7 ಅರ್ಜಿಗಳನ್ನು ವಾಪಸ್‌ಗೆ ಆಮ್ ಆದ್ಮಿ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲು

ನವದೆಹಲಿ:ಆಮ್ ಆದ್ಮಿ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗ ವಿವಿಧ ಸಂಸ್ಥೆಗಳಲ್ಲಿ ಲೆಫ್ಟಿನೆಂಟ್ ಗವರ್ನರ್ ಅಧಿಕಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ 7 ಅರ್ಜಿಗಳನ್ನು ವಾಪಸ್ ಪಡೆಯಲು ಅನುಮತಿ ಕೋರಿ ಈಗಿನ ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಬಿಜೆಪಿ ನೇತೃತ್ವದ ದಿಲ್ಲಿ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಶುಕ್ರವಾರಕ್ಕೆ ನಿಗದಿಪಡಿಸುವಂತೆ ನ್ಯಾ.ಸೂರ್ಯಕಾಂತ್ ಮತ್ತು ನ್ಯಾ.ಎನ್.ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ ಸೂಚಿಸಿದೆ.
ಘನ ತ್ಯಾಜ್ಯ ನಿರ್ವಹಣೆ, ಯಮುನಾ ಸ್ವತ್ಛತೆ, ವಿವಿಧ ಕಾಯ್ದೆಗಳು, ಸುಗ್ರೀವಾಜ್ಞೆಗಳ ಮಾನ್ಯತೆ ಸೇರಿದಂತೆ ಅನೇಕ ವಿಚಾರಗಳಲ್ಲಿ ಲೆ.ಗವರ್ನರ್ ಅಧಿಕಾರವನ್ನು ಪ್ರಶ್ನಿಸಿ ಒಟ್ಟು 7 ಅರ್ಜಿಗಳನ್ನು ಆಪ್ ಸರ್ಕಾರ ಸಲ್ಲಿಸಿತ್ತು. ಇವೆಲ್ಲವೂ ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಉಳಿದಿದ್ದು, ಅವುಗಳನ್ನು ವಾಪಸ್ ಪಡೆಯಲು ಅನುಮತಿ ನೀಡುವಂತೆ ದಿಲ್ಲಿ ಸರ್ಕಾರ ಮನವಿ ಮಾಡಿದೆ.
