ಇದು ರಾಕೆಟ್ನಲ್ಲಿ ಇಂಧನವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತದೆ. ರಾಕೆಟ್ ಭೂಮಿಯ ವಾತಾವರಣಕ್ಕೆ ಬರುವಾಗ ಸಾಮಾನ್ಯವಾಗಿ ಅತಿಯಾದ ಶಾಖದಿಂದಾಗಿ ಸುಟ್ಟು ಹೋಗುತ್ತದೆ. ಬಹಳ ದುಬಾರಿಯಾದ ಹೀಟ್ ಶೀಲ್ಡ್ಗಳನ್ನು ಬಳಸಬೇಕಾಗುತ್ತದೆ. ಆದರೆ, ಎತಿರಿಯಲ್ ಅಭಿವೃದ್ಧಿಪಡಿಸಿರುವ ಎಂಜಿನ್ನಲ್ಲಿ ಬಿಸಿಯನ್ನು ಬೇರೆಡೆ ವರ್ಗಾಯಿಸುವ ಮೂಲಕ ರಾಕೆಟ್ನ ಅಪ್ಪರ್ ಸ್ಟೇಜ್ ಅನ್ನು ಹಾಳಾಗದಂತೆ ರಕ್ಷಿಸುತ್ತದೆ.
ಎದಿರಿಯಲ್ಎಕ್ಸ್ ಸಂಸ್ಥೆಯ ರೀಯೂಸಬಲ್ ರಾಕೆಟ್ ಅನ್ನು ರೇಜರ್ ಕ್ರೆಸ್ಟ್ ಎಂಕೆ-1 ಎಂದು ಹೆಸರಿಸಿದೆ. ಇದು ಮಧ್ಯಮ ಸಾಮರ್ಥ್ಯದ ರಾಕೆಟ್. ಕೆಳ ಭೂಕಕ್ಷೆಗೆ 24.8 ಟನ್ಗಳವರೆಗೆ ಪೇಲೋಡ್ ಹೊತ್ತೊಯ್ಯಬಲ್ಲುದು. ತುಸು ಮೇಲಿರುವ ಜಿಟಿಒ ಕಕ್ಷೆಗೆ 10.8 ಟನ್ಗಳಷ್ಟು ಪೇಲೋಡ್ ಅನ್ನು ಈ ರಾಕೆಟ್ ಒಯ್ಯುವ ಸಾಮರ್ಥ್ಯ ಹೊಂದಿದೆ.