Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪರಿಸರದ ಪಾಠ ಹೇಳುವ ಶಾಲೆ, ಮರ ಕಡಿಯುವ ನಿಜಸ್ಥಿತಿ: ಸಾಮಾಜಿಕ ಮಾಧ್ಯಮದಲ್ಲಿ ವೈರಲ್

Spread the love

ಪರಿಸರವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ..ಇಂತಹ ಅಗತ್ಯ ಪಾಠಗಳನ್ನು ಶಿಕ್ಷಕರು ಪಠ್ಯದ ಜೊತೆಗೆ ಹೇಳಿಕೊಡುತ್ತಾರೆ. ಕೆಲವರು ಶಾಲಾ ಕಾಲೇಜುಗಳ ಆವರಣ ಸೇರಿದಂತೆ ಶಾಲಾ ಕಾಂಪೌಂಡ್ ಗಳ ಮೇಲೆ ಈ ಬಗೆಗಿನ ಘೋಷವಾಕ್ಯಗಳಿರುತ್ತದೆ. ಆದರೆ ಕೆಲವೊಮ್ಮೆ ಈ ಘೋಷವಾಕ್ಯಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿಯೂ ಅಲ್ಲಿರುತ್ತದೆ ಎನ್ನುವುದನ್ನೂ ಒಪ್ಪಿಕೊಳ್ಳಲೇ ಬೇಕು. ಇದೀಗ ಇಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಶಾಲಾ ಪಕ್ಕದಲ್ಲಿರುವ ಸಾಲು ಸಾಲು ಮರಗಳನ್ನು ಕಡಿಯಲಾಗಿದ್ದು, ಆದರೆ ಕಾಂಪೌಂಡ್ ಗಳ ಮೇಲೆ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತಹ ಸ್ಲೋಗನ್ ಗಳಿವೆ.

rashmis diaryy ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಈ ಜನರು ಪ್ರಶ್ನೆಗಳನ್ನು ಕೇಳದಂತೆ ಮೌನವಾಗಿರಲು ಪ್ರಯತ್ನಿಸುತ್ತಿದ್ದಾರೆ. ಯಾರಾದರೂ ಪ್ರಶ್ನೆ ಕೇಳಲು ಧೈರ್ಯ ಮಾಡಿದಾಗಲೂಆ ಪ್ರಶ್ನೆಗಳು ಮೌನಕ್ಕೆ ಜಾರುತ್ತದೆ. ಈ ವೀಡಿಯೊವನ್ನು ಡಿಲೀಟ್ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ..ನನ್ನ ಬಗ್ಗೆ ಸುಳ್ಳು ವದಂತಿಗಳನ್ನು ಹರಡುತ್ತಿದ್ದಾರೆ. ಆದರೆ ಅವರು ಎಷ್ಟೇ ಪ್ರಯತ್ನಗಳನ್ನು ಮಾಡಿದರೂ, ಈ ವೀಡಿಯೊವನ್ನು ತೆಗೆದು ಹಾಕಲಾಗುವುದಿಲ್ಲ. ನಾನು ಮೌನವಾಗಿರುವಂತೆ ಮಾಡಲು ನಿಮ್ಮಿಂದ ಸಾಧ್ಯವಿಲ್ಲ. ನೀರಿಗಾಗಿ ಭಿಕ್ಷೆ ಬೇಡ್ತಿರೋ ವೃಕ್ಷವುದು ಇನ್ನೊಂದು. ವೃಕ್ಷ ಕಡಿದವನು ದುಡ್ಡಿಸ್ಕೊಂಡು ಮೀನ್ಸಾರು ಮಾಡ್ಕಂಡ್ ಉಂಡು ಮಲಗಿದ. ನಮ್ಮ ಶಿಕ್ಷಣ ವ್ಯವಸ್ಥೆಯು ತಾವು ಹೇಳಿದಂತೆ ನಡೆದುಕೊಳ್ಳುವುದಿಲ್ಲ. ಇನ್ನು ಈ ವಿದ್ಯಾರ್ಥಿಗಳು ಹೇಗೆ ಕಲಿಯಬಹುದು? ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಈ ವಿಡಿಯೋದಲ್ಲಿ ಶಾಲಾ ಕಾಂಪೌಂಡ್ ಗಳ ಮೇಲೆ ಪರಿಸರ ಸಂರಕ್ಷಣೆಯ ಸ್ಲೋಗನ್ ಗಳನ್ನು ಕಾಣಬಹುದು. ಆದರೆ ಅದರ ಪಕ್ಕದಲ್ಲಿರುವ ಸಾಲು ಸಾಲು ಮರಗಳನ್ನು ಕಡಿಯಲಾಗಿದೆ. ಈ ಬಗ್ಗೆ ಮಹಿಳೆಯೊಬ್ಬರು ಶಾಲೆಯ ಸುತ್ತಮುತ್ತಲಿನ ಪರಿಸರದಲ್ಲಿ ಕಂಡು ಬಂದ ವಾಸ್ತವ ಸ್ಥಿತಿಯನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದಾಳೆ.

ಸೋಶಿಯಲ್ ಮೀಡಿಯಾ ಬಳಕೆ ದಾರರು ಹೀಗೆ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು, ಪುಸ್ತಕದಲ್ಲಿ ಇದ್ದರೂ, ಸಮಾಜದಲ್ಲಿ ಇರೋದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ರೀತಿಯ ದೃಶ್ಯ ನೋಡಲು ನಿಜಕ್ಕೂ ಬೇಸರವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, ಈ ಪ್ರಪಂಚದಲ್ಲಿ ಕೆಟ್ಟ ಶಿಕ್ಷಣವಿದ್ದರೆ ಅದು ಭಾರತದಲ್ಲಿ ಮಾತ್ರ ಎಂದು ಕಟುವಾಸ್ತವತೆಯನ್ನು ಬಿಚ್ಚಿಟ್ಟಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *