ಕಳ್ಳತನ ಆರೋಪಿಸಿ 40ಕ್ಕೂ ಹೆಚ್ಚು ಮೂಳೆ ಮುರಿದು ಹ*ಲ್ಲೆ

ಇಂದೋರ್: ಕಳ್ಳತನ ಆರೋಪ ಹೊರಿಸಿ ಗುಂಪೊಂದು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಪರಿಣಾಮ ಅವರ 40 ಮೂಳೆಗಳಲ್ಲಿ ಮುರಿತ ಉಂಟಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಇಂದೋರ್ನಲ್ಲಿ ನಡೆದಿದೆ. ಇಂದೋರ್ನ ಆಜಾದ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದ ಕಾರ್ಮಿಕರು ಮತ್ತು ಕಾವಲುಗಾರರ ಗುಂಪೊಂದು ಕ್ರೂರವಾಗಿ ಥಳಿಸಿದ್ದರಿಂದ ಗಂಭೀರ ಗಾಯಗೊಂಡು 28 ವರ್ಷದ ಉಮೇಂದ್ರ ಸಿಂಗ್ ಠಾಕೂರ್ ಸಾವನ್ನಪ್ಪಿದ್ದಾರೆ.
ಸೇತುವೆ ನಿರ್ಮಾಣ ಹಂತದಲ್ಲಿತ್ತು, ನಿರ್ಮಾಣ ಹಂತದಲ್ಲಿರುವ ಸೇತುವೆ ಒಂದು ಭಾಗಕ್ಕೆ ಬೇಕಾದ ಸಾಮಗ್ರಿಗಳನ್ನು ಇರಿಸಲಾಗಿದ್ದ ಗೋದಾಮಿನಿಂದ ಯುವಕನೊಬ್ಬ ಕಬ್ಬಿಣದ ಸರಳುಗಳನ್ನು ಕದಿಯುತ್ತಿದ್ದನೆಂದು ಆರೋಪಿಸಲಾಗಿದೆ. ಆ ದೂರಿನ ಆಧಾರದ ಮೇಲೆ ನಿರ್ಮಾಣ ಹಂತದಲ್ಲಿರುವ ಸೇತುವೆಯ ಕೆಲವು ಕಾರ್ಮಿಕರು ಮತ್ತು ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಯುವಕನನ್ನು ಥಳಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಯುವಕನ ಮರಣೋತ್ತರ ಪರೀಕ್ಷೆಯ ವರದಿಯು ದೇಶದಲ್ಲಿ ಕನಿಷ್ಠ 40 ಸ್ಥಳಗಳಲ್ಲಿ ಮೂಳೆಗಳು ಮುರಿದಿವೆ ಎಂದು ಹೇಳಿದೆ. ಹೊಡೆತದಿಂದಾಗಿ ಅವನ ಕೈಗಳು, ಕಾಲುಗಳು ಮತ್ತು ಪಕ್ಕೆಲುಬುಗಳು ಮುರಿದಿತ್ತು. ದೇಹದ ಒಳಗೆ ರಕ್ತಸ್ರಾವವಾಗಿತ್ತು. ದೇಹದ ಅನೇಕ ಸ್ಥಳಗಳಲ್ಲಿ ಮೂಳೆಗಳು ಮುರಿದಿರುವುದರ ಜೊತೆಗೆ, ಆಳವಾದ ಗಾಯದ ಗುರುತುಗಳು ಕಂಡುಬಂದಿವೆ.
ಮೂಲಗಳ ಪ್ರಕಾರ , ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ ಬಳಿಕ, ಪೊಲೀಸರು ಘಟನೆಯಲ್ಲಿ ಭಾಗಿಯಾಗಿರುವ ಹಲವು ಶಂಕಿತರನ್ನು ಈಗಾಗಲೇ ಗುರುತಿಸಿದ್ದಾರೆ.
ಅವರನ್ನು ವಶಕ್ಕೆ ಪಡೆಯಲಾಗಿದೆ, ಆರೋಪಿಗಳು ಹೊಡೆದಿದ್ದಾಗಿ ಒಪ್ಪಿಕೊಂಡಿದ್ದಾರೆ. ಕಳ್ಳತನ ಮಾಡುವಾಗ ಉಪೇಂದ್ರನನ್ನು ಹಿಡಿದಿರುವುದಾಗಿ ಅವರು ಪೊಲೀಸರಿಗೆ ತಿಳಿಸಿದ್ದಾರೆ. ಯುವಕ ಕಬ್ಬಿಣದ ರಾಡ್ ಕದ್ದು ಓಡಿ ಹೋಗಲು ಯತ್ನಿಸಿದ್ದ ಎಂದು ತಿಳಿಸಿದ್ದಾರೆ.
ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಂತರ, ವಸ್ತುಗಳನ್ನು ಕಸಿದುಕೊಳ್ಳಲಾಯಿತು ನಂತರ ದೊಣ್ಣೆಯಿಂದ ಥಳಿಸಲಾಯಿತು. ಹಲ್ಲೆಯಿಂದಾಗಿ ಯುವಕ ಬಹುತೇಕ ಪ್ರಜ್ಞಾಹೀನನಾಗಿದ್ದ. ಪರಿಸ್ಥಿತಿ ಕೈಮೀರುತ್ತಿರುವುದನ್ನು ನೋಡಿ ಹೊಡೆಯುವುದನ್ನು ನಿಲ್ಲಿಸಿ ಆಸ್ಪತ್ರೆಗೆ ಕರೆದೊಯ್ದರು.
ಘಟನೆಯ ಬಗ್ಗೆ ಸರಿಯಾದ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಅವರ ಕುಟುಂಬ ಸದಸ್ಯರು ಮತ್ತು ಸ್ಥಳೀಯರು ಆಜಾದ್ ನಗರ ಪೊಲೀಸ್ ಠಾಣೆಯ ಮುಂದೆ ಉಪೇಂದ್ರ ಅವರ ಶವದೊಂದಿಗೆ ಪ್ರತಿಭಟನೆ ನಡೆಸಿದರು.
ಜೂನ್ 18 ರಂದು, ಕೋಲ್ಕತ್ತಾದ ಕಡೇಯಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಮೊಬೈಲ್ ಕಳ್ಳನೆಂದು ಶಂಕಿಸಿ ಯುವಕನೊಬ್ಬನನ್ನು ಕ್ರೂರವಾಗಿ ಚಿತ್ರಹಿಂಸೆಗೊಳಿಸಲಾಯಿತು. ನಾಲ್ವರು ಸ್ಥಳೀಯರು ಮೊದಲು ಆ ವ್ಯಕ್ತಿಯನ್ನು ವಶಕ್ಕೆ ಪಡೆದು ಕ್ರೂರವಾಗಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಕಳ್ಳನೆಂದು ಶಂಕಿಸಿ ಯುವಕನನ್ನು ಮೊದಲು ಕೋಣೆಯಲ್ಲಿ ಇರಿಸಲಾಗಿತ್ತು ಮತ್ತು ನಂತರ ಕ್ರೂರವಾಗಿ ಚಿತ್ರಹಿಂಸೆ ನೀಡಿ, ಥಳಿಸಿ, ಡ್ರಿಲ್ ಯಂತ್ರದಿಂದ ಕಾಲಿಗೆ ಚುಚ್ಚಲಾಗಿದೆ ಎಂದು ತಿಳಿದುಬಂದಿದೆ.
