Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೈಕೊಟ್ಟ ಪ್ರಿಯಕರ, ಮನೆಯಲ್ಲೇ ಹೆರಿಗೆ: ಬೆಂಗಳೂರಿನಲ್ಲಿ ರಕ್ತಸ್ರಾವದಿಂದ ಯುವತಿ ಸಾವು

Spread the love

Silhouette Of A Woman Holding Her Head During Pregnancy Pregnant Woman In  Sadness At The Window Stock Photo - Download Image Now - iStock

ಬೆಂಗಳೂರು– ಲಿವಿಂಗ್‌ ಟು ಗೆದರ್‌ನಲ್ಲಿದ್ದ ಯುವತಿ ಗರ್ಭಿಣಿಯಾದ ನಂತರ ಯುವಕ ಕೈಕೊಟ್ಟಿದ್ದು, ಮಗುವಿಗೆ ಜನ್ಮ ನೀಡಿದ ಕೆಲವೇ ನಿಮಿಷಗಳಲ್ಲಿ ಆಕೆ ಮೃತಪಟ್ಟಿರುವ ಘಟನೆ ವೈಯಾಲಿಕಾವಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಪಶ್ಚಿಮ ಬಂಗಾಳ ಮೂಲದ ಸಂಜನಾ (25) ಮೃತಪಟ್ಟ ಯುವತಿ.

ಪಶ್ಚಿಮ ಬಂಗಾಳದಿಂದ ತಾಯಿ ಯೊಂದಿಗೆ ಬಂದಿದ್ದ ಸಂಜನಾ ವೆಂಕಟಾಪುರದಲ್ಲಿ ನೆಲೆಸಿದ್ದು, ಸೆಕ್ಯೂರಿಟಿ ಏಜೆನ್ಸಿಯಲ್ಲಿ ತಾಯಿ ಅಡಿಗೆ ಕೆಲಸ ಮಾಡಿಕೊಂಡಿದ್ದು, ಸಂಜನಾ ಎಂಎಸ್‌ ರಾಮಯ್ಯ ಕಾಲೇಜಿನಲ್ಲಿ ಎಲ್‌ಎಲ್‌ಎಂ ವ್ಯಾಸಂಗ ಮಾಡುತ್ತಿದ್ದರು.

ಈ ನಡುವೆ ಸಂಜನಾಗೆ ಯುವಕನೊಬ್ಬನ ಪರಿಚಯವಾಗಿ ಸ್ನೇಹ ಬೆಳೆದಿದೆ. ನಂತರ ಅವರಿಬ್ಬರ ಮಧ್ಯೆ ಪ್ರೀತಿಯಾಗಿದ್ದು, ಆಕೆಯ ಮನೆಯಲ್ಲಿ ಆತನೂ ಲಿವಿಂಗ್‌ ಟು ಗೆದರ್‌ನಲ್ಲಿ ಇದ್ದರು.
ನಂತರದ ದಿನಗಳಲ್ಲಿ ಸಂಜನಾ ಗರ್ಭಿಣಿಯಾಗಿದ್ದಾಳೆ. ಕಳೆದ ಎರಡು ಮೂರು ತಿಂಗಳ ಹಿಂದೆ ಸಂಜನಾ ಜೊತೆ ಜಗಳವಾಡಿ ಲಿವಿಂಗ್‌ ಟು ಗೆದರ್‌ನಲ್ಲಿದ್ದ ಯುವಕ ಆಕೆಯನ್ನು ಬಿಟ್ಟುಹೋಗಿ ದ್ದಾನೆ. ನಿನ್ನೆ ಮುಂಜಾನೆ ಸಂಜನಾಳಿಗೆ ಮನೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ. ತಾಯಿ ಆಸ್ಪತ್ರೆಗೆ ಹೋಗೋಣವೆಂದು ಹೇಳಿದರೂ ಆಕೆ ನಿರಾಕರಿಸಿದ್ದಾಳೆ.

ಹೆರಿಗೆ ನೋವಿನಿಂದ ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ್ದು,ಆಕೆಗೆ ತೀವ್ರ ರಕ್ತಸ್ರಾವವಾದ ಪರಿಣಾಮ ನಿತ್ರಾಣಗೊಂಡು ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದ್ದಾಳೆ. ಸುದ್ದಿ ತಿಳಿದು ವೈಯಾಲಿ ಕಾವಲ್‌ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಹಸುಗೂಸನ್ನು ಮಕ್ಕಳ ಆರೈಕೆ ಕೇಂದ್ರಕ್ಕೆ ಕಳುಹಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *