Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಡಾಲರ್ ಬಿಟ್ಟು ಚೀನಾ ಕರೆನ್ಸಿಗೆ ಮೊರೆಹೋಗಿ: ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಇರಾನ್ ಹೊಸ ಷರತ್ತು

Spread the love

ಹೊಸದಿಲ್ಲಿ: ಚೀನಾದ ಕರೆನ್ಸಿಯಾದ ಯುವಾನ್ ನಲ್ಲಿ ಸರಕುಗಳ ವ್ಯಾಪಾರ ನಡೆಸುವ ದೇಶಗಳಿಗೆ ಹಾರ್ಮುಝ್ ಜಲಸಂಧಿಯ ಮೂಲಕ ಸೀಮಿತ ಸಂಖ್ಯೆಯ ತೈಲ ಟ್ಯಾಂಕರ್ ಗಳನ್ನು ಹಾದುಹೋಗಲು ಇರಾನ್ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಅಮೆರಿಕದ ಸುದ್ದಿಸಂಸ್ಥೆ ಸಿಎನ್ಎನ್ ವರದಿ ಮಾಡಿದೆ.
ಇಸ್ರೇಲ್-ಅಮೆರಿಕ ವಿರುದ್ಧದ ಯುದ್ಧದ ನಂತರ ಕಾರ್ಯತಂತ್ರದ ಮಹತ್ವ ಹೊಂದಿರುವ ಹಾರ್ಮುಝ್ ಜಲಸಂಧಿಯ ಮೂಲಕ ಟ್ಯಾಂಕ‌ರ್ ಸಂಚಾರವನ್ನು ನಿಯಂತ್ರಿಸಲು ಟೆಹ್ರಾನ್ ರೂಪಿಸುತ್ತಿರುವ ವಿಶಾಲ ಯೋಜನೆಯ ಭಾಗವಾಗಿ ಈ ಪ್ರಸ್ತಾಪವನ್ನು ರೂಪಿಸಲಾಗಿದೆ ಎಂದು ವರದಿ ಹೇಳಿದೆ.
ಜಾಗತಿಕ ತೈಲ ಸಾಗಣೆಯ ಪ್ರಮುಖ ದಾರಿಗೆ ಸೇರಿದ ಹಾರ್ಮುಝ್ ಜಲಸಂಧಿಯಲ್ಲಿ ಸಂಚಾರದ ಮೇಲಿನ ನಿಯಂತ್ರಣಗಳು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.
ಇನ್ನೂ ಜಾಗತಿಕ ತೈಲ ವ್ಯಾಪಾರದ ಬಹುಪಾಲು ಯುಎಸ್ ಡಾಲರ್ ನಲ್ಲಿ ನಡೆಯುತ್ತಿದ್ದರೂ, ಪಾಶ್ಚಾತ್ಯ ನಿರ್ಬಂಧಗಳಿಗೆ ಒಳಗಾದ ರಷ್ಯಾದ ಕಚ್ಚಾ ತೈಲವನ್ನು ಹೆಚ್ಚಾಗಿ ರೂಬಲ್ ಅಥವಾ ಯುವಾನ್ ನಲ್ಲಿ ವ್ಯಾಪಾರ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *