Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

18 ಕೋಟಿ ರೂಪಾಯಿಗೆ ಹಾಲಿವುಡ್ ಹೀರೋ ಕನ್ಯತ್ವ ಹರಾಜು ಮಾಡಿದ ವಿದ್ಯಾರ್ಥಿನಿ

Spread the love

ಹೀರೋಗಳ ಬಳಿ ಸಾಕಷ್ಟು ಹಣ ಇದೆ. ಹಣ ಇರೋ ಕಾರಣದಿಂದಲೇ ಅವರಲ್ಲಿ ಕೆಲವರಿಗೆ ವಿವಿಧ ರೀತಿಯ ದುರಾಸೆಗಳು ಸೇರಿಕೊಂಡಿವೆ. ಈಗ ಹಾಲಿವುಡ್ ಹೀರೋ ಒಬ್ಬರು ದೊಡ್ಡ ಮೊತ್ತಕ್ಕೆ ವಿದ್ಯಾರ್ಥಿನಿಯೊಬ್ಬರ ಕನ್ಯತ್ವ ಖರೀದಿಸಿದ್ದು ಸಾಕಷ್ಟು ಸಂಚಲನ ಸೃಷ್ಟಿಸಿದೆ,ಹೌದು, ಇತ್ತೀಚೆಗೆ ನಡೆದ ಬಿಡ್ಡಿಂಗ್​ನಲ್ಲಿ ಈ ಘಟನೆ ನಡೆದಿದೆ. ಲಂಡನ್ ಮೂಲದ ವಿದ್ಯಾರ್ಥಿನಿ ಕನ್ಯತ್ವ ಕಳೆದುಕೊಳ್ಳಲು ಇಷ್ಟು ದೊಡ್ಡ ಮೊತ್ತ ತೆಗೆದುಕೊಂಡಿದ್ದಾಳೆ! ಜೀವನದಲ್ಲಿ ಸೆಟಲ್ ಆಗಬೇಕು ಎಂಬುದು ಆಕೆಯ ಆಸೆ. ಅದಕ್ಕಾಗಿ ಈ ಹಾದಿ ಹಿಡಿದಿದ್ದಾಳೆ.
ಲಂಡನ್​ನ ಮ್ಯಾಂಚೆಸ್ಟರ್ ವಿದ್ಯಾರ್ಥಿನಿ ಲೌರಾ ಎಂಬಾಕೆಗೆ ಈಗಿನ್ನೂ 22 ವರ್ಷ. ಆಕೆ ವಿದ್ಯಾರ್ಥಿನಿ. ಅವಳು ಈಗ ಸುದ್ದಿಯಲ್ಲಿ ಇದ್ದಾಳೆ. ಅವಳು ತನ್ನ ಕನ್ಯತ್ವವನ್ನು ವೆಬ್​ಸೈಟ್ ಮೂಲಕ ಹರಾಜಿಗೆ ಇಟ್ಟಿದ್ದಳು. ಈ ಹರಾಜಿನಲ್ಲಿ ಜನಸಾಮಾನ್ಯರು, ಉದ್ಯಮಿಗಳು, ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಭಾಗಿ ಆಗಿದ್ದರು. ಈಗ ಈ ಹುಡುಗಿಯ ಕನ್ಯತ್ವ ಹಾಲಿವುಡ್ ಹೀರೋಗೆ ಮಾರಾಟ ಆಗಿದೆ. ಆದರೆ, ಹೀರೋನ ಹೆಸರು ಎಲ್ಲಿಯೂ ರಿವೀಲ್ ಆಗಿಲ್ಲ.

ಲೌರಾ ಧಾರ್ಮಿಕ ಹಿನ್ನೆಲೆ ಹೊಂದಿದ್ದಾಳೆ. ಅವಳಿಗೆ ತನ್ನ ನಿರ್ಧಾರದ ಬಗ್ಗೆ ಯಾವುದೇ ಬೇಸರ ಇಲ್ಲ. ತನ್ನ ಜೀವನ ಸೆಟಲ್ ಮಾಡಿಕೊಳ್ಳಲು ಇದು ಒಳ್ಳೆಯ ಆಯ್ಕೆ ಎಂದು ಆಕೆ ಹೇಳಿದ್ದಾಳೆ. ‘ನನಗೆ ಆ ಬಗ್ಗೆ ಬೇಸರ ಇಲ್ಲ. ಪ್ರತಿಯಾಗಿ ಏನೂ ಸಿಗದೇ ಕೆಲವರು ಕನ್ಯತ್ವ ಕಳೆದುಕೊಳ್ಳುತ್ತಾರೆ. ನನಗೆ ಭವಿಷ್ಯವೇ ಸೆಟಲ್ ಆಗುತ್ತಿದೆ’ ಎಂದು ಅವಳು ಹೇಳಿದ್ದಾಗಿ ವರದಿ ಆಗಿದೆ.ಲೌರಾನ ಕನ್ಯತ್ವ ಪಡೆದುಕೊಳ್ಳಲು ಹಾಲಿವುಡ್​ನ ಹೀರೋ ಜೊತೆ ಅನೇಕ ರಾಜಕಾರಣಿಗಳು, ಉದ್ಯಮಿಗಳು ರೇಸ್​ನಲ್ಲಿ ಇದ್ದರು. ಅಂತಿಮವಾಗಿ 18 ಕೋಟಿ ರೂಪಾಯಿ ಕೊಡಲು ರೆಡಿ ಆದ ಹೀರೋಗೆ ಲೌರಾ ಸಿಕ್ಕಿದ್ದಾಳೆ. ಲೌರಾ ಇನ್ನೂ ಶಿಕ್ಷಣ ಪಡೆಯುತ್ತಿದ್ದಾಳೆ. ಈ ರೀತಿ ಬಂದ ಹಣವನ್ನು ಓದಿಗೆ ಬಳಕೆ ಮಾಡೋದಾಗಿ ಹೇಳಿದ್ದಾಳೆ. ಅಲ್ಲದೆ, ಭವಿಷ್ಯದಲ್ಲಿ ಹಣಕ್ಕಾಗಿ ಸುಗರ್ ಡ್ಯಾಡಿನ ಹುಡುಕಿಕೊಳ್ಳೋದಾಗಿ ಹೇಳಿದ್ದಾಳೆ. ಲೌರಾ ಕನ್ಯೆ ಹೌದೋ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಲು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಲಾಗಿದೆ. ಆಕೆ ಕನ್ಯತ್ವ ಹೊಂದಿದ್ದಾಳೆ ಎಂಬ ವರದಿ ಬಂದ ಬಳಿಕವೇ ಅವಳನ್ನು ಹರಾಜಿಗೆ ಇಡಲಾಗಿತ್ತು. ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಕೆಲವರು ಇದನ್ನು ಟೀಕಿಸಿದ್ದಾರೆ. ಆದರೆ, ಇದಕ್ಕೆ ಲೌರಾ ತಲೆಕೆಡಿಸಿಕೊಂಡಿಲ್ಲ.


Spread the love
Share:

administrator

Leave a Reply

Your email address will not be published. Required fields are marked *